ಕೊರೋನಾದಿಂದ ಸಾವು ಹೆಚ್ಚಳಕ್ಕೆ ಸರ್ಕಾರದ ನಿರ್ಲಕ್ಷ್ಯ ಕಾರಣ..?

By Kannadaprabha News  |  First Published Aug 1, 2020, 11:16 AM IST

ಕೊರೋನಾ ಸೋಂಕಿತರಿಗೆ ಕಿಮ್ಸ್‌ ಸೇರಿದಂತೆ ವಿವಿಧ ಖಾಸಗಿ ಆಸ್ಪತ್ರೆಗಲ್ಲಿ ಸರಿಯಾದ ಬೆಡ್‌ ವ್ಯವಸ್ಥೆ ಮಾಡುತ್ತಿಲ್ಲ|  ಸರಿಯಾದ ಚಿಕಿತ್ಸೆಯೂ ಸಿಗದೆ ಸೋಂಕಿತರ ಸಾವು| ಕಿಮ್ಸ್‌ನ 32 ವೆಂಟಿಲೇಟರ್‌ಗಳು ಈಗಾಗಲೇ ಬಳಕೆಯಲ್ಲಿವೆ. 800 ಬೆಡ್‌ಗಳ ಕೋವಿಡ್‌ ಕೇರ್‌ ಸೆಂಟರ್‌ ತೆರೆದರೂ ಇನ್ನೂ ವೆಂಟಿಲೇಟರ್‌ ವ್ಯವಸ್ಥೆ ಮಾಡದ ಜಿಲ್ಲಾಡಳಿತ| 


ಹುಬ್ಬಳ್ಳಿ(ಆ.01): ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಏರುತ್ತಿರುವ ಜತೆಗೆ ಸೋಂಕಿಗೆ ಬಲಿಯಾಗುತ್ತಿರುವವರ ಸಂಖ್ಯೆಯಲ್ಲಿಯೂ ಗಣನೀಯ ಏರಿಕೆಯಾಗುತ್ತಿದೆ. ಕಳೆದ ಒಂದು ವಾರದಿಂದ ಈಚೆಗೆ ನಿತ್ಯ 5 ರಿಂದ 8 ಜನರು ಬಲಿಯಾಗುತ್ತಿದ್ದಾರೆ. ಸಾವಿನ ಸಂಖ್ಯೆಯಲ್ಲಿನ ಏರಿಕೆಗೆ ರಾಜ್ಯ ಸರ್ಕಾರದ ನಿಷ್ಕಾಳಜಿಯೇ ಕಾರಣ ಎನ್ನುವ ಆರೋಪ ಕೇಳಿ ಬಂದಿದೆ.

ಕೊರೋನಾ ಸೋಂಕಿತರಿಗೆ ಕಿಮ್ಸ್‌ ಸೇರಿದಂತೆ ವಿವಿಧ ಖಾಸಗಿ ಆಸ್ಪತ್ರೆಗಲ್ಲಿ ಸರಿಯಾದ ಬೆಡ್‌ ವ್ಯವಸ್ಥೆ ಮಾಡುತ್ತಿಲ್ಲ. ಸಾಲದ್ದಕ್ಕೆ ವೆಂಟಿಲೇಟರ್‌ ಫುಲ್‌ ಎಂದು ಬೋರ್ಡ್‌ ಹಾಕಲಾಗುತ್ತಿದೆ. ಹೀಗಾಗಿ ಸರಿಯಾದ ಚಿಕಿತ್ಸೆಯೂ ಸಿಗದೆ ಸೋಂಕಿತರು ಸಾವನ್ನಪ್ಪುತ್ತಿದ್ದಾರೆ. ಕಿಮ್ಸ್‌ನ 32 ವೆಂಟಿಲೇಟರ್‌ಗಳು ಈಗಾಗಲೇ ಬಳಕೆಯಲ್ಲಿವೆ. 800 ಬೆಡ್‌ಗಳ ಕೋವಿಡ್‌ ಕೇರ್‌ ಸೆಂಟರ್‌ ತೆರೆದರೂ ಇನ್ನೂ ವೆಂಟಿಲೇಟರ್‌ ವ್ಯವಸ್ಥೆ ಮಾಡದೆ ಜಿಲ್ಲಾಡಳಿತ ಎಡವಿದೆ. ರಾಜ್ಯ ಸರ್ಕಾರಕ್ಕೆ 40 ಹೆಚ್ಚುವರಿ ವೆಂಟಿಲೇಟರ್‌ ನೀಡಿ ಎಂದು ಜಿಲ್ಲಾಡಳಿತ ಮನವಿ ಮಾಡಿದೆ. ಆದರೆ ಅಲ್ಲಿಂದ ಈವರೆಗೂ ಸರ್ಕಾರದಿಂದ ಪ್ರತಿಕ್ರಿಯೆ ಬಂದಿಲ್ಲ ಎಂದು ಹೇಳಲಾಗಿದೆ.

Tap to resize

Latest Videos

undefined

Fact Check : ಕೊರೋನಾ ರೋಗಿಗಳ ಕಿಡ್ನಿ ಮಾರಾಟ ಮಾಡಲಾಗುತ್ತಿದೆಯಾ?

ನಿತ್ಯ ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ಬರುತ್ತಿರುವ ರೋಗಿಗಳಿಗೆ ಸೂಕ್ತ ಬೆಡ್‌ ವ್ಯವಸ್ಥೆ ಕಲ್ಪಿಸಲಾಗುತ್ತಿಲ್ಲ. ಇದರಿಂದ ನಿತ್ಯ ಸಾವಿನ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ ಎಂದು ವೈದ್ಯರು ವಿಶ್ಲೇಷಿಸುತ್ತಿದ್ದಾರೆ. ಆದಕಾರಣ ಜಿಲ್ಲೆಗೀಗ ವೆಂಟಿಲೇಟರ್‌ ವ್ಯವಸ್ಥೆ ಮಾಡುವ ಅಗತ್ಯ ಹಾಗೂ ಅನಿವಾರ್ಯವಿದೆ. ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ವೈದ್ಯರೇ ತಿಳಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ 124 ಮಂದಿ ಕೊರೋನಾ ಸೋಂಕಿತರು ಬಲಿಯಾಗಿದ್ದಾರೆ.
 

click me!