1, 026 ಆಶಾ ಕಾರ್ಯಕರ್ತರಿಗೆ ಸೀರೆ ಹಂಚಿ ಷಷ್ಠ್ಯಬ್ಧಿ ಆಚರಣೆ

By Kannadaprabha News  |  First Published Aug 1, 2020, 10:59 AM IST

ಉಡುಪಿ ನಗರದ ಹಿರಿಯ ದಸ್ತಾವೇಜು ಬರಹಗಾರ ರತ್ನಕುಮಾರ್‌ ಅವರು ಶುಕ್ರವಾರ, ಕೊರೋನಾದ ವಿರುದ್ಧ ಹೋರಾಡುತ್ತಿರುವ ಜಿಲ್ಲೆಯ 1, 026 ಆಶಾ ಕಾರ್ಯಕರ್ತೆಯರಿಗೆ ಸೀರೆಗಳನ್ನು ವಿತರಿಸಿ ಗೌರವಿಸುವ ಮೂಲಕ ತಮ್ಮ ಷಷ್ಠ್ಯಾಬ್ಧಿ (60 ವರ್ಷ ಪೂರ್ಣ)ಯನ್ನು ವಿಶಿಷ್ಟರೀತಿಯಲ್ಲಿ ಆಚರಿಸಿದರು.


ಉಡುಪಿ(ಆ.01): ನಗರದ ಹಿರಿಯ ದಸ್ತಾವೇಜು ಬರಹಗಾರ ರತ್ನಕುಮಾರ್‌ ಅವರು ಶುಕ್ರವಾರ, ಕೊರೋನಾದ ವಿರುದ್ಧ ಹೋರಾಡುತ್ತಿರುವ ಜಿಲ್ಲೆಯ 1, 026 ಆಶಾ ಕಾರ್ಯಕರ್ತೆಯರಿಗೆ ಸೀರೆಗಳನ್ನು ವಿತರಿಸಿ ಗೌರವಿಸುವ ಮೂಲಕ ತಮ್ಮ ಷಷ್ಟಾ್ಯಬ್ಧಿ (60 ವರ್ಷ ಪೂರ್ಣ)ಯನ್ನು ವಿಶಿಷ್ಟರೀತಿಯಲ್ಲಿ ಆಚರಿಸಿದರು.

ರತ್ನ ಕುಮಾರ್‌ - ಸುಜಾತ ದಂಪತಿ ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಜಿಲ್ಲಾಡಳಿತಕ್ಕೆ ಸಾಂಕೇತಿಕವಾಗಿ ಸೀರೆಗಳನ್ನು ಆಶಾ ಕಾರ್ಯಕರ್ತರಿಗೆ ಹಸ್ತಾಂತರಿಸಿದ್ದಾರೆ.

Latest Videos

undefined

ಮೂರುಸ್ಥಾನ ಭರ್ತಿಗಷ್ಟೇ ಸಂಪುಟ ವಿಸ್ತರಣೆ ಸೀಮಿತ: ನಳಿನ್

ಶಾಸಕ ಕೆ. ರಘುಪತಿ ಭಟ್‌, ಜಿಲ್ಲಾಧಿಕಾರಿ ಜಿ. ಜಗದೀಶ್‌ ಅವರು, ಕೊರೋನಾ ವಾರಿಯರ್‌ಗಳನ್ನು ಬಾಯಿ ಮಾತಿನಲ್ಲಿ ಹೊಗಳುವುದಕ್ಕಿಂತ ಕಾರ್ಯರೂಪದಲ್ಲಿ ಹೊಗಳುವುದು ಮುಖ್ಯ. ಇದರಿಂದ ಅವರಲ್ಲಿ ಹೆಮ್ಮೆ ಮತ್ತು ಇನ್ನಷ್ಟುಹುರುಪು ಮೂಡುತ್ತದೆ ಎಂದು ಅಭಿಪ್ರಾಯಪಟ್ಟರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸುಧೀರ್‌ಚಂದ್ರ ಸೂಡ, ಜಿಲ್ಲಾ ನೋಡಲ್‌ ಅಧಿಕಾರಿ ಡಾ. ಪ್ರಶಾಂತ ಭಟ್‌, ವೈದ್ಯಾಧಿಕಾರಿ ಡಾ. ಪ್ರೇಮಾನಂದ್‌ ಮುಂತಾದವರಿದ್ದರು.

click me!