ಕೋವಿಡ್‌ ಪಾಸಿಟಿವ್‌ ಎಂದು ಅಂತ್ಯಕ್ರಿಯೆ: ವರದಿ ನೆಗೆಟಿವ್‌!

By Kannadaprabha NewsFirst Published Aug 1, 2020, 10:21 AM IST
Highlights

ಕೋವಿಡ್‌ ವರದಿ ಬರುವ ಮೊದಲೇ ನಗರದ ಯುವತಿಯೊಬ್ಬಳ ಮೃತದೇಹದ ಅಂತ್ಯಕ್ರಿಯೆಯನ್ನು ಕೋವಿಡ್‌ ನಿಯಮಾವಳಿ ಪ್ರಕಾರ ಆರೋಗ್ಯ ಇಲಾಖೆ ಅಂತ್ಯಕ್ರಿಯೆ ನಡೆಸಿದ್ದು, ಇದೀಗ ವರದಿ ನೆಗೆಟಿವ್‌ ಬಂದ ಬಳಿಕ ಕುಟುಂಬಸ್ಥರು ಇಲಾಖೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಿಕ್ಕಮಗಳೂರು(ಆ.01): ಕೋವಿಡ್‌ ವರದಿ ಬರುವ ಮೊದಲೇ ನಗರದ ಯುವತಿಯೊಬ್ಬಳ ಮೃತದೇಹದ ಅಂತ್ಯಕ್ರಿಯೆಯನ್ನು ಕೋವಿಡ್‌ ನಿಯಮಾವಳಿ ಪ್ರಕಾರ ಆರೋಗ್ಯ ಇಲಾಖೆ ಅಂತ್ಯಕ್ರಿಯೆ ನಡೆಸಿದ್ದು, ಇದೀಗ ವರದಿ ನೆಗೆಟಿವ್‌ ಬಂದ ಬಳಿಕ ಕುಟುಂಬಸ್ಥರು ಇಲಾಖೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜ್ವರದಿಂದ ಬಳಲುತ್ತಿದ್ದ ಗೌರಿ ಕಾಲುವೆ ಬಡಾವಣೆಯ 20 ವರ್ಷದ ಅಂಗವಿಕಲ ಯುವತಿಯೊಬ್ಬಳನ್ನು ಜು.24ರಂದು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅದೇ ದಿನ ಮೃತಪಟ್ಟಿದ್ದಾರೆ.

ಹಗ್ಗದಿಂದ ಎಳೆದು ತಂದು ಸೋಂಕಿತನ ಅಂತ್ಯಕ್ರಿಯೆ!

ಮೃತ ಯುವತಿಯ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತಾದರೂ ವರದಿ ಬರುವ ಮೊದಲೇ ಆರೋಗ್ಯ ಇಲಾಖೆಯವರು ಕೋವಿಡ್‌ ನಿಯಮಾವಳಿ ಪ್ರಕಾರ ಅಂತ್ಯಸಂಸ್ಕಾರ ಮಾಡಿದ್ದಾರೆ.

ಗುರುವಾರ ಯುವತಿಯ ಕೋವಿಡ್‌ ಟೆಸ್ಟ್‌ನ ವರದಿ ನೆಗೆಟಿವ್‌ ಎಂದು ಬಂದಿದೆ. ಇಲಾಖೆ ಕ್ರಮಕ್ಕೆ ಬೇಸರ ವ್ಯಕ್ತಪಡಿಸಿರುವ ಆಕೆಯ ಪೋಷಕರು ಕೊನೆಗೆ ಮಗಳ ಮುಖವನ್ನೂ ನೋಡಲು ಬಿಡಲಿಲ್ಲ ಅಳಲು ತೋಡಿಕೊಂಡಿದ್ದಾರೆ.

click me!