ನಕಲಿ ದಾಖಲೆ ಸೃಷ್ಟಿಸಿ ಎಲೆಕ್ಟ್ರಾನಿಕ್‌ ಅಂಗಡಿಗೆ ಮೋಸ: ಸರ್ಕಾರಿ ನೌಕರ ಅರೆಸ್ಟ್‌

By Kannadaprabha News  |  First Published Nov 27, 2020, 12:47 PM IST

ಬಂಧಿತ ವ್ಯಕ್ತಿಯಿಂದ 4,15 ಲಕ್ಷ ರು. ಮೌಲ್ಯದ 2 ಜೆರಾಕ್ಸ್‌ ಯಂತ್ರ, 5 ಪ್ರಿಂಟರ್‌, 2 ಯುಪಿಎಸ್‌ ಮತ್ತು 6 ಬ್ಯಾಟರಿ ವಶ| ಯಂತ್ರೋಪಕರಣ ಮಾರಾಟ ಮಾಡುವ ಅಂಗಡಿಗಳಿಂದ ನಕಲಿ ದಾಖಲೆ ಸೃಷ್ಟಿ| ದಾಖಲೆಯ ಪ್ರಕರಣ ಹಣಕ್ಕಾಗಿ ಇಲಾಖೆಗೆ ಬಿಲ್‌ ಸಲ್ಲಿಸಿದಾಗ ವಿಷಯ ಬಹಿರಂಗ| 


ಶಿವಮೊಗ್ಗ(ನ.27): ಎಲೆಕ್ಟ್ರಾನಿಕ್‌ ಯಂತ್ರೋಪಕರಣಗಳನ್ನು ಮಾರಾಟ ಮಾಡುವ ಅಂಗಡಿಗೆ ನಕಲಿ ದಾಖಲೆ ಸೃಷ್ಟಿಸಿ ಲಕ್ಷಾಂತರ ರು. ವಂಚಿಸಿದ ಆರೋಪದ ಮೇಲೆ ಸರ್ಕಾರಿ ನೌಕರರೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ವ್ಯಕ್ತಿಯಿಂದ 4,15 ಲಕ್ಷ ರು. ಮೌಲ್ಯದ 2 ಜೆರಾಕ್ಸ್‌ ಯಂತ್ರ, 5 ಪ್ರಿಂಟರ್‌, 2 ಯುಪಿಎಸ್‌ ಮತ್ತು 6 ಬ್ಯಾಟರಿಗಳನ್ನು ವಶಕ್ಕೆ ಪಡೆದಿದ್ದಾರೆ.

ಶಿಕಾರಿಪುರದ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಕಚೇರಿಯ ಸಿಬ್ಬಂದಿ ಎಂದು ಗುರುತಿಸಲಾಗಿದೆ. ದುರ್ಗಿಗುಡಿಯ ಇಮ್ಯಾಜಿನ್‌ ಟೆಕ್ನಾಲಜೀಸ್‌ ಮತ್ತು ವೆಂಕಟೇಶ ನಗರದ ಹೈಟೆಕ್‌ ಸೆಲ್ಯೂಷನ್‌ ಎಂಬ ಎಲೆಕ್ಟ್ರಾನಿಕ್‌ ಯಂತ್ರೋಪಕರಣಗಳನ್ನು ಮಾರಾಟ ಮಾಡುವ ಅಂಗಡಿಗಳಿಂದ ನಕಲಿ ದಾಖಲೆ ಸೃಷ್ಟಿಸಿದ ಈತ ಕಚೇರಿಗೆಂದು ಯಂತ್ರೋಪಕರಣಗಳನ್ನು ತೆಗೆದುಕೊಂಡು ಹೋಗಿದ್ದ. ಆ ಬಳಿಕ ಹಣ ಪಾವತಿ ಮಾಡಿರಲಿಲ್ಲ. ಈ ದಾಖಲೆಯ ಪ್ರಕರಣ ಹಣಕ್ಕಾಗಿ ಇಲಾಖೆಗೆ ಬಿಲ್‌ ಸಲ್ಲಿಸಿದಾಗ ವಿಷಯ ಗೊತ್ತಾಯಿತು.

Tap to resize

Latest Videos

ಸ್ಪೆಲ್ಲಿಂಗ್ ಮಿಸ್ಟೇಕ್ : ದುಬೈ ವಿಮಾನ ಪ್ರಯಾಣವೇ ರದ್ದು

ಈ ಸಂಬಂಧ ಜಯನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿತ್ತು. ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿವೈಎಸ್‌ಪಿ ಉಮೇಶ್‌ ಈಶ್ವರ್‌ ನಾಯಕ್‌ ಮಾರ್ಗದರ್ಶನದಲ್ಲಿ ಕೋಟೆ ಸಿಪಿಐ ಚಂದ್ರಶೇಖರ್‌ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು.

ಈ ತಂಡವು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಮಾಲು ಸಹಿತ ಬಂಧಿಸಿ ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದು, ಆತನನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ ಎಂದು ಎಸ್ಪಿ ಕೆ.ಎಂ.ಶಾಂತರಾಜು ತಿಳಿಸಿದ್ದಾರೆ.
 

click me!