ಸಾರಿಗೆ ನೌಕರರಿಗೆ ವೇತನ ಪರಿಷ್ಕರಣೆ ಸರ್ಕಾರ ಬದ್ಧ: ಸಚಿವ ಶ್ರೀರಾಮುಲು

By Kannadaprabha NewsFirst Published Dec 13, 2022, 2:30 PM IST
Highlights

ಸಾರಿಗೆ ಇಲಾಖೆ ಸಿಬ್ಬಂದಿಗಳ ವೇತನ ಪರಿಷ್ಕರಣೆ ಬಹಳ ದಿನಗಳ ಬೇಡಿಕೆಯಾಗಿದೆ. ಸಾರಿಗೆ ಸಚಿವನಾದ ಮೇಲೆ ಸಿಬ್ಬಂದಿ ಬೇಡಿಕೆಗೆ ಸ್ಪಂದಿಸಿದ್ದು, ಆದಷ್ಟು ಬೇಗ ಭರವಸೆ ಈಡೇರಿಸುವೆ ಎಂದ ಸಚಿವ ಬಿ.ಶ್ರೀರಾಮುಲು 

ಮಾನ್ವಿ(ಡಿ.13):  ರಾಜ್ಯ ಸಾರಿಗೆ ಇಲಾಖೆಯ 4 ನಿಗಮಗಳಲ್ಲಿ ಕರ್ತವ್ಯ ನಿರ್ವಹಿಸುವ ಸಾರಿಗೆ ಇಲಾಖೆಯ ಸಿಬ್ಬಂದಿಗಳಿಗೆ ವೇತನ ಪರಿಷ್ಕರಣೆ 4 ಸಾವಿರ ಕೋಟಿ ಅನುದಾನವನ್ನು 2 ತಿಂಗಳೂಳಗೆ ಜಾರಿಗೊಳಿಸಲು ರಾಜ್ಯ ಸರ್ಕಾರ ಬದ್ದವಾಗಿದೆ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಭರವಸೆ ನೀಡಿದರು.

ಪಟ್ಟಣದಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ 6 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಿರುವ ಹೊಸ ಬಸ್‌ ಘಟಕ ಮತ್ತು ಅಪಘಾತ ರಹಿತ ಚಾಲಕರಿಗೆ ಬೆಳ್ಳಿ ಪದಕ, ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಾರಿಗೆ ಇಲಾಖೆ ಸಿಬ್ಬಂದಿಗಳ ವೇತನ ಪರಿಷ್ಕರಣೆ ಬಹಳ ದಿನಗಳ ಬೇಡಿಕೆಯಾಗಿದೆ. ಸಾರಿಗೆ ಸಚಿವನಾದ ಮೇಲೆ ಸಿಬ್ಬಂದಿ ಬೇಡಿಕೆಗೆ ಸ್ಪಂದಿಸಿದ್ದು, ಆದಷ್ಟು ಬೇಗ ಭರವಸೆ ಈಡೇರಿಸುವೆ ಎಂದರು.

ಕೆಎಸ್‌ಆರ್‌ಟಿಸಿ ಹೊಸ ಬಸ್‌ಗಳಿಗೆ ಸೂಕ್ತ ಬ್ರಾಂಡ್‌ ನೇಮ್‌ ನೀಡಿ: 25,000 ಬಹುಮಾನ ಗೆಲ್ಲಿ

ಕಲ್ಯಾಣ ಕರ್ನಾಟಕಕ್ಕೆ 650 ಹೊಸ ಬಸ್‌:

ಸಾರಿಗೆಯ 4 ನಿಗಮಗಳ ವೇತನ ಪರಿಷ್ಕರಣೆಗೆ 4 ಸಾವಿರ ಕೋಟಿ ರು. ಅವಶ್ಯಕತೆಯಿದೆ. ಇದರ ಬಗ್ಗೆ ಸಿಎಂ ಜೊತೆ ಮಾತನಾಡಿ, ಅಂತಿಮ ರೂಪಕ್ಕೆ ತಂದಿರುವೆ. ಸಾರಿಗೆಯ ಸಿಬ್ಬಂದಿಗಳಿಗೆ ಪ್ರತಿ ತಿಂಗಳು 1 ನೇ ತಾರೀಖಿನಂದು ವೇತನ ಬಿಡುಗಡೆಗೆ ಕ್ರಮ ಕೈಗೊಳ್ಳಲು ನಿಗಮದ ಮುಖ್ಯ ನಿಯಂತ್ರಣಾಧಿಕಾರಿಗೆ ಸೂಚನೆ ನೀಡಿರುವೆ. 50 ಲಕ್ಷದಿಂದ 1.ಕೋಟಿ ರು. ವರಗೆ ವಿಮೆ ಪರಿಹಾರ ಸೌಲಭ್ಯ ಕಲ್ಪಿಸಲಾಗುತ್ತದೆ. ಇನ್ನೂ 3- 4 ತಿಂಗಳೂಳಗೆ ಕಲ್ಯಾಣ ಕರ್ನಾಟಕಕ್ಕೆ 650 ಹೊಸ ಬಸ್‌ಗಳನ್ನು ಖರೀದಿಸಿ ಸಂಚಾರಕ್ಕೆ ಅನುವು ಮಾಡಿಕೂಡಲಾಗುತ್ತದೆ. 150 ವೋಲ್ವೊ ಬಸ್‌ಗಳನ್ನು ಖರೀದಿಸಿ ಕಲಬುರಗಿ, ರಾಯಚೂರು, ಬೀದರ್‌ ಭಾಗಕ್ಕೆ ಆಧ್ಯತೆ ನೀಡಲಾಗುತ್ತದೆ ಎಂದರು.

ಶಾಸಕ ರಾಜಾ ವೆಂಕಟಪ್ಪ ನಾಯಕ ಅವರು ಮಾನ್ವಿ ಪಟ್ಟಣದಲ್ಲಿ ಸಿಟಿ ಬಸ್‌ ಮತ್ತು ಬೆಂಗಳೂರಿಗೆ ಗುಣಮಟ್ಟದ ಬಸ್‌ಗಳ ಸಂಚಾರಕ್ಕೆ ಅನುಕೂಲ ಮಾಡಿಕೂಡಬೇಕೆಂದು ಕೇಳಿದ್ದಾರೆ. ಇನ್ನೂ 3-4 ತಿಂಗಳಲ್ಲಿ 650 ಬಸ್‌ಗಳ ಖರೀದಿ ಮಾಡುತ್ತಿದ್ದು, ಆಗ ಮಾನ್ವಿಗೆ ಸಿಟಿ ಬಸ್‌ ಕೊಡುತ್ತೇವೆ. ಅಲ್ಲದೆ ಬೆಂಗಳೂರಿಗೆ 150 ವೋಲ್ವೋ ಬಸ್‌ಗಳನ್ನು ಖರೀದಿ ಮಾಡಿದಾಗ ರಾಯಚೂರು, ಕಲಬುರಗಿಗೆ ಹೆಚ್ಚಿನ ಆದ್ಯತೆ ನೀಡಿ 6 ವೋಲ್ವೋ ಬಸ್‌ಗಳನ್ನು ನೀಡುವುದಾಗಿ ತಿಳಿಸಿದರು.
ಶಾಸಕರು,ಮಾಜಿ ಶಾಸಕರು, ವಿವಿಧ ಪಕ್ಷಗಳ ಮುಖಂಡರು, ಇಲಾಖೆಯ ಅಧಿಕಾರಿ, ಸಿಬ್ಬಂದಿ ವರ್ಗದವರು ಸಾರ್ವಜನಿಕರು ಇದ್ದರು.
 

click me!