ಚಿತ್ತಾಪುರ: ರಸ್ತೆ ದುರಸ್ತಿ ವೆಚ್ಚಕ್ಕೆ ಹೊಣೆ ಯಾರು?, ಪ್ರಿಯಾಂಕ್‌ ಖರ್ಗೆ

By Kannadaprabha News  |  First Published Dec 13, 2022, 1:30 PM IST

ವಾಹನಗಳಲ್ಲಿ ಓವರ್‌ ಲೋಡ್‌ ಹಾಗೂ ನಿರಂತರ ಸಾಗಾಣಿಕೆಯಿಂದ ಗ್ರಾಮೀಣ ಭಾಗದ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿವೆ. ನಮ್ಮಲ್ಲಿ 35 ಕೋಟಿಗೂ ಹೆಚ್ಚಿನ ವೆಚ್ಚದ ರಸ್ತೆಗಳು ಹಾಳಾಗಿವೆ. ಇದರ ದುಡ್ಡನ್ನು ಯಾರು ಕೊಡುತ್ತಿರಿ:  ಪ್ರಿಯಾಂಕ್‌ ಖರ್ಗೆ


ಚಿತ್ತಾಪುರ(ಡಿ.13):  ತಾಲೂಕಿನಲ್ಲಿ ಅಕ್ರಮವಾಗಿ ಮರಳು ಹಾಗೂ ಮುರುಮ ಸಾಗಣೆಯಿಂದ ನಮ್ಮ ಕ್ಷೇತ್ರದ ಸುಮಾರು 33 ಕೋಟಿ ವೆಚ್ಚದ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿದ್ದು, ಇದಕ್ಕೆ ಕಾರಣ ಅಕ್ರಮ ಮರಳು ಸಾಗಾಣಿಯಾಗಿದ್ದು ಇದರಿಂದ ಆಗಿರುವ ರಸ್ತೆಗಳ ದುರಸ್ತಿ ವೆಚ್ಚವನ್ನು ಇಲಾಖೆಯವರು ಭರಿಸುವರೇ ಅಥವಾ ಗುತ್ತಿಗೆದಾರರು ಭರಿಸುವರೇ ಉತ್ತರ ನೀಡಿ ಎಂದು ಸಭೆಯಲ್ಲಿ ಶಾಸಕ ಪ್ರಿಯಾಂಕ್‌ ಖರ್ಗೆ ಪ್ರಶ್ನಿಸಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ಅಕ್ರಮ ಮರಳು ಕುರಿತಾಗಿ ಹಾಗೂ ಮರಳು ಟಾಸ್ಕ್‌ ಫೋರ್ಸ್‌ ಸಮಿತಿಯವರಿಗೆ ಹಾಗೂ ಮುರುಮ ಗುತ್ತಿಗೆದಾರರ ಸಭೆಯಲ್ಲಿ ಮಾತನಾಡಿದ ಅವರು, ವಾಹನಗಳಲ್ಲಿ ಓವರ್‌ ಲೋಡ್‌ ಹಾಗೂ ನಿರಂತರ ಸಾಗಾಣಿಕೆಯಿಂದ ಗ್ರಾಮೀಣ ಭಾಗದ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿವೆ. ನಮ್ಮಲ್ಲಿ 35 ಕೋಟಿಗೂ ಹೆಚ್ಚಿನ ವೆಚ್ಚದ ರಸ್ತೆಗಳು ಹಾಳಾಗಿವೆ. ಇದರ ದುಡ್ಡನ್ನು ಯಾರು ಕೊಡುತ್ತಿರಿ ಎಂದು ಅವರು ಪ್ರಶ್ನಿಸಿದರು.

Tap to resize

Latest Videos

undefined

ಕರ್ನಾಟಕದಲ್ಲಿ ಮೋದಿ ಆಟ ನಡೆಯಲ್ಲ: ಪ್ರಿಯಾಂಕ್‌ ಖರ್ಗೆ

ಮರಳು ಅಥವಾ ಮುರುಮ ಸಾಗಾಣಿಕೆಗೆ ಸರ್ಕಾರ ಮಾರ್ಗಸೂಚಿ ಇದೆ. ಆದರೆ, ಇಲ್ಲಿ ಇದ್ಯಾವುದು ಪಾಲನೆಯಾಗುತ್ತಿರುವುದು ಕಂಡು ಬರುತ್ತಿಲ್ಲಾ. ದಿನದ ಇಪ್ಪತ್ನಾಲ್ಕು ಗಂಟೆ ರಾಜಾರೋಷವಾಗಿ ಮರಳು ಹೊಡೆಯುತ್ತಿದ್ದರೂ ಅಧಿಕಾರಿಗಳು ಏನೂ ಮಾಡದಿರುವುದು ನೋಡಿದರೆ ಅಕ್ರಮ ಮಾಡುವವರ ಮೇಲೆ ಅಧಿಕಾರಿಗಳ ನಿಯಂತ್ರಣ ಇಲ್ಲದಿರುವುದು ಕಂಡು ಬರುತ್ತಿದೆ. ಇದರಿಂದ ನಮ್ಮಲ್ಲಿ ಅಕ್ರಮಗಳು ಹೆಚ್ಚಾಗಲು ಕಾರಣವಾಗಿದೆ. ಅಧಿಕಾರಿಗಳಿಗೆ ಸಂಬಳವನ್ನು ಸರ್ಕಾರ ನೀಡುತ್ತಿದೆಯೋ ಅಥವಾ ಗುತ್ತಿಗೆದಾರರು ನೀಡುತ್ತಿದ್ದಾರೋ ಗೊತ್ತಾಗುತ್ತಿಲ್ಲಾ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಕ್ರಮವನ್ನು ತಡೆಯುವದಕ್ಕಾಗಿಯೇ ಸರ್ಕಾರ ಜಿಪಿಎಸ್‌ ಅಳವಡಿಸಿದೆ. ಕಾನೂನು ಇದೆ, ಅಷ್ಟಾದರೂ ಕೂಡಾ ಅಕ್ರಮವನ್ನು ತಡೆಯಲು ಪೊಲೀಸ್‌ ಇಲಾಖೆ, ಕಂದಾಯ, ಗಣಿ ಮತ್ತು ಭೂ ವಿಜ್ಞಾನ, ಅರ್‌ಟಿಓ ಸೇರಿದಂತೆ ಎಲ್ಲಾ ಇಲಾಖೆಗಳು ಇದ್ದರೂ ಕೂಡಾ ಅಕ್ರಮವನ್ನು ತಡೆಯಲು ಸಂಪೂರ್ಣವಾಗಿ ವಿಫಲವಾಗಿವೆ. ಅರ್‌ಟಿಓ ಅಧಿಕಾರಿಗಳಂತೂ ಸಂಪೂರ್ಣವಾಗಿ ಬೇಜವಾಬ್ದಾರಿ ತೋರಿಸುತ್ತಿದ್ದಾರೆ. ವರ್ಷದಲ್ಲಿ ಕೇವಲ 121 ಪ್ರಕರಣಗಳು ದಾಖಲಿಸಿರುವುದು ಇವರ ಕಾರ್ಯವೈಖರಿ ತೋರಿಸುತ್ತದೆ. ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದ ಸಮಯದಲ್ಲಿ ಮೂರು ತಿಂಗಳಲ್ಲಿ 900 ಪ್ರಕರಣಗಳನ್ನು ದಾಖಲಿಸುವಂತೆ ಮಾಡಿದ್ದೇ. ವಿರ್ಪಯಾಸ ಎಂದರೆ ಲೈಸನ್ಸ್‌ ರದ್ದಾಗಿರುವ ಎರಡು ಟಿಪ್ಪರ್‌ಗಳು ಇನ್ನು ಕೂಡಾ ರಾಜಾರೊಷವಾಗಿ ರಸ್ತೆಯಲ್ಲಿ ಓಡಾಡುತ್ತಿವೆ. ಇದು ಅವರ ಕಣ್ಣಿಗೆ ಕಾಣುತ್ತಿಲ್ಲವೇ ಎಂದು ಅಧಿಕಾರಿಗಳಿಗೆ ಪ್ರಶ್ನಿಸಿದರು.

ಮುಂದೆ ಸರ್ಕಾರದ ನಿಯಮಾವಳಿಯಂತೆ ಮರಳು ಸಾಗಣಿ ನಡೆಯಬೇಕು. ರಾತ್ರಿ 8 ಗಂಟೆ ನಂತರ ನಮ್ಮಲ್ಲಿ ಎಲ್ಲೂ ಒಂದು ಗಾಡಿ ಕಾಣಬಾರದು. ಒಂದು ಇದಕ್ಕೂ ಮೀರಿ ವಾಹನಗಳು ನಡೆದರೆ ಅದಕ್ಕೆ ಅಧಿಕಾರಿಗಳನ್ನೆ ಹೊಣೆ ಮಾಡುವುದಾಗಿ ಎಚ್ಚರಿಕೆ ನೀಡಿದರು. ತಹಸೀಲ್ದಾರ ಉಮಾಕಾಂತ ಹಳ್ಳೆ, ಶಹಬಾದ ಇಓ ಡಾ. ಬಸಲಿಂಗಪ್ಪ ಡಿಗ್ಗಿ, ಡಿಸಿಸಿ ಬ್ಯಾಂಕ್‌ ನಿರ್ದೆಶಕ ಬಸವರಾಜ ಪಾಟೀಲ್‌ ಹೆರೂರ ವೇದಿಕೆಯಲ್ಲಿದ್ದರು.
 

click me!