ನಿಷೇಧಾಜ್ಞೆ ನಡುವೆಯೇ ಗೂಡ್ಸ್ ವಾಹನ ಓಡಾಟ: ಚಾಲಕ ವಶಕ್ಕೆ

Kannadaprabha News   | Asianet News
Published : May 25, 2020, 01:09 PM IST
ನಿಷೇಧಾಜ್ಞೆ ನಡುವೆಯೇ ಗೂಡ್ಸ್ ವಾಹನ ಓಡಾಟ: ಚಾಲಕ ವಶಕ್ಕೆ

ಸಾರಾಂಶ

ನಿಷೇಧಾಜ್ಞೆ ಉಲ್ಲಂಘಿಸಿ ಎಳನೀರು ವಹಿವಾಟು ನಡೆಸಿ ಸಾಗಾಣಿಕೆ ಮಾಡುತ್ತಿದ್ದ ಮಹಾರಾಷ್ಟ್ರ ಮೂಲದ ಎರಡು ಲಾರಿ ಮತ್ತು ಗೂಡ್ಸ್‌ ವಾಹನವೊಂದನ್ನು ಭಾನುವಾರ ವಶಪಡಿಸಿಕೊಂಡ ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ಚಾಲಕ ಹಾಗೂ ಕ್ಲೀನರ್‌ಗಳನ್ನು ಬಂಧಿಸಿರುವ ಘಟನೆ ತಾಲೂಕಿನ ಗೆಜ್ಜಲಗೆರೆ ಕೈಗಾರಿಕಾ ಪ್ರದೇಶದಲ್ಲಿ ಭಾನುವಾರ ನಡೆದಿದೆ.

ಮದ್ದೂರು(ಮೇ 25): ನಿಷೇಧಾಜ್ಞೆ ಉಲ್ಲಂಘಿಸಿ ಎಳನೀರು ವಹಿವಾಟು ನಡೆಸಿ ಸಾಗಾಣಿಕೆ ಮಾಡುತ್ತಿದ್ದ ಮಹಾರಾಷ್ಟ್ರ ಮೂಲದ ಎರಡು ಲಾರಿ ಮತ್ತು ಗೂಡ್ಸ್‌ ವಾಹನವೊಂದನ್ನು ಭಾನುವಾರ ವಶಪಡಿಸಿಕೊಂಡ ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ಚಾಲಕ ಹಾಗೂ ಕ್ಲೀನರ್‌ಗಳನ್ನು ಬಂಧಿಸಿರುವ ಘಟನೆ ತಾಲೂಕಿನ ಗೆಜ್ಜಲಗೆರೆ ಕೈಗಾರಿಕಾ ಪ್ರದೇಶದಲ್ಲಿ ಭಾನುವಾರ ನಡೆದಿದೆ.

ಕೊರೋನಾ ಸೋಂಕು ತಡೆಯುವ ನಿಟ್ಟಿನಲ್ಲಿ ಪಟ್ಟಣದ ಎಪಿಎಂಸಿ ಮಾರುಕಟ್ಟೆಆವರಣದಲ್ಲಿ ವಹಿವಾಟು ಹಾಗೂ ಹೊರ ರಾಜ್ಯಗಳ ಲಾರಿಗಳಿಗೆ ಎಳನೀರು ಸಾಗಾಣಿಕೆಗೆ ತಾಲೂಕು ಆಡಳಿತ ನಿರ್ಬಂಧ ವಿಧಿಸಿ ಆದೇಶ ಹೊರಡಿಸಲಾಗಿತ್ತು. ಮಹಾರಾಷ್ಟ್ರ ಮೂಲದ ಚಾಲಕ ಮತ್ತು ಕ್ಲೀನರ್‌ ಗಳೊಂದಿಗೆ ಎಪಿಎಂಸಿ ಕೆಲ ವರ್ತಕರು ಶಾಮೀಲಾಗಿ ತಾಲೂಕಿನ ಗೆಜ್ಜಲಗೆರೆ ಕೈಗಾರಿಕಾ ಪ್ರದೇಶದ ನಿರ್ಜನ ಪ್ರದೇಶವೊಂದರಲ್ಲಿ ಹಳ್ಳಿಗಳಿಂದ ಬೊಲೇರೋ ವಾಹನಗಳಲ್ಲಿ ಎಳನೀರು ತಂದು ಮಹಾರಾಷ್ಟ್ರ ಮೂಲದ ಲಾರಿಗಳಿಗೆ ತುಂಬಿಸುತ್ತಿದ್ದರು.

ಜೂನ್‌ 1ರಿಂದ ಮತ್ತೆ ಧಾರಾವಾಹಿ ಪ್ರಸಾರ ಶುರು; ಯಾವುದರಲ್ಲಿ ಏನೆಲ್ಲಾ ಬದಲಾವಣೆಗಳು?

ಈ ಬಗ್ಗೆ ಮಾಹಿತಿ ಅರಿತ ತಹಸೀಲ್ದಾರ್‌ ಎಚ್..ವಿ. ವಿಜಯಕುಮಾರ್‌ ಮತ್ತು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಲಾರಿಗಳಿಗೆ ಮತ್ತು ಎಳನೀರು ತುಂಬುತ್ತಿದ್ದ ಚಾಲಕ ಮತ್ತು ಕ್ಲೀನರ್‌ ಗಳನ್ನು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ಅಂತರ ಕಾಯ್ದುಕೊಳ್ಳುವಂತೆ ಮನವಿ

ಮದ್ದೂರು ಎಳನೀರು ಮಾರುಕಟ್ಟೆಗೆ ಎಳನೀರು ಸಾಗಾಣಿಕೆ ಮಾಡಲು ಬರುತ್ತಿರುವ ಲಾರಿಗಳ ಚಾಲಕರು ಮತ್ತು ಕ್ಲೀನರ್‌ಗಳಿಂದ ಅಂತರ ಕಾಯ್ದುಕೊಳ್ಳುವಂತೆ ತಹಸೀಲ್ದಾರ್‌ ಎಚ್‌ .ವಿ. ವಿಜಯಕುಮಾರ್‌ ರೈತರಲ್ಲಿ ಮನವಿ ಮಾಡಿದ್ದಾರೆ.

ಹೊರ ರಾಜ್ಯಗಳಿಂದ ಎಳನೀರು ಖರೀದಿ ಮತ್ತು ಸಾಗಾಣಿಕೆಗೆ ವರ್ತಕರು, ಲಾರಿಗಳ ಮೂಲಕ ಚಾಲಕರು ಮತ್ತು ಕ್ಲೀನರ್‌ಗಳು ಬರುತ್ತಿದ್ದಾರೆ. ಈ ವೇಳೆ ರೈತರು, ವರ್ತಕರು, ದಲ್ಲಾಳಿಗಳು ಮತ್ತು ಹಮಾಲಿಗಳಿಗೆ ಸೋಂಕು ಹರಡುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಮಾರುಕಟ್ಟೆಪ್ರಾಂಗಣ ಮದ್ದೂರು ತಾಲೂಕಿನ ಯಾವುದೇ ಭಾಗಗಳಲ್ಲಿ ಎಳನೀರು ವಹಿವಾಟು ಮತ್ತು ಸಾಗಾಣಿಕೆ ಮಾಡುವುದನ್ನು ತಾಲೂಕು ಆಡಳಿತ ನಿಷೇಧಿಸಿದೆ. ರೈತರು ಎಳನೀರು ಸಾಗಾಣಿಕೆ ನಡೆಸುವಾಗ ಎಚ್ಚರ ವಹಿಸುವಂತೆ ಕೋರಿದ್ದಾರೆ.

PREV
click me!

Recommended Stories

ಸಿಎಂ ಗೊಂದಲಕ್ಕೆ ಮತ್ತೆ ಬೆಂಕಿ: ಸಿದ್ದರಾಮಯ್ಯ 5 ವರ್ಷ ಸಿಎಂ, ಬದಲಾದರೆ ಡಿಕೆಶಿ ಒಬ್ರೇ ರೇಸ್‌ನಲ್ಲಿಲ್ಲ..; - ಕೆಎನ್ ರಾಜಣ್ಣ
ಬೆಂಗಳೂರು ಜನರಿಗೆ ಹೊಟ್ಟೆತುಂಬಾ ಬಿರಿಯಾನಿ ಬಾಡೂಟ ಕೊಟ್ಟ ಕುಟುಂಬ ಸಾಲದ ಸುಳಿಗೆ ಸಿಲುಕಿ ಆತ್ಮ*ಹತ್ಯೆ!