ಭಾನುವಾರ ಮಂಡ್ಯದಲ್ಲಿ 15 ಪಾಸಿಟಿವ್‌ ಪ್ರಕರಣಗಳು

By Kannadaprabha NewsFirst Published May 25, 2020, 12:48 PM IST
Highlights

ಮಂಡ್ಯ ಜಿಲ್ಲೆಯಲ್ಲಿ ಭಾನುವಾರ ಮತ್ತೆ 15 ಕೊರೋನಾ ಪಾಸಿಟಿವ್‌ ಪ್ರಕರಣಗಳು ವರದಿಯಾಗಿವೆ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್‌ ತಿಳಿಸಿದ್ದಾರೆ.

ಮಂಡ್ಯ(ಮೇ 25): ಮಂಡ್ಯ ಜಿಲ್ಲೆಯಲ್ಲಿ ಭಾನುವಾರ ಮತ್ತೆ 15 ಕೊರೋನಾ ಪಾಸಿಟಿವ್‌ ಪ್ರಕರಣಗಳು ವರದಿಯಾಗಿವೆ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್‌ ತಿಳಿಸಿದ್ದಾರೆ.

ಈ ಕುರಿತಂತೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿಗಳು 15 ಪ್ರಕರಣಗಳ ಪೈಕಿ 14 ಕೆ.ಆರ್‌.ಪೇಟೆ ತಾಲೂಕಿಗೆ ಹಾಗೂ ಪಾಂಡವಪುರ ತಾಲೂಕಿನ 1 ಪ್ರಕರಣಗಳು ಸೇರಿವೆ 15 ಪಾಸಿಟಿವ್‌ ಕೇಸ್‌ಗಳೂ ಸೇರಿ ಒಟ್ಟು ಜಿಲ್ಲೆಯಲ್ಲಿ 252ಕ್ಕೆ ಏರಿಕೆಯಾಗಿವೆ.

ಸಂಬಳದ ವಿಚಾರಕ್ಕೆ ಗುಂಪು ಘರ್ಷಣೆ: ವ್ಯಕ್ತಿ ಸಾವು

26 ಮಂದಿ ಕೊರೋನಾ ಸೋಂಕಿತರು ಗುಣ ಮುಖರಾಗಿ ಬಿಡುಗಡೆಯಾಗಿದ್ದಾರೆ. ಒಟ್ಟು 226 ಮಂದಿ ಸಕ್ರಿಯ ಪ್ರಕರಣಗಳು ಇವೆ. ಇವರೆಲ್ಲರೂ ಮಂಡ್ಯ ವೈದ್ಯಕೀಯ ಕಾಲೇಜಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದ್ದಾರೆ.

8 ಪುರುಷರು 7 ಮಹಿಳೆಯರು ಸೇರಿ 15 ಪ್ರಕರಣಗಲ್ಲಿ 11 ಮಂದಿ ಮುಂಬೈನಿಂದ ಬಂದವರೇ ಆಗಿದ್ದಾರೆ. ಉಳಿದ ನಾಲ್ವರು ಮಾತ್ರ ಪಿ. 869 ಪ್ರಾಥಮಿಕ ಸಂಪರ್ಕದಲ್ಲಿ ಇದ್ದರು. ಆ 4 ಜನಕ್ಕೂ ಪಾಸಿಟಿವ್‌ ಬಂದಿದೆ. ಮುಂಬೈನ ಹೊಟೆಲ್‌ನಲ್ಲಿ, ಗೆಸ್ಟ್‌ಹೌಸ್‌, ಆಟೋ ಚಾಲಕರು ಹಾಗೂ ಗೃಹಿಣಿಯರು ಇಲ್ಲಿಗೆ ಬಂದಿದ್ದಾರೆ. ಅವರೆಲ್ಲರನ್ನೂ ಕ್ವಾರಂಟೈನ್‌ ಮಾಡಲಾಗಿತ್ತು. 6 ರಿಂದ 49 ವರ್ಷದೊಳಗಿನ ಜನರಿಗೆ ಈಗ ಪಾಸಿಟಿವ್‌ ಬಂದಿದೆ. ಮುಂಬೈನಿಂದ ಬಂದವರಲ್ಲಿಯೇ ಹೆಚ್ಚು ಸೋಂಕು ಕಾಣಿಸಿಕೊಂಡಿದೆ. ಉಳಿದಂತೆ ಮಂಡ್ಯ ಮೂಲ ನಿವಾಸಿಗಳಲ್ಲಾ ಹೆಚ್ಚು ಸೇಫ್‌ ಆಗಿದ್ದಾರೆ.

ಲಾಕ್‌ಡೌನ್‌ ಎಫೆಕ್ಟ್: ದೇವಸ್ಥಾನದಲ್ಲಿ ಸರಳ ವಿವಾಹ!

ಮುಂಬೈನಿಂದ ಬಂದ ಎಲ್ಲರನ್ನೂ ಮೇ 18 ಮತ್ತು 19 ಕೆ.ಆರ್‌. ಪೇಟೆ ತಾಲೂಕಿನ ಆನೆಗೊಳ ಚೆಕ್‌ಪೋಸ್ಟ್‌ ತಡೆದು ತಪಾಸಣೆ ಮಾಡಿ ನಂತರ ಕ್ವಾರಂಟೈನ್‌ಗೆ ಒಪ್ಪಿಸಲಾಗಿತ್ತು. ಮುಂಬೈನಿಂದ ಇದುವರೆಗೂ 1400 ಹೆಚ್ಚು ಜನ ಬಂದಿದ್ದಾರೆ. ಎಲ್ಲರನ್ನೂ ತಪಾಸಣೆ ಮಾಡಲಾಗಿದೆ. ಇದುವರೆಗೂ ಸಾಕಷ್ಟುಸಂಖ್ಯೆಯ ನೆಗಟಿವ್‌ ವರದಿಗಳು ಬಂದಿವೆ. ಇದರಲ್ಲಿ ಈಗ 60 -80 ಜನರ ಪರೀಕ್ಷಾ ಪರದಿ ಬಾಕಿ ಇದೆ,.ಈ ತಂಡ ಮುಗಿಸಿದರೆ ಸ್ವಲ್ಪ ನಿರಾಳತೆ ಸಿಗಬಹುದು.

click me!