* ಎರಡು ವರ್ಷಗಳ ಬಳಿಕ ಪ್ರವಾಸಿಗರಿಗೆ ಗೋಲ್ಡನ್ ಟೆಂಪಲ್ ಮುಕ್ತ
* ಬುದ್ಧನ ವೀಕ್ಷಣೆ ಮಾಡಲು ಪ್ರವಾಸಿಗರಿಗೆ ಅನುವು ಮಾಡಿಕೊಟ್ಟ ಗೋಲ್ಡನ್ ಟೆಂಪಲ್
* ಮುಂದಿನ ದಿನಗಳಲ್ಲಿ ಕೊರೋನಾ ಹೆಚ್ಚಾದಲ್ಲಿ ಮತ್ತೊಮ್ಮೆ ಲಾಕ್
ಬೈಲಕುಪ್ಪೆ(ಮಾ.09): ಭಾರತದಲ್ಲಿ ಹೆಸರುವಾಸಿಯಾಗಿರುವ ಪ್ರವಾಸಿ ತಾಣಗಳಲ್ಲಿ ಕರ್ನಾಟಕ(Karnataka) ರಾಜ್ಯದ ಮೈಸೂರು(Mysuru) ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೈಲಕುಪ್ಪೆಯಲ್ಲಿರುವ ಟಿಬೆಟಿಯನ್ನರ ಗೋಲ್ಡನ್ ಟೆಂಪಲ್(Golden Temple) ಕೂಡ ಒಂದು. ಪ್ರತಿನಿತ್ಯ ಕೇರಳ, ತಮಿಳುನಾಡು, ಆಂಧ್ರಪ್ರದೇಶ, ದೆಹಲಿ ಇತರ ರಾಜ್ಯಗಳು ಸೇರಿದಂತೆ, ದೇಶ ವಿದೇಶಗಳಿಂದ ಸಾವಿರಾರು ಸಂಖ್ಯೆಯಲ್ಲಿ ಬುದ್ಧನ ದರ್ಶನ ಮಾಡಲು ಜನಜಂಗುಳಿಯೇ ಈ ಸ್ಥಳದಲ್ಲಿ ಕಂಡುಬರುತ್ತಿತ್ತು.
ಆದರೆ, ಚೀನಾದ(China) ವೂಹನ್‌ನಲ್ಲಿ ಉದ್ಭವಗೊಂಡ ಕೊರೋನಾ(Coronavirus) ಎಂಬ ವೈರಸ್ ದೇಶಗಳನ್ನೇ ಲಾಕ್ ಮಾಡಿದ್ದು, ದೇಶಾದ್ಯಂತ(India) ಹರಡಿದ ಕೊರೋನಾ ವೈರಸ್‌ನ್ನು ತಡೆಗಟ್ಟುವ ಹಿನ್ನೆಲೆ, ಕೇಂದ್ರ ಸರ್ಕಾರವು ಲಾಕ್‌ಡೌನ್(Lockdown) ನಿಯಮ ಜಾರಿಗೆ ತಂದಿದ್ದು, ಅದರ ಪ್ರಕಾರ ಗೋಲ್ಡನ್ ಟೆಂಪಲ್ ಆಡಳಿತ ಮಂಡಳಿಯವರು ಲಾಕ್‌ಡೌನ್ ಮಾಡಿ, ಸಂಪೂರ್ಣವಾಗಿ ಪ್ರವಾಸಿ ತಾಣಕ್ಕೆ ಕಡಿವಾಣ ಹಾಕಿದ್ದರು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಂತಹಂತವಾಗಿ ಲಾಕೌಡೌನ್ ಸಡಿಲ ಗೊಳಿಸಿದ್ದರು, ಇಲ್ಲಿ ಮಾತ್ರ ಲಾಕ್‌ಡೌನ್ ತೆಗೆಯದೆ ಕೊರೋನಾ ವೈರಸ್ ವಿರುದ್ಧ ಹೋರಾಡಲು ಇಲ್ಲಿನ ಬೌದ್ಧ ಭಿಕ್ಷುಗಳು(Buddhist Monks) ಮುಂದಿದ್ದರು.
ಮುಂಡಗೋಡ: ಬೌದ್ಧ ಸನ್ಯಾಸಿ ದೇಹತ್ಯಾಗ ಮಾಡಿ 10 ದಿನವಾದರೂ ನಿತ್ಯಪೂಜೆ..!
ಸುಮಾರು 700 ದಿನಗಳ ಕಾಲ ಸಂಪೂರ್ಣವಾಗಿ ಲಾಕ್‌ಡೌನ್ ಮಾಡಿದ್ದು, ಬುದ್ಧನ(Gautama Buddha) ವೀಕ್ಷಣೆ ಮಾಡಲು ಬರುವ ಪ್ರವಾಸಿಗರಿಗೆ(Tourists) ನಿರ್ಬಂಧ ಹೇರಲಾಗಿತ್ತು. ಆದರೆ, ಟಿಬೆಟಿಯನ್ ಹೊಸ ವರ್ಷದ ವಾಟರ್ ಟೈಗರ್ ಲೋಸರ್ ಹಬ್ಬದಂದೇ ಲಾಕ್‌ಡೌನ್ ಸಡಿಲಗೊಳಿಸಿ, ದಿನನಿತ್ಯ ಸಾವಿರಾರು ಸಂಖ್ಯೆಯಲ್ಲಿ ಬರುವ ಪ್ರವಾಸಿಗರಿಗೆ ಬುದ್ಧನ ವೀಕ್ಷಣೆ ಮಾಡಲು ಅನುವು ಮಾಡಿಕೊಟ್ಟಿದೆ.
ಹೊಸ ವಿನ್ಯಾಸದಲ್ಲಿ ಟೆಂಪಲ್
ಚಿನ್ನದ ಲೇಪನ ಹೊಂದಿರುವ ಬುದ್ಧನ ಪ್ರತಿಮೆ ಸೇರಿದಂತೆ ಬಗೆಬಗೆಯ ಪ್ರತಿಮೆಗಳಿಗೆ ಹೊಸ ಮಾದರಿಯ ಲೇಪನಗಳನ್ನು ಅಳವಡಿಸಿ, ಗೋಡೆಗಳ ಮೇಲೆ ಬುದ್ಧನಿಗೆ ಸಂಬಂಧಿಸಿದ ಹಾಗೂ ಟಿಬೆಟ್(Tibet) ಮಾದರಿಯ ಚಿತ್ರಗಳನ್ನು ಬಿಡಿಸುವುದರ ಮೂಲಕ, ಎಲ್ಲ ಕಟ್ಟಡಗಳಿಗೆ ಹೊಸ ಮಾದರಿಯ ಬಣ್ಣಗಳನ್ನು ತುಂಬಿ, ಹೊಸ ಅಲಂಕಾರದೊಂದಿಗೆ, ಮದುವಣಗಿತ್ತಿಯಂತೆ ಬಣಗುವಂತೆ ಮಾಡಿದ್ದಾರೆ. ಒಮ್ಮೆ ಭೇಟಿ ನೀಡಿ ಹೋಗುವ ಪ್ರವಾಸಿಗರು ಮತ್ತೊಮ್ಮೆ ಭೇಟಿ ನೀಡುವಂತೆ ಆಕರ್ಷಿಸುತ್ತಿದೆ, ಪ್ರವಾಸಿಗರು ಮನಸೂರೆಗೊಳ್ಳುವ ಅಷ್ಟುಇಲ್ಲಿಯ ಗೋಲ್ಡನ್ ಟೆಂಪಲ್ ಆಡಳಿತ ಮಂಡಳಿಯವರು, ಲಾಕ್‌ಡೌನ್ ಸಂದರ್ಭ ಬಳಸಿಕೊಂಡು ಇಲ್ಲಿನ ಬೌದ್ಧ ಭಿಕ್ಷುಗಳು ಎಲ್ಲ ರೀತಿಯ ಕೆಲಸಗಳನ್ನು ಮುಗಿಸಿದ್ದಾರೆ. ಮುಂದಿನ ದಿನಗಳಲ್ಲಿ ಕೊರೋನಾ ವೈರಸ್ ಸಂಖ್ಯೆ ಹೆಚ್ಚಾದಲ್ಲಿ ಮತ್ತೊಮ್ಮೆ ಲಾಕ್ ಮಾಡುವುದಾಗಿ ಸಂಸ್ಥೆಯವರು ತಿಳಿಸಿದ್ದಾರೆ.
Jan Aushadhi Kendra: ಶೀಘ್ರ 500 ಹೊಸ ಜನೌಷಧಿ ಕೇಂದ್ರ: ಸಚಿವ ಸುಧಾಕರ್
ಮುಂಡಗೋಡ: ದೇಹತ್ಯಾಗ ಮಾಡಿ 15ನೇ ದಿನಕ್ಕೆ ಬೌದ್ಧ ಸನ್ಯಾಸಿಯ ಅಂತ್ಯಸಂಸ್ಕಾರ..!
ಮುಂಡಗೋಡ: ಪ್ರಾಣ ಹೋದರೂ ಆತ್ಮ ಹೋಗಿಲ್ಲ ಎಂಬ ನಂಬಿಕೆಯಿಂದ 14 ದಿನಗಳಿಂದ ಮೃತದೇಹವನ್ನು ಇಟ್ಟುಕೊಂಡು ಪೂಜಿಸಲಾಗುತ್ತಿದ್ದ ಟಿಬೇಟಿಯನ್ ಹಿರಿಯ ಸನ್ಯಾಸಿಯ(Buddhist Monk) ಅಂತಿಮ ಸಂಸ್ಕಾರವನ್ನು 15ನೇ ದಿನವಾದ ಸೆ.23 ರಂದು ಸಕಲ ಗೌರವ ಮೆರವಣಿಗೆ ನಡೆಸಿ ಟಿಬೆಟಿಯನ್ ಧಾರ್ಮಿಕ ಪೂಜಾ ವಿಧಿ ವಿಧಾನದೊಂದಿಗೆ ನೆರವೇರಿಸಲಾಗಿತ್ತು.
ಇಲ್ಲಿಯ ಟಿಬೆಟಿಯನ್ ಕಾಲನಿ ಲಾಮಾ ಕ್ಯಾಂಪ್ ನಂ. 1 ಶೇರ್ ಗಂದೆನ್ ಬೌದ್ಧ ಮಠದ ಹಿರಿಯ ಸನ್ಯಾಸಿ ಯಶಿ ಪೋನ್ಸೊ ತೆಂಜಿನ್ (90) ಅವರು ಸೆ. 9ರಂದು ಧ್ಯಾನ ಮಾಡುವಾಗಲೇ ಚಿರನಿದ್ರೆಗೆ ಜಾರಿದ್ದರು. ಮೃತದೇಹದಿಂದ ಯಾವುದೇ ದುರ್ವಾಸನೆಯಾಗಲಿ ಬಂದಿರಲಿಲ್ಲ. ಅಲ್ಲದೇ ಯಾವುದೇ ರೀತಿ ನೀರು ಸೋರಿಕೆಯಾಗುವುದಾಗಲಿ, ದೇಹದಲ್ಲಿ ಬಾವು ಕಾಣಿಸಿಕೊಳ್ಳದೇ ಇರುವುದರಿಂದ ಪ್ರಾಣ ಹೋಗಿದೆ, ಆದರೆ ಆತ್ಮ ಇಂದಿಗೂ ಇಲ್ಲಿಯೇ ಇದೆ ಎಂಬ ನಂಬಿಕೆಯಿಂದ ಇಲ್ಲಿಯ ಕಿರಿಯ ಟಿಬೆಟಿಯನ್(Tibet) ಸನ್ಯಾಸಿಗಳಿಂದ ಶವವನ್ನು ಪೆಟ್ಟಿಗೆಯೊಂದರಲ್ಲಿ ಇಟ್ಟು ದೀಪ ಹಚ್ಚಿ ನಿತ್ಯ ಪೂಜೆ ಸಲ್ಲಿಸುತ್ತಿದ್ದರು.