* ಬಗರ್‌ಹುಕುಂ ತೆರವು ವಿರೋಧಿಸಿ ಆತ್ಮಹತ್ಯೆ ಮಾಡಿಕೊಂಡಿದ್ದ ಮುಂಡರಗಿ ಮಹಿಳೆ
* ಶವಾಗಾರದ ಎದುರು ಗ್ರಾಮಸ್ಥರ ಪ್ರತಿಭಟನೆ
* ಹೈಡ್ರಾಮಾ ಬಳಿಕ ಅಂತ್ಯಸಂಸ್ಕಾರ
ಗದಗ(ಮಾ.09): ಮುಂಡರಗಿ ತಾಲೂಕಿನ ಕೆರೂರ ಗ್ರಾಮದಲ್ಲಿ ಅರಣ್ಯ ಇಲಾಖೆ(Forest Department) ಅಧಿಕಾರಿಗಳು ಜಮೀನು ತೆರವಿಗೆ ಮುಂದಾಗಿದ್ದ ವೇಳೆ ಅದನ್ನು ವಿರೋಧಿಸಿ ರೈತ ಮಹಿಳೆ(Farmer Woman) ವಿಷ ಸೇವಿಸಿದ್ದ ಜಾಗದಲ್ಲೇ ಅವರ ಅಂತ್ಯಕ್ರಿಯೆ(Funeral) ನೆರವೇರಿಸುವ ಮೂಲಕ ಗ್ರಾಮಸ್ಥರು ವಿನೂತನ ಪ್ರತಿಭಟನೆ ನಡೆಸಿದ್ದಾರೆ. ದಿನವಿಡೀ ನಡೆದ ಹತ್ತು ಹಲವು ಬೆಳವಣಿಗೆ, ಹೈಡ್ರಾಮಾ, ಪ್ರತಿಭಟನೆ, ಆಕ್ರೋಶ, ಆತಂಕ, ಗೊಂದಲಗಳ ಬಳಿಕ ರೈತ ಮಹಿಳೆ ನಿರ್ಮಲಾ ಪಾಟೀಲ್ ಅಂತ್ಯಸಂಸ್ಕಾರವನ್ನು ಮಂಗಳವಾರ ರಾತ್ರಿ ಮಾಡಲಾಯಿತು.
ತಲೆತಲಾಂತರಗಳಿಂದ ಅರಣ್ಯ ಭೂಮಿಯನ್ನು ಸಾಗುವಳಿ ಮಾಡಿಕೊಂಡು ಬಂದಿದ್ದ ಮಹಿಳೆಯೊಬ್ಬರು ಅರಣ್ಯ ಇಲಾಖೆಯ ಬಗರ್‌ಹುಕುಂ ಜಮೀನು(Land) ಸಾಗುವಳಿದಾರರ ತೆರವು ಕಾರ್ಯಾಚರಣೆ ವಿರೋಧಿಸಿ ವಿಷ ಸೇವಿಸಿ ಮೃತಪಟ್ಟಿದ್ದು, ರಾಜ್ಯಾದ್ಯಂತ(Karnataka) ಸಂಚಲನಕ್ಕೆ ಕಾರಣವಾಗಿತ್ತು. ಸೋಮವಾರ ತಡರಾತ್ರಿಯೇ ಅರಣ್ಯ ಇಲಾಖೆ ಸಿಬ್ಬಂದಿಯನ್ನು ಕೆಲೂರು ಗ್ರಾಮದಲ್ಲಿ ಕೂಡಿ ಹಾಕಿ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಮಂಗಳವಾರ ಬೆಳಗಾಗುತ್ತಿದ್ದಂತೆ ಗದಗ ಜಿಲ್ಲಾ ಆಸ್ಪತ್ರೆಯಲ್ಲಿ ರೈತ ಮಹಿಳೆಯ ಶವವಿದ್ದ ಶವಾಗಾರದ ಬಳಿ ನೂರಾರು ಸಂಖ್ಯೆಯಲ್ಲಿ ಗ್ರಾಮಸ್ಥರು, ಹೋರಾಟಗಾರರು ಜಮಾವಣೆಗೊಂಡು ಸರ್ಕಾರ, ಅರಣ್ಯ ಇಲಾಖೆಯ ವಿರುದ್ಧ ಭಾರೀ ಪ್ರತಿಭಟನೆ(Protest) ನಡೆಸಿದರು.
undefined
ACB Raid: ತಹಸೀಲ್ದಾರ ಕಚೇರಿಯಲ್ಲಿ ಎಸಿಬಿ ದಾಳಿ: ಲಂಚ ಸಮೇತ ಟೈಪಿಸ್ಟ್ ಬಲೆಗೆ
ಕೆಲೂರ ಗ್ರಾಮಸ್ಥರ ಆಕ್ರೋಶಕ್ಕೆ ಹಲವಾರು ಪ್ರಗತಿಪರ, ಜನಪರ ಸಂಘಟನೆ, ರಾಜಕೀಯ ಪಕ್ಷಗಳು ಸಾಥ್ ನೀಡಿದ ಹಿನ್ನೆಲೆಯಲ್ಲಿ ಜಿಲ್ಲಾ ಆಸ್ಪತ್ರೆಯಲ್ಲಿ ಮಂಗಳವಾರ ಸಂಜೆ ವರೆಗೂ ನಿರಂತರ ಪ್ರತಿಭಟನೆಗಳು ನಡೆದವು. ಪ್ರತಿಭಟನೆ ತೀವ್ರತೆ ಅರಿತ ಜಿಲ್ಲಾಧಿಕಾರಿ ಸುಂದರೇಶಬಾಬು, ಎಸ್ಪಿ ಶಿವಪ್ರಕಾಶ ದೇವರಾಜು ಆಸ್ಪತ್ರೆಗೆ ಆಗಮಿಸಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಸರ್ಕಾರದಿಂದ ಘೋಷಣೆ ಮಾಡಿರುವ ಪರಿಹಾರ ಕುರಿತು ಮಾಹಿತಿ ನೀಡಿದರು. ಈ ವೇಳೆಯೂ ಗ್ರಾಮಸ್ಥರು ಪ್ರತಿಭಟನೆ ಕೈಬಿಡಲು ಒಪ್ಪಲಿಲ್ಲ.
ಆನಂತರ ಮಹಿಳೆಯ ಶವವನ್ನು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿಟ್ಟು ರೈತ ಮಹಿಳೆಯ ಸಾವಿಗೆ ನ್ಯಾಯ ಸಿಗುವವರೆಗೂ ಹೋರಾಟ ನಡೆಸಲು ಮುಂದಾದರು. ಜಿಲ್ಲಾಧಿಕಾರಿ ಸೇರಿದಂತೆ ಹಿರಿಯ ಅಧಿಕಾರಿಗಳ ಮಧ್ಯಸ್ಥಿಕೆಯಲ್ಲಿ ಪರಿಸ್ಥಿತಿ ತಿಳಿಗೊಳಿಸಿ, ಮೃತ ಮಹಿಳೆಯ ಶವವನ್ನು(Deadbody) ಅಂತ್ಯಸಂಸ್ಕಾರಕ್ಕಾಗಿ ಗ್ರಾಮಕ್ಕೆ ಸೂಕ್ತ ಪೊಲೀಸ್(Police) ಬಂದೋಬಸ್ತ್‌ನಲ್ಲಿ ಕಳುಹಿಸಿಕೊಡಲಾಯಿತು.
ಸಚಿವ ಸಿ.ಸಿ.ಪಾಟೀಲ್(CC Patil) ಸರ್ಕಾರದಿಂದ ಮೃತ ಮಹಿಳೆ ಕುಟುಂಬಕ್ಕೆ 5 ಲಕ್ಷ ಪರಿಹಾರ(Compensation) ನೀಡುವ ಘೋಷಣೆ ಮಾಡಿದ್ದು ಒತ್ತುವರಿ ತೆರವು ವೇಳೆ ಮಾನವೀಯತೆಯಿಂದ ನಡೆದುಕೊಳ್ಳಲು ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.
ಬಗರ್‌ಹುಕುಂ ತೆರವಿಗೆ ಮಹಿಳೆ ಬಲಿ..!
ಅತಿಕ್ರಮಿಸಿಕೊಂಡಿರುವ ಬಗರ್ ಹುಕುಂ ಜಮೀನನ್ನು ಅರಣ್ಯ ಇಲಾಖೆ ತೆರವು ಮಾಡುವುದನ್ನು ವಿರೋಧಿಸಿ ಇಬ್ಬರು ಮಹಿಳೆಯರು ವಿಷ ಸೇವಿಸಿದ್ದು, ಒಬ್ಬಾಕೆ ಸಾವನ್ನಪ್ಪಿರುವ ಘಟನೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಕೆಲೂರಿನಲ್ಲಿ ಸೋಮವಾರ ನಡೆದಿತ್ತು.
Gadag: ದಶಕವಾದ್ರೂ ಪ್ರವಾಹ ಸಂತ್ರಸ್ತರಿಗೆ ಹಂಚಿಕೆಯಾಗದ ಆಸರೆ ಮನೆಗಳು..!
ಕೆಲೂರಿನ ನಿರ್ಮಲಾ ಪಾಟೀಲ ಮೃತಪಟ್ಟ ಮಹಿಳೆ. ಜಮೀನು(Land) ಕಳೆದುಕೊಳ್ಳುವ ಆತಂಕದಲ್ಲಿ ನಿರ್ಮಲಾ ಪಾಟೀಲ ಮತ್ತು ಸರೋಜಾ ಪಾಟೀಲ ಕ್ರಿಮಿನಾಶಕ(Poison) ಸೇವಿಸಿದ್ದರು. ತಕ್ಷಣ ಅವರನ್ನು ಸ್ಥಳೀಯರು ಖಾಸಗಿ ವಾಹನದಲ್ಲಿ ಮುಂಡರಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಲಾಯಿತು. ಹೆಚ್ಚಿನ ಚಿಕಿತ್ಸೆಗಾಗಿ ಗದಗ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ನಿರ್ಮಲಾ ಪಾಟೀಲ ಸಂಜೆಯ ಹೊತ್ತಿಗೆ ಮೃತಪಟಿದ್ದರು.
ಕಪ್ಪತ್ತಗುಡ್ಡವನ್ನು(Kappatagudda) ವನ್ಯಧಾಮವನ್ನಾಗಿ ರಾಜ್ಯ ಸರ್ಕಾರ(Governmet of Karnataka) 2016-17ರಲ್ಲಿ ಘೋಷಿಸಿದ ಬಳಿಕ ಕಪ್ಪತ್ತಗುಡ್ಡ ಒಟ್ಟು ವಿಸ್ತೀರ್ಣದ ಆಧಾರದಲ್ಲಿ ಸರ್ವೇ ಮಾಡಲಾಗಿದೆ. ಸಮೀಕ್ಷೆ ನಂತರ ಅರಣ್ಯ ಭೂಮಿ ಒತ್ತುವರಿ ಆಗಿರುವುದು ಪತ್ತೆಯಾಗಿದೆ. ಹೀಗಾಗಿ, ಜನವರಿಯಲ್ಲಿಯೇ ಕೆಲೂರು ಗ್ರಾಮಸ್ಥರಿಗೆ ದಾಖಲೆ ಸಮೇತ ಒತ್ತುವರಿ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದರು. ಆದರೆ ಇದನ್ನು ಒಪ್ಪದ ಗ್ರಾಮಸ್ಥರು, ನಮ್ಮ ಹಿರಿಯರ ಕಾಲದಿಂದಲೂ ನಾವೇ ಸಾಗುವಳಿ ಮಾಡುತ್ತಿದ್ದೇವೆ ಎಂದು ವಾಗ್ವಾದ ಮಾಡಿದ್ದರು.