ಈಗ ತುಮಕೂರಿನ ವ್ಯಕ್ತಿಯೊಬ್ಬ ದೇವರು ಹೇಳಿದ್ದಾನೆಂದು ಯಾವುದೇ ತಕರಾರು ಮಾಡದೆ ಹೊಂದಾಣಿಕೆಯಿಂದ ಜೀವನ ಮಾಡಿಕೊಂಡು ಹೋಗುತ್ತಿದ್ದ ಪತ್ನಿಗೆ ವಿಚ್ಛೇದನ ಕೊಡಲು ಮುಂದಾಗಿದ್ದಾನೆ.
ತುಮಕೂರು (ಫೆ.01): ದೇವರನ್ನು ಒಲಿಸಿಕೊಳ್ಳಲು ಹಾಗೂ ದೇವರು ಕನಸಿನಲ್ಲಿ ಹೇಳಿದ್ದಾನೆಂದು ನಾನಾ ಕಸರತ್ತುಗಳನ್ನು ಮಾಡುವ ಜನರು ಇನ್ನೂ ಇದ್ದಾರೆ. ಇತ್ತೀಚೆಗೆ ಬಳ್ಳಾರಿಯ ವೀರೇಶ್ ನಾಲಿಗೆ ಕತ್ತರಿಸಿ ದೇವರಿಗೆ ಅರ್ಪಿಸಿದ್ದನು. ಆದರೆ, ಈಗ ತುಮಕೂರಿನ ವ್ಯಕ್ತಿಯೊಬ್ಬ ದೇವರು ಹೇಳಿದ್ದಾನೆಂದು ಯಾವುದೇ ತಕರಾರು ಮಾಡದೆ ಹೊಂದಾಣಿಕೆಯಿಂದ ಜೀವನ ಮಾಡಿಕೊಂಡು ಹೋಗುತ್ತಿದ್ದ ಪತ್ನಿಗೆ ವಿಚ್ಛೇದನ ಕೊಡಲು ಮುಂದಾಗಿದ್ದಾನೆ. ಆದರೆ, ನ್ಯಾಯಾಲಯದಲ್ಲಿ ಈ ವಿಚ್ಛೇದನ ಪ್ರಕರಣದ ವಿಚಾರಣೆ ಮಾಡಿದಾಗ ವಿಚಿತ್ರ ಕಾರಣನ್ನು ಕೇಳಿ ನ್ಯಾಯಾಧೀಶರೇ ಬೆಸ್ತು ಬಿದ್ದಿದ್ದಾರೆ.
ಕಳೆದ ಮೂರು ದಿನಗಳ ಹಿಂದೆ ದೇವರು ಕನಸಿನಲ್ಲಿ ಬಂದು ಹೇಳಿದ್ದಾನೆಂದು ದೇವರನ್ನು ಒಲಿಸಿಕೊಳ್ಳಲು ಬಳ್ಳಾರಿ ಜಿಲ್ಲೆ ತೆಕ್ಕಲಕೋಟೆ ತಾಲೂಕಿನ ಉಪ್ಪಾರ ಹೊಸಹಳ್ಳಿಯ ವೀರೇಶ್ ನಾಲಿಗೆ ಕತ್ತರಿಸಿ (Veeresh Tongue cut) ದೇವರಿಗೆ ಅರ್ಪಿಸಿದ ಘಟನೆ ನಡೆದಿತ್ತು. ಈಗ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಹಂದನಕೆರೆ ಗ್ರಾಮದ (Handanakere Village) ವ್ಯಕ್ತಿಯೊಬ್ಬ ದೇವರು ಹೇಳಿದ್ದಾನೆಂದು ತನ್ನ ಪತ್ನಿಗೆ ವಿಚ್ಛೇದನ (Divorce) ನೀಡಲು ಮುಂದಾಗಿದ್ದಾನೆ. ಪತಿ ಹಾಗೂ ಪತ್ನಿಯರ ನಡುವೆ ಲೈಂಗಿಕತೆ, ಆಸ್ತಿ, ಅನೈತಿಕ ಸಂಬಂಧ, ವರದಕ್ಷಿಣೆ ಕಿರುಕುಳ, ಹಲ್ಲೆ, ದೂರ ಇರುವಿಕೆ ಸೇರಿ ಅನೇಕ ಕಾರಣಗಳಿಂದ ವಿಚ್ಛೇದನ ಪಡೆದುಕೊಳ್ಳಲು ಮುಂದಾಗುತ್ತಾರೆ. ಆದರೆ, ದೇವರು ಹೇಳಿದ್ದಾನೆಂದು (God Said) ಪತ್ನಿಗೆ ವಿಚ್ಛೇದನ ಕೊಡಲು ಮುಂದಾಗಿರುವ ಕಾರಣವನ್ನು ಕೇಳಿ ನ್ಯಾಯಾಧೀಶರು (Judge) ಅರ್ಜಿದಾರನಿಗೆ ಛೀಮಾರಿ ಹಾಕಿದ್ದಾರೆ.
Ballari : ದೇವರು ಕೇಳಿದನೆಂದು ನಾಲಿಗೆಯನ್ನೇ ಕೊಯ್ದುಕೊಟ್ಟ ಭೂಪ
ಘಟನೆ ನಡೆದಿದ್ದಾರೂ ಏನು.?:
ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ಘಟನೆ ನಡೆದಿದೆ. ಚಿಕ್ಕನಾಯಕನಹಳ್ಳಿ ತಾಲೂಕಿನ ಹಂದನಕೆರೆಯಲ್ಲಿ ಕಳೆದ ಐದಾರು ವರ್ಷಗಳ ಹಿಂದೆ ಮಂಜುನಾಥ್ ಹಾಗೂ ಪಾರ್ವತಮ್ಮ (Manjunath and Parvathamma) ಮದುವೆಯಾಗಿದ್ದರು. ಇಬ್ಬರೂ ಹೊಂದಾಣಿಕೆಯಿಂದ ದಂಪತಿ (Couple) ಜೀವನ ಮಾಡಿಕೊಂಡು ಹೋಗುತ್ತಿದ್ದರು. ಆದರೆ, ಅದ್ಯಾಕೋ ಪತಿರಾಯ ಮಂಜುನಾಥ್ ದೇವರ ಮಾತು ಕೇಳಿ ಮೂಡನಂಬಿಕೆಗೆ ಒಳಗಾಗಿ ಪತ್ನಿಗೆ ವಿಚ್ಚೇದನ ನೀಡಲು ಕೊರ್ಟ್ (Court) ಮೆಟ್ಟಿಲೇರಿದ್ದನು. ಚಿಕ್ಕನಾಯಕನಹಳ್ಳಿ ನ್ಯಾಯಾಲಯದಲ್ಲಿ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದನು.
10 ತಿಂಗಳ ಮಗು ಹೋಗಬೇಡವೆಂದು ಅಳುತ್ತಿದ್ದರೂ ಬಿಟ್ಟು ಹೋದ ತಾಯಿ: ಕಾರು ಅಪಘಾತದಲ್ಲಿ ಅಮ್ಮ-ಅಕ್ಕ ಸಾವು
ಒಟ್ಟಿಗೆ ಬಾಳುವಂತೆ ನ್ಯಾಯಾಧೀಶರ ತೀರ್ಪು:
ಇನ್ನು ಈ ವಿಚ್ಛೇದನ ಪ್ರಕರಣದ ಕುರಿತು ಚಿಕ್ಕನಾಯಕನಹಳ್ಳಿ ಕೋರ್ಟ್‌ನ ಹಿರಿಯ ಸಿವಿಲ್ ನ್ಯಾಯಾಧೀಶರಾದ ವೆಂಕಟೇಶಪ್ಪ (Venkateshappa) ಅವರು ಕಾರಣವನ್ನು ಸಂಪೂರ್ಣವಾಗಿ ಆಲಿಸಿದ್ದಾರೆ. ನಂತರ, ಇಬ್ಬರಲ್ಲೂ ಯಾವುದೇ ಸಮಸ್ಯೆ (Problem) ಇಲ್ಲದಿದ್ದರೂ ದೇವರ ಮಾತು ಕೇಳುವುದಕ್ಕಾಗಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದೇನೆ ಎಂದು ಹೇಳಿದ ಪತಿರಾಯ ಮಂಜುನಾಥ್‌ನಿಗೆ ಬುದ್ಧಿ ಹೇಳಿದ್ದಾರೆ. ಕೋರ್ಟ್‌ನಲ್ಲಿ ನಡೆದ ಘಟನೆಯ ನಂತರ ನ್ಯಾಯಾಧೀಶರ ಮಾತು ಕೇಳಿ ಪತ್ನಿ ಜೊತೆ ಬಾಳಲು ಮಂಜುನಾಥ್ ಒಪ್ಪಿಕೊಂಡಿದ್ದಾನೆ. ನಂತರ ನ್ಯಾಯಾಲಯದಲ್ಲೇ ಹಾರ ಬದಲಾಯಿಸಿ ಇಬ್ಬರು ಒಟ್ಟಿಗೆ ಬಾಳಲು ನ್ಯಾಯಾಧೀಶರು ದಂಪತಿಗೆ ಶುಭ ಹಾರೈಸಿ ಕಳುಹಿಸಿದ್ದಾರೆ.