ಬಜರಂಗದಳ ಶೌರ್ಯ ಸಂಚಲನ ಕಾರ್ಯಕ್ರಮದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ್ದ ವಿಹೆಚ್‌ಪಿ ಪ್ರಾಂತ್ಯ ಸರ ಸಂಚಾಲಕ (ಸೆಕ್ರೆಟರಿ) ಶರಣ್ ಪಂಪ್‌ವೆಲ್ ವಿರುದ್ಧ ತುಮಕೂರು ನಗರದ ತಿಲಕ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ತುಮಕೂರು (ಫೆ.1) : ಬಜರಂಗದಳ ಶೌರ್ಯ ಸಂಚಲನ ಕಾರ್ಯಕ್ರಮದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ್ದ ವಿಹೆಚ್‌ಪಿ ಪ್ರಾಂತ್ಯ ಸರ ಸಂಚಾಲಕ (ಸೆಕ್ರೆಟರಿ) ಶರಣ್ ಪಂಪ್‌ವೆಲ್ ವಿರುದ್ಧ ತುಮಕೂರು ನಗರದ ತಿಲಕ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ತುಮಕೂರು(Tumakuru) ನಗರದ ಬಾರ್ ಲೈನ್ ರೋಡ್(Bar line road) ನಿವಾಸಿ ಸೈಯದ್ ಬುರ್ಹಾನ್ ಉದ್ದೀನ್(Syed Burhan Uddin) ಎಂಬುವರು ಶರಣ್ ಪಂಪ್‌ವೆಲ್ ವಿರುದ್ಧ ತಿಲಕ್ ಪಾರ್ಕ್ ಹಾಗೂ ಎಸ್ಪಿಗೆ ದೂರು ನೀಡಿದ್ದರು, ಈ ದೂರು ಆಧರಿಸಿ ತಿಲಕ್ ಪಾರ್ಕ್ ಪೊಲೀಸರು ಶರಣ್ ಪಂಪ್‌ವೆಲ್ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
undefined
ಗುಜರಾತ್ ಹತ್ಯಾಕಾಂಡ ದುರಂತ ಅಲ್ಲ; ಹಿಂದುಗಳ ಪರಾಕ್ರಮ: ಶರಣ್ ಪಂಪ್‌ವೆಲ್ ವಿವಾದಾತ್ಮಕ ಹೇಳಿಕೆ
ಏನಿದು ಪ್ರಕರಣ?
ಕಳೆದ 28ನೇ ತಾರೀಕಿನಂದು ತುಮಕೂರು ನಗರದ ಟೌನ್ ಹಾಲ್ ವೃತ್ತದಲ್ಲಿ ಬಜರಂಗದಳ(Bajrangadal) ಹಾಗೂ ವಿಶ್ವ ಹಿಂದೂ ಪರಿಷತ್(VHP) ಸಂಘಟನೆಗಳು ಶೌರ್ಯ ಸಂಚಲನ(Shourya sanchalan) ಕಾರ್ಯಕ್ರಮ ಆಯೋಜಿಸಲಾಗಿತ್ತು ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಯಾಗಿ ಭಾಗವಹಿಸಿದ್ದ ಶರಣ್ ಪಂಪ್‌ವೆಲ್ ಹಿಂದೂಗಳನ್ನು ಶಕ್ತಿ ಹೀನರು ಎಂದು ಕರೆಯುವ ಸಮಾಜ ಎಚ್ಚರಿಕೆಯಿಂದ ಇರಬೇಕು, ಗುಜರಾತ್ ನಲ್ಲಿ ನಡೆದ ನರಮೇಧಲ್ಲಿ 2000 ಸಾವಿರ ಜನರನ್ನು ಹಿಂದೂಗಳು ಕೊಂದಿದ್ದಾರೆ. ಇದು ಹಿಂದೂಗಳ ಶಕ್ತಿ ಹಾಗೂ ತುಮಕೂರು ಜಿಲ್ಲೆಯನ್ನೂ ಕೂಡ ಹಿಂದೂತ್ವದ ಫ್ಯಾಕ್ಟರಿ ಮಾಡುತ್ತೇವೆ ಎಂದು ಪ್ರಚೋದನಕಾರಿ ಭಾಷಣ ಮಾಡಿದ್ದರು,
ಈ ಭಾಷಣದ ತುಣುಕು ಮಾಧ್ಯಮಗಳಲ್ಲಿ ಪ್ರಸಾರವಾಗಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಶರಣ್ ಪಂಪ್‌ವೆಲ್ ತುಮಕೂರಿನಲ್ಲಿ ಶಾಂತಿ ಕದಡಲು ಯತ್ನಿಸಿದ್ದಾರೆ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೈಯದ್ ಬುರ್ಹಾನ್ ಉದ್ದೀನ್ ದೂರು ನೀಡಿದ್ದರು,
ಮುಸಲ್ಮಾನ್ ಗೂಂಡಾಗಳ ಮನೆಗೆ ನುಗ್ಗಿ ಹೊಡೆಯುತ್ತೇವೆ VHP Sharan Pumpwell
ಈ ಹಿನ್ನೆಲೆ ಶರಣ್ ವಿರುದ್ಧ ಕಲಾಂ 157, ಸಿಆರ್ಪಿಸಿ (a)(b) ಅಡಿಯಲ್ಲಿ ಪ್ರಕರಣ ದಾಖಲು ಮಾಡಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.