ನಾನು ಎಂಬ ಅಹಂ ಬಿಟ್ಟು ದೇವರಿಗೆ ತಲೆ ಬಾಗಬೇಕು: ಮುಖ್ಯಮಂತ್ರಿ ಬೊಮ್ಮಾಯಿ

Published : Feb 01, 2023, 03:44 PM IST
ನಾನು ಎಂಬ ಅಹಂ ಬಿಟ್ಟು ದೇವರಿಗೆ ತಲೆ ಬಾಗಬೇಕು: ಮುಖ್ಯಮಂತ್ರಿ ಬೊಮ್ಮಾಯಿ

ಸಾರಾಂಶ

ಧಾರ್ಮಿಕ ಕಾರ್ಯಗಳನ್ನು ಬೇದ-ಭಾವವಿಲ್ಲದೇ, ಮೇಲು-ಕೀಳು ಎನ್ನದೇ, ಎಲ್ಲರೂ ಒಂದಾಗಿ ಮಾಡಬೇಕು ಎನ್ನುವ ಕಾರಣಕ್ಕೆ ನಮ್ಮ ಹಿರಿಯರು ದೇವಸ್ಥಾನಗಳನ್ನು ನಿರ್ಮಾಣ ಮಾಡಿದ್ದಾರೆ. ದೇವಸ್ಥಾನಕ್ಕೆ ಹೋಗಿ ನಾನು ಎನ್ನುವ ಅಹಂನ್ನು ಬಿಟ್ಡು ದೇವರಿಗೆ ತಲೆ ಬಾಗಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು.

ಹಾವೇರಿ (ಫೆ.1): ಧಾರ್ಮಿಕ ಕಾರ್ಯಗಳನ್ನು ಬೇದ-ಭಾವವಿಲ್ಲದೇ, ಮೇಲು-ಕೀಳು ಎನ್ನದೇ, ಎಲ್ಲರೂ ಒಂದಾಗಿ ಮಾಡಬೇಕು ಎನ್ನುವ ಕಾರಣಕ್ಕೆ ನಮ್ಮ ಹಿರಿಯರು ದೇವಸ್ಥಾನಗಳನ್ನು ನಿರ್ಮಾಣ ಮಾಡಿದ್ದಾರೆ. ದೇವಸ್ಥಾನಕ್ಕೆ ಹೋಗಿ ನಾನು ಎನ್ನುವ ಅಹಂನ್ನು ಬಿಟ್ಡು ದೇವರಿಗೆ ತಲೆ ಬಾಗಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು.

ಇಂದು ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲ್ಲೂಕಿನ ಶಿಡೇನೂರು(Shidenur)ಗ್ರಾಮದಲ್ಲಿ ಮುಕ್ತೇಶ್ವರ ದೇವಸ್ಥಾನ(Mukteshwar Temple) ಉದ್ಘಾಟನೆ ಮಾಡಿದ ಬಳಿಕ ಅವರು ಮಾತನಾಡಿದರು.

ನೆಹರೂ ಓಲೆಕಾರ್ ಅವರ ಹುಟ್ಟೂರು ಶಿಡೇನೂರು. ಅವರು ತಮ್ಮ ಹುಟ್ಟೂರನ್ನು ಮರೆತಿಲ್ಲ ಎನ್ನುವುದನ್ನು ಅವರು ಸಾಬೀತು ಮಾಡಿದ್ದಾರೆ. ಸಾಮಾನ್ಯ ಕುಟುಂಬದಲ್ಲಿ ಹುಟ್ಟಿದ ಅವರು ಕೃಷಿಕರಾಗಿ, ಸಾರ್ವಜನಿಕ ಸಂಘ ಸಂಸ್ಥೆಗಳಲ್ಲಿ ಯಶಸ್ವಿಯಾಗಿ ಕೆಲಸ ಮಾಡಿದ ಬಳಿಕ ಶಾಸಕರಾಗಿ ಈ ಭಾಗದ ಸೇವೆ ಮಾಡುತ್ತಿದ್ದಾರೆ. ತಮ್ಮ ಹುಟ್ಟೂರಿನಲ್ಲಿ ಈ ಧಾರ್ಮಿಕ ಕಾರ್ಯಕ್ರಮ ಮಾಡುವ ಮೂಲಕ ಈ ಊರಿನ ಋಣ ತೀರಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡಿ ಯಶಸ್ವಿಯಾಗಿದ್ದಾರೆ ಎಂದರು.

Union Budget: ಭದ್ರಾ ಮೇಲ್ದಂಡೆ ಯೋಜನೆಗೆ ರೂ. 5300 ಕೋಟಿ ಅನುದಾನ: ಸಿಎಂ ಬಸವರಾಜ ಬೊಮ್ಮಾಯಿ ಹರ್ಷ

ಮುಕ್ತೇಶ್ವರ ಈ ಭಾಗದ ಅತ್ಯಂತ ಪ್ರಮುಖವಾಗಿರುವ ಆರಾಧ್ಯ ದೈವ. ಈ ದೇವಸ್ಥಾನಕ್ಕೆ ತನ್ನದೇಯಾದ ಇತಿಹಾಸವಿದ್ದು, ಇದು ಮುಂದಿನ ದಿನಗಳಲ್ಲಿ ಪ್ರಸಿದ್ದಿ ಪಡೆಯಲಿದೆ. ನಮ್ಮ ಹಿರಿಯರು ಸತ್ ಸಂಪ್ರದಾಯ ಹಾಕಿದ್ದಾರೆ. ಒಂದೆಡೆ ಬಸವಣ್ಣನವರು ನಮ್ಮ ದೇಹವೇ ದೇಗುಲ ಅಂತ ಹೇಳಿದ್ದಾರೆ. ನಮ್ಮ ಆತ್ಮ ಪರಿಶುದ್ದತೆಯಿಂದ ಕೂಡಿರಬೇಕು. ಈ ದೇಹ ನಿರಂತರ ಪರಿಶುದ್ದವಾಗಿರಬೇಕು ಎಂದು ವಚನಗಳಲ್ಲಿ ಹೇಳಿದ್ದಾರೆ. ಅದನ್ನು ಪರಿಪಾಲನೆ ಮಾಡಬೇಕು ಎಂದು ಹೇಳಿದರು.

ಸಾಮೂಹಿಕವಾಗಿ ಎಲ್ಲರೂ ಶುದ್ದವಾಗಿ, ಪರಿಶುದ್ದವಾಗಿರಬೇಕು ಎನ್ನುವ ಕಾರಣಕ್ಕೆ ದೇವಸ್ಥಾನಗಳನ್ನು ನಿರ್ಮಾಣ ಮಾಡಲಾಗುತ್ತದೆ. ದೇವಸ್ಥಾನಕ್ಕೆ ಹೋದರೆ ಮನಸು ಶಾಂತವಾಗಿರುತ್ತದೆ. ಊರಲ್ಲಿ ಒಂದು ತೇರು ಇರುತ್ತದೆ. ತೇರನ್ನು ಯಾವದೇ ಬಡವ ಎಂಬ ಜಾತಿ, ಮತ, ಭೇದ-ಭಾವವಿಲ್ಲದೇ ತೇರು ಎಳೆಯಬೇಕು ಎನ್ನುವ ಕಾರಣಕ್ಕೆ ದೊಡ್ಡ ತೇರು ಮಾಡಿರುತ್ತಾರೆ.  ದೇವಸ್ಥಾನದ ದ್ವಾರ ಬಾಗಿಲು ದೊಡ್ಡದಾಗಿರುತ್ತದೆ. ಅದು ಎಲ್ಲರನ್ನು ಸ್ವಾಗತಿಸುತ್ತದೆ. ಆದರೆ ದೇವಸ್ಥಾನದ ಗರ್ಭಗುಡಿ ಚಿಕ್ಕದಿರುತ್ತದೆ. ಅಲ್ಲಿ ನಾನು ಎನ್ನುವ ಅಹಂನ್ನು ಬಿಟ್ಟು ದೇವರಿಗೆ ತಲೆ ಬಾಗಬೇಕು ಎನ್ನುವ ಕಾರಣಕ್ಕೆ ನಮ್ಮ ಹಿರಿಯರು ಈ ರೀತಿ ಮಾಡಿದ್ದಾರೆ ಎಂದರು.

ಪ್ರತಿ ಕ್ಷಣವೂ ನಮ್ಮಲ್ಲಿ ನಾನು ಎನ್ನುವ ಭಾವನೆ ಇರುತ್ತದೆ. ನಾನು ಎನ್ನುವುದನ್ನು ಮರೆತರೆ, ಆ ಕ್ಷಣ ಭಕ್ತಿಭಾವದಿಂದ ಕೂಡುತ್ತದೆ. ಭಕ್ತಿ ಎಂದರೆ ಉತ್ಕೃಷ್ಟವಾದ ಪ್ರೀತಿ, ದೇವರ ಬಳಿ ಬಂಗಾರ ಬೇಡಿಕೊಳ್ಳುವುದು ವ್ಯವಹಾರವಾಗುತ್ತದೆ. ಭಕ್ತಿಯಿಂದ ದೇವರ ಬಳಿ ಬೇಡಿಕೊಂಡಾಗ ದೇವರು ವರ ನೀಡುತ್ತಾನೆ. ದೇವರು ಕೇಳಿದ್ದಲ್ಲವನ್ನು ಕೊಡುವುದಿಲ್ಲ. ಭಕ್ತಿಯ ಸಮರ್ಪಣೆಯಾದರೆ, ದೇವರು ಬೇಡಿಕೊಳ್ಳದಿದ್ದರೂ ನೀಡುತ್ತಾನೆ. ನೆಹರು ಓಲೆಕಾರ ಅವರು ಒಳ್ಳೆಯ ಕಾರ್ಯ ಮಾಡಿದ್ದಾರೆ. ಮುಕ್ತೇಶ್ವರ ಎಲ್ಲರಿಗೂ ಒಳ್ಳೆಯದನ್ನು ಮಾಡಲಿ ಎಂದರು.

Union Budget 2023 ಮಧ್ಯಮ ವರ್ಗ ಸೇರಿದಂತೆ ಪ್ರತಿ ಕ್ಷೇತ್ರಕ್ಕೆ ಭರಪೂರ ಕೊಡುಗೆ, ಬಜೆಟ್ ಮೇಲೆ ಮೋದಿ ಭಾಷಣ!

ಈ ಸಂದರ್ಭದಲ್ಲಿ ಶಾಸಕರಾದ ನೆಹರು ಓಲೆಕಾರ, ಸದಾಶಿವ ಮಹಾಸ್ವಾಮಿಜೀ, ಮಹೇಶ ತೆಂಗಿನಕಾಯಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

PREV
Read more Articles on
click me!

Recommended Stories

ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು
'ಕುಡುಕರ ಲಿವರ್‌ಗೆ ಸರ್ಕಾರದ ಗ್ಯಾರಂಟಿ ಕೊಡಿ..' ಅಬಕಾರಿ ಆದಾಯ ಹೆಚ್ಚಿಸಲು ಖತರ್ನಾಕ್‌ ಐಡಿಯಾ ಕೊಟ್ಟ ಬಿಜೆಪಿ MLC