ಹಿಂದೂ ಸಂಘನೆಗಳು ಕರೆ ಕೊಟ್ಟ ಬಳ್ಳಾರಿ ಬಂದ್ ಸಂಪೂರ್ಣ ಯಶಸ್ಸು

By Suvarna News  |  First Published Jul 4, 2022, 6:04 PM IST
  • ಹಿಂದೂಗಳನ್ನು ಒಟ್ಟಿಗೆ ಸೇರುವಂತೆ ಮಾಡಿದೆಯಂತೆ ಕನ್ಹಯ್ಯ ಕೊಲೆ
  • ಟೈರ್ ಗೆ ಬೆಂಕಿ ಹಚ್ಚೋ ಮೂಲಕ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು
  • ಶಾಸಕ ಸೋಮಶೇಖರ ರೆಡ್ಡಿ ವೀರಾವೇಷದ ಮಾತು

ವರದಿ : ನರಸಿಂಹ ಮೂರ್ತಿ ಕುಲಕರ್ಣಿ, ಏಷ್ಯಾನೆಟ್ ಸುವರ್ಣನ್ಯೂಸ್
 
ಬಳ್ಳಾರಿ (ಜು.4): ರಾಜಸ್ಥಾನದ ಉದಯಪುರದಲ್ಲಿನ ಕನ್ಹಯ್ಯ ಲಾಲ್ ಕೊಲೆ ನಡೆದು ವಾರ ಕಳೆದ್ರೂ ಇನ್ನೂ ದೇಶಾದ್ಯಾದ್ಯಂತ ಹತ್ತಿದ ಕಿಡಿ ಆರುತ್ತಿಲ್ಲ. ಕಾರಣ ಇದು ಕೇವಲ ಕೊಲೆಯಾಗಿ ಉಳಿಯದೇ ಇಡೀ ದೇಶದಲ್ಲಿರೋ ಹಿಂದೂಗಳ ಭಾವನೆಗಳನ್ನು ಕೆರಳಿಸುವಂತೆ ಮಾಡಿತ್ತು. ಇನ್ನೂ ಕೊಲೆ ಆರೋಪಿಗಳನ್ನು ಬಂಧಿಸೋದಷ್ಟೇ ಅಲ್ಲ ನಡುಬೀದಿಯಲ್ಲಿ ಗಲ್ಲೇಗೇರಿಸಬೇಕೆಂದು ಆಗ್ರಹಿಸಿ ಬಳ್ಳಾರಿ ಬಂದ್ ಮಾಡೋ ಮೂಲಕ   ಇಡೀ ಹಿಂದೂ ಸಮುದಾಯವೇ ಬೀದಿಗೆ ಬಿದ್ದು ಹೋರಾಟ ಮಾಡಿತ್ತು.
 
ಟಯರ್‌ಗೆ ಬೆಂಕಿ ಹಚ್ಚೋ ಮೂಲಕ ಆರಂಭವಾದ ಪ್ರತಿಭಟನೆ: ಇನ್ನೂ ಈಗಾಗಲೇ ರಾಜ್ಯದ್ಯಾಂತ ಹಲವು ಊರುಗಳಲ್ಲಿ ಕನ್ಹಯ್ಯ ಹತ್ಯೆ ಖಂಡಿಸಿ ಪ್ರತಿಭಟನೆ ಬಂದ್ ನಡೆದಿವೆ. ಆದ್ರೇ, ಬಳ್ಳಾರಿಯಲ್ಲಿ ಮಾತ್ರ ಟೈರ್ಗೆ ಬೆಂಕಿ ಹಚ್ಚೋ ಮೂಲಕ ಆರಂಭವಾದ ಪ್ರತಿಭಟನೆ ಮಧ್ಯಾಹ್ನ ಮೂರು ಗಂಟೆಯವರೆಗೂ ಭಿನ್ನವಿಭಿನ್ನವಾಗಿ ನಡೆಯಿತು. ಬಳ್ಳಾರಿಯಲ್ಲಿನ 39 ವಾರ್ಡಿನ ಬಿಜೆಪಿ ಮತ್ತು ಹಿಂದೂ ಪರ ಸಂಘಟನೆ ಕಾರ್ಯಕರ್ತರು ತಮ್ಮದೇ ಆದ ಜನರನ್ನು ಸೇರಿಸೋ ಮೂಲಕ ಬೆಳಿಗ್ಗೆ 8ಗಂಟೆಯಿಂದ ಪ್ರತಿಭಟನೆ  ಆರಂಭಿಸಿದ್ರು. ನಿಧಾನವಾಗಿ ನಗರದ ಹೃದಯ ಭಾಗದಲ್ಲಿರೋ ರಾಯಲ್ ವೃತ್ತವನ್ನು ತಲುಪಿ, ಅಲ್ಲಿಂದ ನೂರಾರು ಬೈಕ್ ಮೂಲಕ ನಗರದಾದ್ಯಂತ ಪ್ರದಕ್ಷಣೆಮಾಡೋ ಮೂಲಕ ಬಂದ್ ಮಾಡುವಂತೆ ಮನವಿ ಮಾಡಿದ್ರು.

ಈ ವೇಳೆ ಮುಸ್ಲಿಂ ಸಮುದಾಯದವರೇ ಹೆಚ್ಚಾಗಿ ವಾಸ ಮಾಡೋ ಕೌಲ್ ಬಜಾರ್ನಲ್ಲಿ ದೊಡ್ಡ ಮಟ್ಟದಲ್ಲಿ ರೌಂಡ್ಸ್ ಹಾಕೋ ಮೂಲಕ ಒಂದಷ್ಟು ಗಮನ ಸೆಳೆಯೋ ಪ್ರಯತ್ನ ಮಾಡಿದ್ರು. ಇನ್ನೂ ಬೈಕ್ ರ್ಯಾಲಿಯ ವೇಳೆ ಮಸೀದಿಯೊಂದರ ಕಾಂಪ್ಲೆಕ್ಸ್ ನಲ್ಲಿರೋ ಅಂಗಡಿ ತರೆದಿದ್ದ ವ್ಯಕ್ತಿಯೊಬ್ಬರು, ಅಂಗಡಿ ಮುಚ್ಚದ ಕಾರಣ ಒಂದಷ್ಟು ಹೈಡ್ರಾಮ ನಡೆಯಿತು. ಈ ವೇಳೆ ಪ್ರತಿಭಟನಾಕಾರರು ಬಲವಂತವಾಗಿ ಅಂಗಡಿಯನ್ನು ಮುಚ್ಚೋ ಮೂಲಕ ಪ್ರತಿಭಟನೆ ಕಾವು ತೀವ್ರ ಗೊಳಿಸಿದ್ರು. ಇನ್ನೂ  ಪೊಲೀಸರ ಮಧ್ಯೆಸ್ಥಿಕೆಯಲ್ಲಿ ಅಲ್ಪದರಲ್ಲಿಯೇ ದೊಡ್ಡ ಗಲಾಟೆಯೊಂದು ತಪ್ಪಿದಂತಾಯಿತು.

Latest Videos

undefined

ಉದಯಪುರ ಕನ್ಹಯ್ಯಾ ಹತ್ಯಾಕಾಂಡ: ಆರೋಪಿ ರಿಯಾಜ್‌ಗೆ ಬಿಜೆಪಿ ಜೊತೆ ನಂಟು, ಕಾಂಗ್ರೆಸ್‌ ಆರೋಪ!
 
ರಾಯಲ್ ವೃತ್ತಲ್ಲಿ ನಡೆದ ಬೃಹತ್ ಧರಣಿ: ಇನ್ನೂ ಬೈಕ್ ರಾಲಿ ಮುಗಿಯುತ್ತಿದ್ದಂತೆ ನಗರದ ಹೃದಯಭಾಗದಲ್ಲಿರೋ ರಾಯಲ್ ವೃತ್ತದಲ್ಲಿ ಎಲ್ಲರೂ ಜಮಾವಣೆಯಾಗೋ ಮೂಲಕ ನೂರಾರು ಜನರು ಘಟನೆಯನ್ನು ಖಂಡಿಸಿದ್ರು. ಈ ವೇಳೆ ರೋಷಾವೇಶದಲ್ಲಿ ಮಾತನಾಡಿದ ಶಾಸಕ ಸೋಮಶೇಖರ ರೆಡ್ಡಿ  ಇದೊಂದು ಹೀನ ಕೃತ್ಯವಾಗಿದೆ. ಭಾರತದಲ್ಲಿ ಎಲ್ಲ ಜಾತಿಜಾನಾಂಗ ದವರು ಅನ್ಯೋನ್ಯವಾಗಿದ್ದೇವೆ. ಆದ್ರೇ, ಕೆಲವರು ಪಾಕಿಸ್ತಾನದವರು ಮಾತು ಕೇಳಿ ಈ ರೀತಿಯ ಕೃತ್ಯವನ್ನು ಮಾಡುತ್ತಾರೆ ಇಂತಹವರನ್ನು ನಡು ಬೀದಿಯಲ್ಲಿ ಗಲ್ಲಿಗೇರಿಸಬೇಕಿದೆ ಎಂದರು.

ಅಲ್ಲದೇ ಮೋದಿಯವರನ್ನು ಕೊಲ್ಲೋ ಬಗ್ಗೆ ಮಾತನಾಡೋ ಇವರನ್ನು ಹೊರಗಡೆ ಬರೋಕಾದ್ರೂ ಸಾಧ್ಯವೇ?  ಬಂದ್ರೇ ಇವರನ್ನು ಬಿಡುತ್ತಾರೆಯೇ ? ಎಂದು ಪ್ರಶ್ನೆಸಿದ್ರು. ಜನರಲ್ಲಿ ಕಲುಷಿತ ವಾತವರಣ ಸೃಷ್ಟಿ ಮಾಡೋ ಕೆಲವರಿಂದ ಶಾಂತಿ ಕದಡೋದು ಬೇಡ ಎಲ್ಲರೂ ಒಗ್ಗಟ್ಟಾಗಿರೋಣ ಎಂದ್ರು. ಇನ್ನೂ ಮಾಜಿ ಸಂಸದೆ ಜೆ. ಶಾಂತ ಮಾತನಾಡಿ ಘಟನೆಯನ್ನು ತೀವ್ರ ಖಂಡಿಸೋದ್ರ ಜೊತೆ ಬೆನ್ನು ಹಿಂದೆ ಚೂರಿ ಹಾಕೋ ಕೆಲಸ ಬಿಟ್ಟು ನೇರವಾಗಿ ಬಂದು ಹೋರಾಟ ಮಾಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ರು.

ಧರ್ಮವನ್ನು ರಕ್ಷಿಸುವ ಸಮಯ ಬಂದಿದೆ; ಕನ್ಹಯ್ಯಾ ಲಾಲ್ ಹತ್ಯೆ ಕುರಿತು ನಟಿ ಪ್ರಣಿತಾ ರಿಯಾಕ್ಷನ್
 
ಭಾಷಣ ಮುಗಿದ ಮೇಲೂ ಪದಾಯಾತ್ರೆ ಮೂಲಕ  ರ್‍ಯಾಲಿ: ಇನ್ನೂ ನಿರಂತರವಾಗಿ ಒಬ್ಬರ ನಂತರ ಒಬ್ಬರು ಘಟನೆ ಖಂಡಿಸಿ ಮಾತನಾಡಿದ ಬಳಿಕ ಪಾದಯಾತ್ರೆ ಮೂಲಕ ಬಳ್ಳಾರಿಯ ಬೆಂಗಳೂರು ರಸ್ತೆ ಮಾರ್ಗವಾಗಿ ಮೆರವಣಿಗೆ ಮಾಡಿದ್ರು. ಕನ್ಹಯ್ಯ ಪರ ಜಯಘೋಷ ಕೂಗೋದ್ರ ಜೊತೆ ಮೋದಿಗೆ ಜೈ ಕಾರ ಹಾಕಿದ್ರು. ನಗರದ ಪ್ರಮುಖ ಬೀದಿಗಳಲ್ಲಿ ಸಂಚಾರ ಮಾಡೋ ಮೂಲಕ ಬಳ್ಳಾರಿ ನಗರವನ್ನು ಕೇಸರಿಮಯ ಮಾಡಿದ್ರು. ಒಟ್ಟಾರೇ ಕನ್ಹಯ್ಯ ಲಾಲ್ ಅವರ ಕೊಲೆ ಮಾತ್ರ  ಇಡೀ ಹಿಂದೂ ಸಮಾಜವನ್ನು ಒಟ್ಟಾಗಿಸಿದ್ದಂತೂ ಸುಳ್ಳಲ್ಲ.

click me!