ರೈತರಿಗೆ ನೀರು ಕೊಡಿ, ಇಲ್ಲ ವಿಷ ಕೊಡಿ : ರಾಜ್ಯ ರೈತ ಸಂಘ

By Kannadaprabha News  |  First Published Sep 1, 2023, 8:15 AM IST

ನಮಗೆ ನೀರು ಕೊಡಿ, ಇಲ್ಲ ವಿಷ ಕೊಡಿ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಅಧ್ಯಕ್ಷ ಹುಚ್ಚೇಗೌಡ ಹೇಳಿದರು.


  ಬನ್ನೂರು :  ನಮಗೆ ನೀರು ಕೊಡಿ, ಇಲ್ಲ ವಿಷ ಕೊಡಿ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಅಧ್ಯಕ್ಷ ಹುಚ್ಚೇಗೌಡ ಹೇಳಿದರು.

ಪಟ್ಟಣದ ಸಂತೆಮಳದಲ್ಲಿ ಗುರುವಾರ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ವತಿಯಿಂದ ಕಾವೇರಿ ನೀರು ನಿಯಂತ್ರಣ ಸಮಿತಿಯ ತೀರ್ಮಾನವನ್ನು ವಿರೋಧಿಸಿ ನಡೆದ ರಸ್ತೆ ತಡೆ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

Tap to resize

Latest Videos

ಕಾವೇರಿ ವಿವಾದ: ಕರ್ನಾ​ಟಕ ನಿಗದಿಯಷ್ಟು ನೀರು ಬಿಟ್ಟಿದೆ, ಪ್ರಾಧಿಕಾರ

ಸ್ಥಳೀಯ ರೈತರ ಬೆಳೆಗೆ ನೀರಿಲ್ಲ, ಬೆಳೆದ ಬೆಳೆ ಸಂಪೂರ್ಣವಾಗಿ ನೆಲ ಕಚ್ಚಿದೆ. ಮಳೆಯ ಅಭಾವದಲ್ಲಿ ರೈತ ಕೆಂಗೆಟ್ಟು ಕುಳಿತಿದ್ದರೂ ಸಹ ನಮ್ಮ ಸರ್ಕಾರಕ್ಕೆ ಮಾತ್ರ ತಮಿಳು ರೈತರ ಪ್ರೇಮದಿಂದ ಕೇಳಿದ ಹಾಗೆ ನೀರು ಬಿಟ್ಟು ಇಲ್ಲಿಯ ರೈತರ ಶೋಷಣೆ ಮಾಡುತ್ತಿರುವುದು ಸರಿಯೇ? ಎಂದು ಅವರು ಪ್ರಶ್ನಿಸಿದ್ದಾರೆ.

ಯಾವುದೇ ಸರ್ಕಾರ ಬಂದರು ರೈತರ ಪರವಾಗಿ ಇರುವುದಿಲ್ಲ ಎಂದು ಬೇಸರಿಸಿದ ಅವರು, ಈಗ ಪ್ರಸ್ತುತ ನೀರಿನ ಅಭಾವ ಇದ್ದು, ಪರಿಸ್ಥಿತಿಯನ್ನು ಕಣ್ಣ ಮುಂದೆ ನೋಡುತ್ತಿರುವಂತ ಸರ್ಕಾರ ರೈತ ವಿರೋದಿ ಕೆಲಸ ಮಾಡುವ ಮೂಲಕ ರೈತರ ಕೆಂಗಣ್ಣಿಗೆ ಗುರಿಯಾಗಿದೆ ಎಂದು ತಿಳಿಸಿದರು.

ಕಾವೇರಿ ವಿವಾದ: ದೆಹಲಿಯಲ್ಲಿ ಕಾನೂನು ತಜ್ಞರು, ಅಧಿಕಾರಿಗಳೊಂದಿಗೆ ಡಿ.ಕೆ.ಶಿವಕುಮಾರ್ ಮಾತು​ಕ​ತೆ

ಕಾವೇರಿ ನೀರು ನಿಯಂತ್ರಣ ಸಮಿತಿಯ ಸರಿಯಾದ ತೀರ್ಮಾನ ತೆಗೆದುಕೊಳ್ಳದೆ ನೆರೆಯ ತಮಿಳುನಾಡಿಗೆ ನೀರು ಹರಿಸುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು. ಈಗಾಗಲೆ ನಮ್ಮ ರೈತರ ಭತ್ತ, ಕಬ್ಬು, ಹಸುವಿನ ಮೇವು ಸೇರಿದಂತೆ ಎಲ್ಲ ಬೆಳೆಗಳು ಒಣಗಿ ನೆಲ ಕಚ್ಚಿದ್ದು, ಬ್ಯಾಂಕ್‌ನಿಂದ ಪಡೆದ ಸಾಲ ತೀರಿಸಲಾರದ ಪರಿಸ್ಥಿತಿ ತಲುಪಿದೆ ಎಂದು ತಿಳಿಸಿದರು. ಬೆಳೆಗಳು ಕೈಗೆ ಬರುವಂತ ಸಮಯದಲ್ಲಿ ನೀರು ನೀಡದೆ, ರೈತರನ್ನು ಈ ರೀತಿ ಶೋಷಣೆ ಮಾಡುವುದು ಅನ್ಯಾಯ ಎಂದರು. ಹೆಗ್ಗೆರೆಯನ್ನು ತುಂಬಿಸಿ ನಾಲೆಗಳಿಗೆ ನೀರು ಹರಿಸುವ ಮೂಲಕ ರೈತರ ಸಂಕಷ್ಟಕ್ಕೆ ಪರಿಹಾರ ನೀಡುವಂತೆ ತಿಳಿಸಿದರು. ನಂತರ ಎಲ್ಲ ರೈತರು ಸೇರಿ ಸಂತೆಮಳದಿಂದ ಕಾವೇರಿ ವೃತ್ತದವರೆಗೆ ಜಾಥ ಮೂಲಕ ಸಾಗಿ ರಸ್ತೆ ತಡೆ ನಡೆಸಿ ಮನವಿಯನ್ನು ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಮಂಜುನಾಥ್‌ಗೆ ನೀಡಿದರು.

ಕುಮಾರಸ್ವಾಮಿ, ಬಿ.ಟಿ. ಮಹೇಶ್‌, ಚಂದ್ರು, ಮಹೇಶ್‌, ಶಿವರಾಜು, ಜಯರಾಮು, ಮಹೇಶ್‌, ರಾಮಚಂದ್ರ, ರಾಮಚಂದ್ರ, ಕೆಂಪೇಗೌಡ, ಪ್ರಭು, ನಾಗರಾಜು, ದಿನೇಶ್‌, ಜಗದೀಶ್‌, ಸೀಹಳ್ಳಿರಾಜು, ಶಂಕರ್‌ ಇದ್ದರು.

click me!