ಕಾವೇರಿ ನೀರು ಬಿಡುವ ತೀರ್ಪಿಗೆ ಖಂಡನೆ

By Kannadaprabha News  |  First Published Sep 1, 2023, 8:12 AM IST

ಕಾವೇರಿ ಮತ್ತು ಕಬಿನಿ ಅಣೆಕಟ್ಟುಗಳಲ್ಲಿ ಸಂಗ್ರಹಿಸಿದ್ದ ನೀರಿನಲ್ಲಿ ತಲಾ 10 ಅಡಿ ಕಡಿಮೆಯಾಗಿದ್ದರೂ ಒಳ ಹರಿವಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಅಂದರೆ ಪ್ರತಿದಿನ 5000 ಕ್ಯುಸೆಕ್‌ ನೀರು ಬಿಡುವಂತೆ ಕಾವೇರಿ ಜಲ ನಿಯಂತ್ರಣ ಪ್ರಾಧಿಕಾರ ಆದೇಶಿಸಿರುವುದು ಖಂಡನೀಯ ಎಂದು ಕನ್ನಡ ಕ್ರಿಯಾ ಸಮಿತಿ ತಿಳಿಸಿದೆ.


  ಮೈಸೂರು : ಕಾವೇರಿ ಮತ್ತು ಕಬಿನಿ ಅಣೆಕಟ್ಟುಗಳಲ್ಲಿ ಸಂಗ್ರಹಿಸಿದ್ದ ನೀರಿನಲ್ಲಿ ತಲಾ 10 ಅಡಿ ಕಡಿಮೆಯಾಗಿದ್ದರೂ ಒಳ ಹರಿವಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಅಂದರೆ ಪ್ರತಿದಿನ 5000 ಕ್ಯುಸೆಕ್‌ ನೀರು ಬಿಡುವಂತೆ ಕಾವೇರಿ ಜಲ ನಿಯಂತ್ರಣ ಪ್ರಾಧಿಕಾರ ಆದೇಶಿಸಿರುವುದು ಖಂಡನೀಯ ಎಂದು ಕನ್ನಡ ಕ್ರಿಯಾ ಸಮಿತಿ ತಿಳಿಸಿದೆ.

ಸಂಕಷ್ಟಕಾಲವೆಂದು ತಿಳಿದಿದ್ದರೂ ಸೂಕ್ತ ನ್ಯಾಯ ಒದಗಿಸದೆ ಪ್ರಾಧಿಕಾರವು ಕರ್ನಾಟಕಕ್ಕೆ  ಅನ್ಯಾಯ ಮಾಡಿದೆ. ಇದರ ಬಗ್ಗೆ ಹೋರಾಟ ಮಾಡಲು ಮೈಸೂರಿನ ಕಾವೇರಿ ಕ್ರಿಯಾ ಸಮಿತಿ ಮುಂದಾಗಬೇಕು ಎಂದು ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷ ಮ.ಗು. ಸದಾನಂದಯ್ಯ, ಪ್ರಧಾನ ಕಾರ್ಯದರ್ಶಿ ಸ.ರ. ಸುದರ್ಶನ ಒತ್ತಾಯಿಸಿದ್ದಾರೆ.

Tap to resize

Latest Videos

click me!