ಮಹನಿಯರ ಜಯಂತಿ ಮೆರವಣಿಗೆ ವೇಳೆ ಸಾಮಾನ್ಯವಾಗಿ ಕಲಾ ಮೇಳಗಳ ಮೆರವಣಿಗೆ ಇರುತ್ತೆ. ದೊಡ್ಡು, ಮದ್ದಲೆಗಳು ಸದ್ದಿನಲ್ಲಿ ಮೆರವಣೆಗೆ ನಡೆಯೋದು ನೋಡಿದ್ದೀರಿ. ಆದರೆ ಗದಗನಲ್ಲಿ ಸಾಮಾಜಿಕ ಸಮಾನತೆಯ ಹರಿಕಾರ ಡಿ. ದೇವರಾಜ ಅರಸು ಅವರ 107 ನೇ ಜಯಂತೋತ್ಸವ ಮೆರವಣಿಗೆಯಲ್ಲಿ ಮಕ್ಕಳು ಜಿಡಿ ಹಾಡಿಗೆ ಕುಣಿದು ಕುಪ್ಪಳಿಸಿದ್ದಾರೆ.
ಗದಗ (ಆ.20) : ಸಾಮಾಜಿಕ ಸಮಾನತೆಯ ಹರಿಕಾರ ಡಿ. ದೇವರಾಜ ಅರಸು ಅವರ 107 ನೇ ಜಯಂತೋತ್ಸವ ಮೆರವಣಿಗೆಯಲ್ಲಿ ಮಕ್ಕಳು ಜಿಡಿ ಹಾಡಿಗೆ ಸ್ಟೆಪ್ಸ್ ಹಾಕಿದ್ರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಒಂಚಾಯ್ತಿ ಗದಗ(Gadag) ಆಶ್ರಯದಲ್ಲಿ ದೇವರಾಜ ಅರಸ್(Devaraj Urs) ಅವರ ಭಾವ ನಡೆದ ಮೆರವಣಿ ನಡೀತು.. ಮೆರವಣಿಗೆಯಲ್ಲಿ, ಹಿಂದುಳಿದ ಇಲಾಖೆಗಳ ವ್ಯಾಪ್ತಿಯ ಹಾಸ್ಟೆಲ್ ವಿದ್ಯಾರ್ಥಿಗಳು(Hostel Students) ಭಾಗಿಯಾಗಿದ್ರು. ದೇವರಾಜ ಅರಸು, ಒಬಿಸಿ ವಸತಿ ನಿಲಯದ ವಿದ್ಯಾರ್ಥಿಗಳು ಮೆರವಣಿಗೆಯಲ್ಲಿದ್ರು.. 'ಗಿಚ್ಚಿ ಗಿಲಿಗಿಲಿ, ಊ ಅಂಟಾವಾ ಮಾವಾ' ಹಾಡಿಗೆ ಮಕ್ಕಳು ಹುಚ್ಚೆದ್ದು ಸ್ಟೆಪ್ಸ್ ಹಾಕಿದ್ರು.. ದೇವರಾಜ ಅರಸು ಭಾವ ಚಿತ್ರದ ಮೆರವಣಿಗೆ ಮುಂದೆ ಸಾಕ್ತಿದ್ರೆ, ಹಿಂದೆ ಸ್ಟೆಪ್ಸ್ ಹಾಕ್ತಾ ನಡೆದ ಮಕ್ಕಳು ಸಾಗಿದ್ರು.. ಮಕ್ಕಳ ಜೊತೆಗೆ ಸಿಬ್ಬಂದಿಯೂ ಸೆಪ್ಟ್ ಹಾಕಿದೆ.. ನಗರದ ಚೆನ್ನಮ್ಮ ಮೃತ್ತದಿಂದ ಕನಕ ಭವನದ ವರೆಗೆ ಮೆರವಣಿಗೆ ನಡೆದಿದೆ.. ನಂತ್ರ ಕನಕ ಭವನದಲ್ಲಿ ಸಭಾ ಕಾರ್ಯಕ್ರಮ ನಡೀತು..
8 ಬಾರಿ ಅರಸು ಕುಟುಂಬದವರ ಆಯ್ಕೆ : 1989ರ ನಂತರ ಗೆಲ್ಲಲಿಲ್ಲ
undefined
ಕಲಾ ಮೇಳದ ಬದಲು ಡಿಜೆ ತಂದರು!
ಮಹನಿಯರ ಜಯಂತಿ ಮೆರವಣಿಗೆ ವೇಳೆ ಸಾಮನ್ಯವಾಗಿ ಕಲಾ ಮೇಳಗಳ ಮೆರವಣಿಗೆ ಇರುತ್ತೆ.. ದೊಡ್ಡು, ಮದ್ದಲೆಗಳು ಸದ್ದಿನಲ್ಲಿ ಮೆರವಣೆಗೆ ನಡೆಯೋದು ಸಾಮನ್ಯ.. ಮೆರವಣಿಗೆಯಲ್ಲಿ ಕಲಾವಿದರನ್ನ ಬಳಕೆ ಮಾಡಿಕೊಳ್ಳುವ ಮೂಲಕ ಸ್ಥಳೀಯ ಕಲಾವಿದರಿಗೆ ಪ್ರೋತ್ಸಾಹ ನೀಡಿದಂತಾಗುತ್ತೆ.. ಆದ್ರೆ, ಇಲಾಖೆ ಡಿಜೆ ಸೌಂಡ್ ಬಾಕ್ಸ್ ಅಳವಡಿಸಿದ್ದು ಜನರು ಮೂಗು ಮುರಿಯುವಂತಾಗಿತ್ತು.