ಅಪರೂಪದ hawksbill ಪ್ರಭೇದದ ಕಡಲಾಮೆ ಪತ್ತೆ

By Ravi Nayak  |  First Published Aug 20, 2022, 2:12 PM IST

ಮಾಜಾಳಿ ಕಡಲತೀರದಲ್ಲಿ ಅರಬ್ಬಿ ಸಮುದ್ರದಲ್ಲಿ ಮೀನುಗಾರರು ಕತ್ತರಿಸಿ ಬಿಟ್ಟಿದ್ದ ಬಲೆಗೆ ಅಪರೂಪದ ಹಾಕ್ಸಿಬಿಲ್‌ ಪ್ರಭೇದದ ಕಡಲಾಮೆ ಸಿಲುಕಿ ದಡಕ್ಕೆ ಬಂದಿದ್ದು, ಅರಣ್ಯಾಧಿಕಾರಿಗಳು ಅದನ್ನು ರಕ್ಷಿಸಿ ಸುರಕ್ಷಿತವಾಗಿ ಸಮುದ್ರಕ್ಕೆ ವಾಪಸ್‌ ಬಿಟ್ಟಿದ್ದಾರೆ


ಕಾರವಾರ (ಆ.20) :ತಾಲೂಕಿನ ಮಾಜಾಳಿ ಕಡಲತೀರದಲ್ಲಿ ಅರಬ್ಬಿ ಸಮುದ್ರದಲ್ಲಿ ಮೀನುಗಾರರು ಕತ್ತರಿಸಿ ಬಿಟ್ಟಿದ್ದ ಬಲೆಗೆ ಅಪರೂಪದ ಹಾಕ್ಸಿಬಿಲ್‌ ಪ್ರಭೇದದ ಕಡಲಾಮೆ ಸಿಲುಕಿ ದಡಕ್ಕೆ ಬಂದಿದ್ದು, ಅರಣ್ಯಾಧಿಕಾರಿಗಳು ಅದನ್ನು ರಕ್ಷಿಸಿ ಸುರಕ್ಷಿತವಾಗಿ ಸಮುದ್ರಕ್ಕೆ ವಾಪಸ್‌ ಬಿಟ್ಟಿದ್ದಾರೆ.

ಹಾಕ್ಸಿಬಿಲ್‌ ಇದು ವಿಶೇಷ ಪ್ರಜಾತಿಯ ಕಡಲಾಮೆಯಾಗಿದ್ದು, ಹವಳದ ದಿಬ್ಬ ಇರುವ ಪ್ರದೇಶದಲ್ಲಿ ಮಾತ್ರ ಕಂಡು ಬರುತ್ತದೆ. ಕಳೆದ ವರ್ಷ ಇದೇ ಪ್ರಭೇದದ ಕಡಲಾಮೆಯ ಮೃತದೇಹ ಕಡಲತೀರದಲ್ಲಿ ಪತ್ತೆಯಾಗಿತ್ತು. ಇದೇ ವರ್ಗದ ಕಡಲಾಮೆ ಮಾಜಾಳಿ ಕಡಲತೀರಕ್ಕೆ ಬಂದಿರುವುದು ಕಡಲ ವಿಜ್ಞಾನಿಗಳ ಕುತೂಹಲಕ್ಕೆ ಕಾರಣವಾಗಿದೆ. ಕಡಲ ವಿಜ್ಞಾನಿಗಳು ಹೇಳುವಂತೆ ಹಾಕ್ಸಿಬಿಲ್‌ ಪ್ರಜಾತಿಯ ಕಡಲಾಮೆಗಳು ಹವಳದ ದಂಡೆ ಪ್ರದೇಶದಲ್ಲಿ ಮಾತ್ರ ಕಂಡು ಬರುತ್ತವೆ. ಆದರೆ ಕಾರವಾರ ಭಾಗದ ಸಮುದ್ರ ತೀರಗಳಲ್ಲಿ ಕಂಡು ಬಂದಿರುವುದನ್ನು ಗಮನಿಸಿದರೆ ಹತ್ತಿರದಲ್ಲೇ ಕಡಲಾಳದಲ್ಲಿ ಹವಳದ ದಿಬ್ಬಗಳ ಬೆಳೆದಿರುವ ಸಾಧ್ಯತೆ ಇದೆ ಎನ್ನುತ್ತಾರೆ.ಡಿಸಿಎಫ್‌ ಪ್ರಶಾಂತ ಕೆ.ಸಿ. ಮಾರ್ಗದರ್ಶನದಲ್ಲಿ ಆರ್‌ಎಫ್‌ಓ ಪ್ರಮೋದ ನಾಯ್ಕ, ಕೋಸ್ಟಲ್‌ ಮರೈನ್‌ ಉಪವಲಯ ಅರಣ್ಯಾಧಿಕಾರಿ ಚಂದ್ರಶೇಖರ್‌ ಕಟ್ಟಿಮನಿ, ಪ್ರಕಾಶ ಯರಗಟ್ಟಿ, ಕಡಲ ವಿಜ್ಞಾನಿಗಳಾದ ಡಾ. ಮೇಘನಾ, ಡಾ. ತೇಜಸ್ವಿನಿ ಇದ್ದರು.

Tap to resize

Latest Videos

Karwar: ರಿಡ್ಲೆ ಕಡಲಾಮೆಗಳ ಅಪರೂಪದ ವಿಡಿಯೋ ಕ್ಯಾಮೆರಾದಲ್ಲಿ ಸೆರೆ

 

click me!