'ತೋ​ರ್ಪ​ಡಿಕೆಗಾಗಿ ಮಾತ್ರ ಕೆಲ ರಾಜ​ಕಾ​ರ​ಣಿ​ಗ​ಳಿಂದ ಬಡ​ವ​ರಿಗೆ ಸಹಾ​ಯ'

Kannadaprabha News   | Asianet News
Published : Jun 13, 2020, 08:25 AM ISTUpdated : Jun 13, 2020, 08:43 AM IST
'ತೋ​ರ್ಪ​ಡಿಕೆಗಾಗಿ ಮಾತ್ರ ಕೆಲ ರಾಜ​ಕಾ​ರ​ಣಿ​ಗ​ಳಿಂದ ಬಡ​ವ​ರಿಗೆ ಸಹಾ​ಯ'

ಸಾರಾಂಶ

ಕೊರೋನಾ ಲಾಕ್‌ಡೌನ್‌ ಸಮಯದಲ್ಲಿ ಸಂಕಷ್ಟದಲ್ಲಿರುವ ಜನಸಾಮಾನ್ಯರಿಗೆ ಸರ್ಕಾ​ರದ ಸೇವೆಗಳು ಪತ್ರಿಕೆಗಳಲ್ಲಿ ಮಾತ್ರ ಸೀಮಿತ| ಅಬಿವೃದ್ಧಿ ಕಾರ್ಯ ಮತ್ತು ಬಡವರಿಗೆ ಅನುಕೂಲವಾಗುವ ಕಾರ್ಯಗಳು ನಡೆಯುತ್ತಿ​ಲ. ಇಂತಹ ರಾಜಕಾರಣಿಗಳಿಗೆ ನಾಚಿಕೆಯಾಗಬೇಕು: ಮಲ್ಲಿಕಾರ್ಜುನ್‌ ಬಿನ್ನಾಳ|

ಕುಕನೂರು(ಜೂ.13): ಇಂದಿನ ಕೆಲ ರಾಜಕಾರಣಿಗಳು ಬರಿ ಪತ್ರಿಕೆಗಳಲ್ಲಿ ಮಾತ್ರ ಬಡವರಿಗೆ ಸಹಾಯ ಮಾಡುತ್ತಿದ್ದಾರೆ. ಆದರೆ, ನಮ್ಮ ತಾಲೂಕಿನ ಮಾಜಿ ಸಚಿವ ಬಸವರಾಜ ರಾಯರಡ್ಡಿ ಬಡವರ ಆರೋಗ್ಯ ಸುಧಾರಣೆಗಾಗಿ ಆಹಾರ ಕಿಟ್‌ಗಳನ್ನು ವಿತರಿಸುತ್ತಿದ್ದಾರೆ ಎಂದು ತಾಲೂಕು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಡಾ. ಮಲ್ಲಿಕಾರ್ಜುನ್‌ ಬಿನ್ನಾಳ ಹೇಳಿದ್ದಾರೆ. 

ಪಟ್ಟಣದ ಸಂಜಯನಗರದಲ್ಲಿ ಮಾಜಿ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿಯವರ ಅಭಿಮಾನಿ ಬಳಗ ಮತ್ತು ಸತ್ಯಸಾಯಿ ಅನ್ನಪೂರ್ಣ ಸೇವಾ ಟ್ರಸ್ಟ್‌ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಬಡವರಿಗೆ ಆಹಾರ ಕಿಟ್‌ ವಿತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಗಂಗಾವತಿ: ಸೀಲ್‌ಡೌನ್‌ ಮಾಡಿದ್ರೂ ಕ್ಯಾರೇ ಎನ್ನದ ಜನ..!

ಕೊರೋನಾ ಲಾಕ್‌ಡೌನ್‌ ಸಮಯದಲ್ಲಿ ಸಂಕಷ್ಟದಲ್ಲಿರುವ ಜನಸಾಮಾನ್ಯರಿಗೆ ಸರ್ಕಾ​ರದ ಸೇವೆಗಳು ಪತ್ರಿಕೆಗಳಲ್ಲಿ ಮಾತ್ರ ಸೀಮಿತವಾಗಿವೆ. ಆದರೆ, ಯಾವುದೇ ರೀತಿಯಾದ ಅಬಿವೃದ್ಧಿ ಕಾರ್ಯ ಮತ್ತು ಬಡವರಿಗೆ ಅನುಕೂಲವಾಗುವ ಕಾರ್ಯಗಳು ನಡೆಯುತ್ತಿ​ಲ. ಇಂತಹ ರಾಜಕಾರಣಿಗಳಿಗೆ ನಾಚಿಕೆಯಾಗಬೇಕು. ಇದನ್ನೆಲ್ಲ ಅರಿತ ಜಿಲ್ಲೆಯ ಮಾಜಿ ಸಚಿವ ಬಸವರಾಜ ರಾಯರಡ್ಡಿ ಮಾತ್ರ ಬಡ ಜನರ ಆರೋಗ್ಯ ಸುಧಾರಣೆಗಾಗಿ ಕೆಲ ಸಂಸ್ಥೆ ಗಳೊಂದಿಗೆ 5 ಸಾವಿರದಷ್ಟುಆಹಾರ ಸಾಮಗ್ರಿಗಳನ್ನು ಕ್ರೂಢೀ​ಕ​ರಿ​ಸಿ ಕಿಟ್‌ಗಳನ್ನು ವಿತರಣೆ ಮಾಡುತ್ತಿದ್ದಾರೆ. ಮೊದಲ ಲಾಕ್‌ಡೌನ್‌ ಸಂದರ್ಭದಲ್ಲಿ 6 ಸಾವಿರ ಕಿಟ್‌, ನಂತರ 5 ಸಾವಿರ ಕಿಟ್‌ಗಳನ್ನು ನೀಡುತ್ತಿದ್ದಾರೆ. ಇಂತಹ ನಾಯಕರು ನಮಗೆ ಎಂದೆದಿಗೂ ಮಾದರಿ ಎಂದ​ರು.

ಸರಕಾರ ಮಾಡುವ ಕೆಲಸವನ್ನು ರಾಜ್ಯದ ಪ್ರತಿಷ್ಠಿತ ಸಂಘ-ಸಂಸ್ಥೆಗಳು ಮಾಡು​ತ್ತಿದ್ದು, ಸತ್ಯಸಾಯಿ ಟ್ರಸ್ಟ್‌ನವರು 9 ಪ್ರಕಾರದ ದಿನಸಿ ಸಾಮಗ್ರಿಗಳನ್ನು ನೀಡುತ್ತಿದ್ದಾರೆ. ಆ ಮೂಲಕ ತಾಲೂಕಿನ ಜನತೆಯ ಪ್ರೀತಿಗೆ ಪಾತ್ರರಾಗಿದ್ದಾರೆ. ಲಾಕ್‌​ಡೌ​ನ್‌ನಲ್ಲಿ ಬಡವರು, ಕೂಲಿ ಕಾರ್ಮಿಕರಿಗೆ ಜೀವನ ನಡೆಸುವುದು ಕಷ್ಟವಾಗಿದ್ದು, ಸರಕಾರ ತಕ್ಕ ಮಟ್ಟಿನ ನೆರವು ನೀಡುತ್ತಿದೆ. ಸಾಮಾಜಿಕ ಕಳಕಳಿ ಹೊಂದಿರುವ ಎಲ್ಲರೂ ಕೈಲಾದಷ್ಟುಸಹಾಯ ಮಾಡಬೇಕು. ಅದರಂತೆ ಪ್ರತಿ ಗ್ರಾಮೀಣ ಮಟ್ಟದಲ್ಲಿ 40 ರಿಂ​ದ 50 ಕಿಟ್‌ ವಿತರಣೆ ಮಾಡಲಾಗುತ್ತಿದೆ. ಕಡು ಬಡವರಿಗೆ ಮಾತ್ರ ಈ ಕಿಟ್‌ ಗಳನ್ನು ನೀಡಲಾಗುತ್ತಿದೆ. ಉಳ್ಳವರು ಕಿಟ್‌ಗಳನ್ನು ಪಡೆಯಬಾರದು ಎಂದು ಸಲಹೆ ನಿಡಿದರು. ಈ ಸಂದರ್ಭದಲ್ಲಿ ವೀರಣ್ಣ ಶಿವಶಕ್ಕತ, ಸಂಗಪ್ಪ ಶಿವರಡ್ಡಿ, ಬರಮಪ್ಪ ಕಳ್ಳಿಮಠ. ಡಾ. ಜಿ.ಜಿ. ಅಂಗಡಿ, ಶರಣಯ್ಯ ಶಸಿ ಮಠ, ಮಲ್ಲಪ್ಪ ಗುತ್ತಿ ಮತ್ತಿ​ತ​ರ​ರಿ​ದ್ದ​ರು.
 

PREV
click me!

Recommended Stories

4,808 ಕೋಟಿ ವೆಚ್ಚದಲ್ಲಿ ರಸ್ತೆಗಳ ಅಭಿವೃದ್ಧಿ
ಮಧುಗಿರಿ: ಕದ್ದ ಎಟಿಎಂ ಭಾರ ಇದೆ ಎಂದು ರಸ್ತೆಯಲ್ಲೇ ಬಿಟ್ಟು ಹೋದರು