ರಾಜ್ಯಾದ್ಯಂತ ಆವರಿಸುತ್ತಿರುವ ಕೋವಿಡ್-19 ಮಹಾಮಾರಿಯಿಂದಾಗಿ ಆರ್ಥಿಕ ಸಂಕಷ್ಟದಲ್ಲಿರುವ ಪೋಷಕರು ತಮ್ಮ ಮಕ್ಕಳ ಶಾಲಾ ಶುಲ್ಕವನ್ನು ಭರಿಸಲಾಗದೆ ಸಂಕಷ್ಟಕ್ಕೀಡಾಗಿರುವ ಈ ಹೊತ್ತಲ್ಲಿ ಬೈಂದೂರು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿತಮ್ಮ ಅಧೀನದಲ್ಲಿರುವ ನಾಲ್ಕು ಶಿಕ್ಷಣ ಸಂಸ್ಥೆಗಳ ಶಾಲಾ ಶುಲ್ಕದಲ್ಲಿ ಅಂದಾಜು 70 ಲಕ್ಷ ರುಪಾಯಿಗಳನ್ನು ಮನ್ನಾ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ಕುಂದಾಪುರ(ಜೂ.13): ರಾಜ್ಯಾದ್ಯಂತ ಆವರಿಸುತ್ತಿರುವ ಕೋವಿಡ್-19 ಮಹಾಮಾರಿಯಿಂದಾಗಿ ಆರ್ಥಿಕ ಸಂಕಷ್ಟದಲ್ಲಿರುವ ಪೋಷಕರು ತಮ್ಮ ಮಕ್ಕಳ ಶಾಲಾ ಶುಲ್ಕವನ್ನು ಭರಿಸಲಾಗದೆ ಸಂಕಷ್ಟಕ್ಕೀಡಾಗಿರುವ ಈ ಹೊತ್ತಲ್ಲಿ ಬೈಂದೂರು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿತಮ್ಮ ಅಧೀನದಲ್ಲಿರುವ ನಾಲ್ಕು ಶಿಕ್ಷಣ ಸಂಸ್ಥೆಗಳ ಶಾಲಾ ಶುಲ್ಕದಲ್ಲಿ ಅಂದಾಜು 70 ಲಕ್ಷ ರುಪಾಯಿಗಳನ್ನು ಮನ್ನಾ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ಕೋವಿಡ್-19 ಲಾಕ್‌ಡೌನ್‌ನಿಂದ ಮನೆಯಲ್ಲೇ ಇದ್ದ ಕಾರಣ ಆದಾಯವಿರಲಿಲ್ಲ. ಹೀಗಾಗಿ ಮಕ್ಕಳ ಶಾಲಾ ಶುಲ್ಕವನ್ನು ಕಟ್ಟಲಾಗದೆ ಅಂತಂತ್ರ ಸ್ಥಿತಿಯಲ್ಲಿ ಸಿಲುಕಿರುವ ಪೋಷಕರ ಸಂಕಷ್ಟದ ಕುರಿತು ಕನ್ನಡಪ್ರಭ ಸಹೋದರ ಸಂಸ್ಥೆಯಾಗಿರುವ ಸುವರ್ಣ ನ್ಯೂಸ್ ‘ಈ ವರ್ಷ ಅರ್ಧ ಫೀಸ್’ ಎಂಬ ಅಭಿಯಾನ ಆರಂಭಿಸಿರುವ ಬೆನ್ನಲ್ಲೇ ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು ಶುಲ್ಕ ವಿನಾಯಿತಿ ಘೋಷಿಸಿದೆ. ಅಂತೆಯೇ ತಾಲೂಕಿನ ಕುಂದಾಪುರ ಎಜುಕೇಶನ್ ಸೊಸೈಟಿಯ ಅಧೀನದಲ್ಲಿ ನಡೆಯುತ್ತಿರುವ 4 ಪ್ರಮುಖ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳ ಶಾಲಾ ಶುಲ್ಕದಲ್ಲಿ ಅಂದಾಜು 70 ಲಕ್ಷ ರು. ಮನ್ನಾ ಮಾಡುವ ದಿಟ್ಟನಿರ್ಧಾರವನ್ನು ಕೈಗೊಂಡಿದೆ.
undefined
ಕಾರ್ಮಿಕರಿಗೆ 10 ತಾಸು ಬದಲು 9 ತಾಸು ಮಾತ್ರ ಕೆಲಸ!
ಕುಂದಾಪುರ ಎಜುಕೇಶನ್ ಸೊಸೈಟಿಯ ಅಧೀನದಲ್ಲಿ ಎಲ್‌ಕೆಜಿ ಯಿಂದ ಪದವಿ ಶಿಕ್ಷಣ ನೀಡುವ 4 ಶಿಕ್ಷಣ ಸಂಸ್ಥೆಗಳಿದ್ದು, ಡಾ.ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು, ಆರ್.ಎನ್. ಶೆಟ್ಟಿಪದವಿ ಪೂರ್ವ ಕಾಲೇಜು, ವಿಕೆಆರ್ ಆಚಾರ್ಯ ಆಂಗ್ಲ ಮಾಧ್ಯಮ ಶಾಲೆ ಹಾಗೂ ಎಚ್‌ಎಂಎಂ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ಅಂದಾಜು 4,000 ವಿದ್ಯಾರ್ಥಿಗಳು ವಿದ್ಯಾಭ್ಯಾಸ ನಡೆಸುತ್ತಿದ್ದಾರೆ. ಪ್ರತಿ ಶೈಕ್ಷಣಿಕ ವರ್ಷದಲ್ಲಿ 4 ತ್ರೈಮಾಸಿಕಗಳಲ್ಲಿ ವಿದ್ಯಾರ್ಥಿಗಳಿಗೆ ಶಾಲಾ ಶುಲ್ಕ ಪಾವತಿಸಲು ಹಾಗೂ ವರ್ಷದ ಬಾಕಿ ಶುಲ್ಕವನ್ನು ಪರೀಕ್ಷಾ ಅವಧಿಯ ಕೊನೆಯ ತ್ರೈಮಾಸಿಕದಲ್ಲಿ ತುಂಬಲು ಅವಕಾಶ ನೀಡಲಾಗುತ್ತದೆ.
ಕೊರೋನಾ ಸೋಂಕಿತೆ ತುಂಬು ಗರ್ಭಿಣಿಗೆ ಹೆರಿಗೆ
ಶುಲ್ಕ ಮನ್ನಾ ಕುರಿತು ಕನ್ನಡಪ್ರಭದೊಂದಿಗೆ ಮಾತನಾಡಿದ ಕುಂದಾಪುರ ಎಜುಕೇಶನ್ ಸೊಸೈಟಿಯ ಅಧ್ಯಕ್ಷ ಹಾಗೂ ಬೈಂದೂರು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ, ಲಾಕ್‌ಡೌನ್‌ನಿಂದ ಬಹುತೇಕ ಮಂದಿ ಸಂಕಷ್ಟದಲ್ಲಿದ್ದಾರೆ. ನಮ್ಮ ವಿದ್ಯಾಸಂಸ್ಥೆಗಳ ಪೋಷಕರೂ ಇದಕ್ಕೆ ಹೊರತಾಗಿಲ್ಲ. ಈ ಹಿನ್ನೆಲೆಯಲ್ಲಿ ಈ ಶೈಕ್ಷಣಿಕ ವರ್ಷದ ಕೊನೆಯ ಅವಧಿಯಲ್ಲಿ ವಿದ್ಯಾರ್ಥಿಗಳಿಂದ ಸಂಸ್ಥೆಗೆ ಬರಬೇಕಾಗಿರುವ 1.5 ಕೋಟಿ ರು. ಶಾಲಾ ಶುಲ್ಕದಲ್ಲಿ ಅಂದಾಜು 70 ಲಕ್ಷ ಮನ್ನಾ ಮಾಡಲು ನಿರ್ಧರಿಸಲಾಗಿದೆ. ತಂದೆ-ತಾಯಿ ಇಲ್ಲದ ವಿದ್ಯಾರ್ಥಿಗಳಿಗೆ ಬಾಕಿ ಶುಲ್ಕದಲ್ಲಿ ಸಂಪೂರ್ಣ ಮನ್ನಾ, ತಂದೆ ಅಥವಾ ತಾಯಿ ಒಬ್ಬರನ್ನು ಕಳೆದುಕೊಂಡ ವಿದ್ಯಾರ್ಥಿಗಳಿಗೆ ಶೇ.50 ಮನ್ನಾ, ಬಡ ಕುಟುಂಬದ ವಿದ್ಯಾರ್ಥಿಗಳಿಗೂ ವಿಶೇಷ ರಿಯಾಯಿತಿಯನ್ನು ನೀಡಲಾಗುತ್ತದೆ. ಆದರೆ ಹಣಕಾಸು ಸ್ಥಿತಿ ಉತ್ತಮ ಇರುವ ಪೋಷಕರಿಂದ ಪೂರ್ಣ ಶುಲ್ಕ ಪಡೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.