ಎಲ್ಲ 21 ಸೋಂಕಿತರು ಗುಣಮುಖ| ನಿನ್ನೆ ಆಸ್ಪತ್ರೆಯಿಂದ ಬಿಡುಗಡೆ| ಕಿತ್ತಳೆ ವಲಯದಿಂದ ಹಸಿರು ವಲಯಕ್ಕೆ ಹಾವೇರಿ ಜಿಲ್ಲೆ| ಕೊರೋನಾ ಸೋಂಕಿತರ ಪ್ರಥಮ, ದ್ವಿತೀಯ ಸಂಪರ್ಕದಲ್ಲಿರುವ 506 ಜನರನ್ನು ಕ್ವಾರಂಟೈನ್‌ನಲ್ಲಿಟ್ಟು ನಿಗಾ|
ಹಾವೇರಿ(ಜೂ.13): ಕೊರೋನಾ ಸೋಂಕಿನಿಂದ ಆಸ್ಪತ್ರೆಯಲ್ಲಿ ಉಳಿದಿದ್ದ ಕೊನೆಯ 7 ಜನರು ಗುಣಮುಖರಾಗಿ ಶುಕ್ರವಾರ ಬಿಡುಗಡೆಯಾಗುವುದರೊಂದಿಗೆ ಹಾವೇರಿ ಈಗ ಕೊರೋನಾ ಮುಕ್ತ ಜಿಲ್ಲೆಯಾಗಿ ಮಾರ್ಪಟ್ಟಿದೆ. ಜಿಲ್ಲೆಯಲ್ಲಿ ಪತ್ತೆಯಾದ ಎಲ್ಲ 21 ಕೊರೋನಾ ಸೋಂಕಿತರು ಗುಣಮುಖರಾಗಿದ್ದಾರೆ.
ಶುಕ್ರವಾರ ಪಿ-2495, ಪಿ-3668, ಪಿ-4533, ಪಿ 4534, ಪಿ-5002, ಪಿ -5003, ಪಿ-5004 ವ್ಯಕ್ತಿಗಳು ಕೋವಿಡ್‌ನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಒಟ್ಟಾರೆ ಕೊರೋನಾ ಸೋಂಕಿನಿಂದ 21 ಜನ ದಾಖಲಾಗಿದ್ದು, ಎಲ್ಲರೂ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಸದ್ಯಕ್ಕೆ ಕೊರೋನಾ ಪಾಸಿಟಿವ್ ಪ್ರಕರಣಗಳು ಇಲ್ಲ. ಆದ್ದರಿಂದ ಕಿತ್ತಳೆ ವಲಯದಿಂದ ಜಿಲ್ಲೆ ಹಸಿರು ವಲಯಕ್ಕೆ ತಿರುಗಿದೆ. ಗುರುವಾರದ ವರೆಗೆ 14 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದು, ಶುಕ್ರವಾರ ಉಳಿದ ಎಲ್ಲ 7 ಜನರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದರು. ಬಹುತೇಕ ಎಲ್ಲ ಸೋಂಕಿತರು ಮಹಾರಾಷ್ಟ್ರ ನಂಟು ಹೊಂದಿದವರೇ ಆಗಿದ್ದರು.
ಕೊರೊನಾ ಭೀತಿಯ ನಡುವೆಯೂ ಜಾತ್ರೆ ಮಾಡಿ ಸಂಭ್ರಮಿಸಿದ ಜನ
ದೆಹಲಿ ಪ್ರಯಾಣ ಬೆಳೆಸಿದ್ದ ಹಾವೇರಿ ಜಿಲ್ಲೆ ಮೂಲದ ವ್ಯಕ್ತಿಯೋರ್ವನಿಗೆ ಕೊರೋನಾ ಸೋಂಕು ತಗುಲಿರುವುದು ಬೆಂಗಳೂರಿನಲ್ಲಿ ಪತ್ತೆಯಾಗಿದ್ದು, ಆತನಿಗೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಈ ವ್ಯಕ್ತಿಯನ್ನು ರಾಜ್ಯ ಆರೋಗ್ಯ ಇಲಾಖೆ ಹಾವೇರಿ ಜಿಲ್ಲೆಯವನು ಎಂದು ಪರಿಗಣಿಸಿ ಬುಲೆಟಿನ್‌ನಲ್ಲಿ 22 ಸೋಂಕಿತರು ಎಂಬ ತಪ್ಪು ಮಾಹಿತಿ ಬರುತ್ತಿದೆ. ಜಿಲ್ಲಾಡಳಿತ ಮಾತ್ರ ಜಿಲ್ಲೆಯಲ್ಲಿ ಪತ್ತೆಯಾದ ಕೊರೋನಾ ಸೋಂಕಿತರ ಸಂಖ್ಯೆ 21 ಎಂದು ಹೇಳುತ್ತಿದೆ.
129 ಜನರ ವರದಿಗಳು ನೆಗೆಟಿವ್
ಕೊರೋನಾ ಲಕ್ಷಣಗಳ ಆಧಾರದ ಮೇಲೆ ಶುಕ್ರವಾರ 129 ಜನರ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, 129 ಜನರ ವರದಿಗಳು ನೆಗೆಟಿವ್ ಬಂದಿವೆ ಎಂದು ಡಿಎಚ್‌ಒ ಡಾ. ರಾಜೇಂದ್ರ ದೊಡ್ಡಮನಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 21 ಕೊರೋನಾ ಪ್ರಕರಣ ದೃಢಪಟ್ಟಿದ್ದವು. ಇವರೆಲ್ಲರೂ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಕೊರೋನಾ ಸೋಂಕಿತರ ಪ್ರಥಮ, ದ್ವಿತೀಯ ಸಂಪರ್ಕದಲ್ಲಿರುವ 506 ಜನರನ್ನು ಕ್ವಾರಂಟೈನ್‌ನಲ್ಲಿಟ್ಟು ನಿಗಾ ವಹಿಸಲಾಗಿದೆ. ಕೊರೋನಾ ಲಕ್ಷಣಗಳ ಆಧಾರ ಮೇಲೆ ಈ ವರೆಗೆ ಒಟ್ಟು 8,201 ಜನರ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. 8131 ಜನರ ವರದಿ ನೆಗೆಟಿವ್ ಬಂದಿವೆ. ಎಲ್ಲ 21 ಸೋಂಕಿತರು ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ ಎಂದು ತಿಳಿಸಿದ್ದಾರೆ.