ಅದೂ ಪ್ರಧಾನಿ ನರೇಂದ್ರ ಮೋದಿ ಅವರ ಕನಸ್ಸಿನ ಯೋಜನೆ. ಪ್ರತಿ ಗ್ರಾಮ ಪಂಚಾಯ್ತಿಯಲ್ಲೂ ಲಕ್ಷಾಂತರ ರುಪಾಯಿ ಖಚು೯ ಮಾಡಿ ಆ ಯೋಜನೆಯ ಘಟಕವನ್ನು ಸ್ಥಾಪನೆ ಮಾಡಿದ್ದಾರೆ. ಆದರೆ ಇಲ್ಲೊಂದು ಗ್ರಾಮ ಪಂಚಾಯ್ತಿಯಲ್ಲಿ ಎಲ್ಲವೂ ಸಿದ್ದವಾಗಿದ್ದರೂ ಉದ್ಘಾಟನೆ ಮಾಡದೇ ಮೀನಾಮೇಷ ಎಣಿಸುತ್ತಿದ್ದು, ಕಾಲಹರಣ ಮಾಡ್ತಿದ್ದಾರೆ.
ವರದಿ: ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್, ಕೋಲಾರ
ಕೋಲಾರ (ಜು.25): ಅದೂ ಪ್ರಧಾನಿ ನರೇಂದ್ರ ಮೋದಿ ಅವರ ಕನಸ್ಸಿನ ಯೋಜನೆ. ಪ್ರತಿ ಗ್ರಾಮ ಪಂಚಾಯ್ತಿಯಲ್ಲೂ ಲಕ್ಷಾಂತರ ರುಪಾಯಿ ಖಚು೯ ಮಾಡಿ ಆ ಯೋಜನೆಯ ಘಟಕವನ್ನು ಸ್ಥಾಪನೆ ಮಾಡಿದ್ದಾರೆ. ಆದರೆ ಇಲ್ಲೊಂದು ಗ್ರಾಮ ಪಂಚಾಯ್ತಿಯಲ್ಲಿ ಎಲ್ಲವೂ ಸಿದ್ದವಾಗಿದ್ದರೂ ಉದ್ಘಾಟನೆ ಮಾಡದೇ ಮೀನಾಮೇಷ ಎಣಿಸುತ್ತಿದ್ದು, ಕಾಲಹರಣ ಮಾಡ್ತಿದ್ದಾರೆ. ಈ ಕುರಿತ ವರದಿ ಇಲ್ಲಿದೆ ನೋಡಿ.
ಒಂದೂ ಕಡೆ ಎಲ್ಲಂದರಲ್ಲಿ ಕಸವನ್ನು ಬಿಸಾಡಿ ಹೋಗುತ್ತಿರುವ ಗ್ರಾಮಸ್ಥರು. ಮತ್ತೊಂದು ಕಡೆ ನಿಂತಲ್ಲೇ ನಿಂತಿರುವ ಕಸ ಸಂಗ್ರಹಿಸುವ ನೂತನ ವಾಹನ. ಕಸ ವಿಲೇವಾರಿ ಘಟಕ ಸಿದ್ದವಾಗಿದ್ರೂ ಉದ್ಘಾಟನೆ ಮಾಡದೇ ಬಿಗಿ ಹಾಕಿರುವ ಸಂಬಂಧಪಟ್ಟ ಅಧಿಕಾರಿಗಳು. ಹೌದು! ಹೀಗೆ ಪ್ರಧಾನಿ ನರೇಂದ್ರ ಮೋದಿ ಅವರ ಕನಸ್ಸಿನ ಯೋಜನೆಯಲ್ಲೇ ಹೆಚ್ಚು ಖ್ಯಾತಿ ಪಡೆದಿರುವ ಸ್ವಚ್ಛ ಭಾರತ್ ಮಿಷನ್ ಯೋಜನೆ ಸಹ ಒಂದೂ. ಪ್ರತಿ ಗ್ರಾಮ ಪಂಚಾಯ್ತಿಯಲ್ಲೂ ಸ್ವಚ್ಛ ಭಾರತ್ ಯೋಜನೆಯನ್ನು ಜಾರಿಗೆ ತರಬೇಕು ಅನ್ನೋ ಉದ್ದೇಶದಿಂದ ಕೇಂದ್ರ ಸಕಾ೯ರವೇ ಹಣ ಬಿಡುಗಡೇ ಮಾಡಿ ಕಸ ಸಂಗ್ರಹಿಸಲು ಒಂದೂ ವಾಹನ ಹಾಗೂ ಪಂಚಾಯ್ತಿಗೆ ಒಂದೂ ವಿಲೆವಾರಿ ಘಟಕವನ್ನು ಸ್ಥಾಪನೆ ಮಾಡಿದೆ.
ಕೊಲೆ ಮಾಡೋದೇ ಫ್ಯಾಷನ್, ಆರೋಪಿಗಳ ವಿರುದ್ಧ ಕೋಕಾ ದಾಖಲಿಸಲು ಚಿಂತನೆ!
ಹೀಗಿರುವಾಗ ಕೋಲಾರ ತಾಲೂಕಿನ ಹೋಳೂರು ಗ್ರಾಮ ಪಂಚಾಯ್ತಿಯಲ್ಲೂ ಅಂದಾಜು 11 ಲಕ್ಷ 82 ಸಾವಿರ ಹಣವನ್ನು ಖಚು೯ ಮಾಡಿ ಒಂದೂ ಕಸ ವಿಲೇವಾರಿ ಘಟಕವನ್ನು ಸ್ಥಾಪನೆ ಮಾಡಿದೆ, ಕಳಪೆ ಕಾಮಗಾರಿ ಇಲ್ಲದೇ ಉತ್ತಮ ಗುಣಮಟ್ಟದ ಘಟಕವನ್ನು ಸ್ಥಾಪನೆ ಮಾಡಿ ಒಂದೂ ವಷ೯ ಆಗುತ್ತಾ ಬಂದ್ರೂ ಸಹ ಅದ್ಯಾಕೋ ಇನ್ನು ಸಂಬಂಧ ಪಟ್ಟ ಜಿಲ್ಲಾ ಪಂಚಾಯ್ತಿ ಸಿಇಓ ಹಾಗೂ ಪಿಡಿಓ ಅಧಿಕಾರಿಗಳು ಉದ್ಘಾಟನೆ ಮಾಡದೇ ಕಾಲಾಹರಣ ಮಾಡುತ್ತಿದ್ದಾರೆ.ಇದೂ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನು ನಮ್ಮ ನಡಿಗೆ ಸ್ವಚ್ಚತೆ ಕಡೆಗೆ ಅನ್ನೋ ಧ್ಯೇಯ ವಾಕ್ಯದೊಂದಿಗೆ ಸ್ವಚ್ಚ ಭಾರತ್ ಯೋಜನೆಗೆ ಚಾಲನೆ ನೀಡಲಾಗಿದೆ.
ಘನ ಹಾಗೂ ಧ್ರವ ತ್ಯಾಜ್ಯವನ್ನು ವಿಂಗಡಣೆ ಮಾಡುವ ವಿಲೆವಾರಿ ಘಟಕ ಇದಾಗಿದ್ದು, ಬಳಕೆ ಆಗದೇ ಬೇರೆ ರೀತಿಯ ಚಟುವಟಿಕೆಗಳ ತಾಣವಾಗಲು ದಾರಿ ಮಾಡಿಕೊಡುವಂತ್ತಾಗಿದೆ. ಈಗಾಗಲೇ ಸ್ವಚ್ಛ ಭಾರತ್ ಯೋಜನೆಯ ಅಡಿಯಲ್ಲಿ ನೂತವಾದ ಕಸ ಸಂಗ್ರಹಿಸುವ ವಾಹನವನ್ನು ಸಹ ಖರೀದಿ ಮಾಡಲಾಗಿದ್ದು, ಅದೂ ಸಹ ನಿಂತಲ್ಲೇ ನಿಂತು ತುಕ್ಕು ಹಿಡಿಯುತ್ತಿದೆ. ಕಸ ವಿಲೇವಾರಿ ಘಟಕದ ಚಾಲನೆಗೆ ಯಾವುದೇ ತಾಂತ್ರಿಕ ದೋಷ ಅಥವಾ ಕಾಮಗಾರಿ ಅಪೂಣ೯ಗೊಂಡಿರುವ ಕಾರಣಗಳು ಇಲ್ಲದೇ ಇದ್ರು ಸಹ ಅಧಿಕಾರಿಗಳ ಇಚ್ಛಾ ಶಕ್ತಿ ಕೊರತೆಯಿಂದ ಇನ್ನು ಉದ್ಘಾಟನಾ ಭಾಗ್ಯ ಸಿಕ್ಕಿಲ್ಲ.
'ಸಿದ್ದರಾಮಯ್ಯ ಏನಾದ್ರೂ ಕೋಲಾರಕ್ಕೆ ಬಂದ್ರೆ ಸೋಲಿನ ವಿದಾಯ ಖಚಿತ'
ಕೇಂದ್ರ ಹಾಗೂ ರಾಜ್ಯದಲ್ಲಿ ಎರಡೂ ಕಡೆಗಳಲ್ಲು ಬಿಜೆಪಿ ಸಕಾ೯ರ ಇದ್ರೂ ಸಹ ಪ್ರಧಾನಿಗಳ ಕನಸ್ಸಿನ ಯೋಜನೆಗೆ ಚಾಲನೆ ಸಿಗದೇ ಇರೋದು ಆಶ್ಚಯ೯ಕರ ಸಂಗತಿಯಾಗಿದ್ದು, ಗ್ರಾಮಸ್ಥರು ಅಧಿಕಾರಿಗಳ ವಿರುದ್ದ ಹಿಡಿ ಶಾಪ ಹಾಕ್ತಿದ್ದಾರೆ. ಒಟ್ಟಾರೆ ದೇವರು ವರ ಕೊಟ್ಟರು ಪೂಜಾರಿ ವರ ಕೊಟ್ಟಿಲ್ಲಾ ಅನ್ನುವಂತ್ತಾಗಿದೆ ಪ್ರಧಾನ ಮಂತ್ರಿಗಳ ಸ್ವಚ್ಚ ಭಾರತ್ ಮಿಷನ್‌ನ ಕನಸ್ಸಿನ ಯೋಜನೆಯ ಕಥೆ. ಎಲ್ಲಾ ಸಿದ್ದವಾಗಿದ್ರು ಸಹ ಉದ್ಘಾಟನೆ ಮಾಡದೇ ಕಾಲಹರಣ ಮಾಡ್ತಿರುವ ಅಧಿಕಾರಿಗಳು ಇನ್ನಾದರೂ ಹೆಚ್ಚೆತ್ತುಕೊಳ್ತಾರಾ ಅನ್ನೋದನ್ನು ಕಾದು ನೋಡಬೇಕಿದೆ.