* ಇಕ್ಬಾಲ್ ಅನ್ಸಾರಿಗೆ ಅಭಿನಂದನೆ ಹೇಳಿದ ಡಿಕೆಶಿ
* ಕೊಪ್ಪಳ ಜಿಲ್ಲೆಯಲ್ಲಿ 1.71 ಲಕ್ಷ ಸದಸ್ಯತ್ವ
* ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ 61 ಸಾವಿರ ಸದಸ್ಯತ್ವ
ಕೊಪ್ಪಳ(ಮಾ.24): ರಾಜ್ಯಾದ್ಯಂತ(Karnataka) ಕಾಂಗ್ರೆಸ್ ಸದಸ್ಯತ್ವ ಅಭಿಯಾನ ವೇಗವಾಗಿ ನಡೆಯುತ್ತಿದೆ. ಅತ್ಯಧಿಕ ಸದಸ್ಯತ್ವ ನೋಂದಣಿಗಾಗಿ ಪಕ್ಷದಲ್ಲಿ ಇನ್ನಿಲ್ಲದ ಕಸರತ್ತು ನಡೆಸಿದೆ. ಈ ನಡುವೆ ಕೊಪ್ಪಳ(Koppal) ಜಿಲ್ಲೆಯ ಗಂಗಾವತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿಯೇ ಅತ್ಯಧಿಕ ಸದಸ್ಯತ್ವ ನೋಂದಣಿ ಮಾಡಿಸುವಲ್ಲಿ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಯಶಸ್ವಿಯಾಗಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸದಸ್ಯತ್ವ ಅಭಿಯಾನದಲ್ಲೂ(Congress Membership Campaign) ಕೊಪ್ಪಳ ಜಿಲ್ಲೆಯೇ ಮುಂಚೂಣಿಯಲ್ಲಿದೆ. ಜಿಲ್ಲೆಯಲ್ಲಿ ಮಾ. 22ರ ವರೆಗೆ 1.73 ಲಕ್ಷ ಸದಸ್ಯತ್ವ ನೋಂದಣಿಯಾಗಿರುವುದರಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ(DK Shivakumar) ಖುಷಿಯಾಗಿದ್ದಾರೆ. ಮೆಚ್ಚುಗೆ ವ್ಯಕ್ತಪಡಿಸಲು ಖುದ್ದು ಕೊಪ್ಪಳಕ್ಕೆ ಆಗಮಿಸುತ್ತಿದ್ದಾರೆ.
ಕಾಂಗ್ರೆಸ್‌ನಿಂದ 50 ಲಕ್ಷ ಸದಸ್ಯತ್ವದ ಟಾರ್ಗೆಟ್
ಗಂಗಾವತಿಯೇ ಫಸ್ಟ್:
ಮಾಜಿ ಸಚಿವ ಇಕ್ಬಾಲ್ ಅನ್ಸಾರಿ(Iqbal Ansari) ಅವರು ಕಳೆದ ಆರು ತಿಂಗಳಿಂದ ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ. ಕಾಂಗ್ರೆಸ್ ನಡಿಗೆ ಜನರ ಕಡೆಗೆ ಎನ್ನುವ ವಿಶೇಷ ಕಾರ್ಯಕ್ರಮವನ್ನು ಕ್ಷೇತ್ರಾದ್ಯಂತ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಈಗ ರಾಜ್ಯದಲ್ಲಿಯೇ ಅತ್ಯಧಿಕ ಸದಸ್ಯರನ್ನು ನೋಂದಣಿ ಮಾಡಿಸುವ ಮೂಲಕ ವಿಶೇಷ ಗಮನ ಸೆಳೆದಿದ್ದಾರೆ. ಗಂಗಾವತಿ(Gangavathi) ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ (ಮಾ. 22ರ ವರೆಗೂ) 61544 ಸದಸ್ಯರ ನೋಂದಣಿ ಮಾಡಿಸಿದ್ದಾರೆ. ಇದು ವಿಧಾನಸಭಾ ಕ್ಷೇತ್ರವಾರು ಲೆಕ್ಕಾಚಾರದಲ್ಲಿ ರಾಜ್ಯದಲ್ಲಿಯೇ ಅತಿ ಹೆಚ್ಚು ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ ಅವರು ಹೇಳಿದ್ದಾರೆ.
ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರ ಸದಸ್ಯತ್ವ ಅಭಿಯಾನದ ಸಾಧನೆಯನ್ನು ಮೆಚ್ಚಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರೇ ವಿಡಿಯೋ ಕಾಲ್ ಮಾಡಿ ಅನ್ಸಾರಿ ಅವರಿಗೆ ಅಭಿನಂದಿಸಿದ್ದಾರೆ. ಕಾರ್ಯವೈಖರಿ ಮತ್ತು ನೋಂದಣಿಗೆ ಮಾಡಿದ ಪ್ರಯತ್ನಗಳ ಕುರಿತು ಚರ್ಚೆ ಮಾಡಿದ್ದಾರೆ. ಇಕ್ಬಾಲ್ ಅನ್ಸಾರಿ ಅವರ ಸಾಧನೆಯನ್ನು ಎಐಸಿಸಿಯವರೆಗೂ ತಲುಪಿಸಲಾಗಿದೆ. ಹೀಗಾಗಿ ರಾಹುಲ್ ಗಾಂಧಿ(Rahul Gandhi) ಅವರೇ ಅನ್ಸಾರಿ ಅವರೊಂದಿಗೆ ಮಾತನಾಡಲಿದ್ದಾರೆ ಎಂದು ಸಹ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರೇ ಅನ್ಸಾರಿ ಅವರಿಗೆ ತಿಳಿಸಿದ್ದಾರೆ.
ಎಲ್ಲೆಲ್ಲಿ ಎಷ್ಟೆಷ್ಟು ಸದಸ್ಯತ್ವ?
ಕುಷ್ಟಗಿ - 22462
ಕನಕಗಿರಿ - 49218
ಗಂಗಾವತಿ - 61544
ಯಲಬುರ್ಗಾ -20932
ಕೊಪ್ಪಳ - 19703
ಸದಸ್ಯತ್ವ ಅಭಿಯಾನಯದಲ್ಲಿ ಕಾರ್ಯಕರ್ತರ(Activists) ಶ್ರಮ ಮತ್ತು ಪಕ್ಷದ ಮೇಲಿರುವ ಜನರ ಅಭಿಮಾನದಿಂದ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ನೋಂದಣಿಯಾಗಲು ಸಾಧ್ಯವಾಗಿದೆ. ಇದೆಲ್ಲವೂ ಕಾರ್ಯಕರ್ತರಿಗೆ ಸಲ್ಲಬೇಕಾದ ಶ್ರೇಯಸ್ಸು ಅಂತ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ತಿಳಿಸಿದ್ದಾರೆ.
ಕಂಡೀಷನ್ಸ್ ಫಾಲೋ ಮಾಡಿದ್ರೆ ಮಾತ್ರ ಕಾಂಗ್ರೆಸ್ ಸದಸ್ಯತ್ವ: ಏನೇನಿವೆ ನೋಡಿ
ಕಾಂಗ್ರೆಸ್ ಹಮ್ಮಿಕೊಂಡಿರುವ ಸದಸ್ಯತ್ವ ಅಭಿಯಾನದಲ್ಲಿ ಕೊಪ್ಪಳ ಜಿಲ್ಲೆಯೇ ರಾಜ್ಯದಲ್ಲಿ ಮುಂಚೂಣಿಯಲ್ಲಿದೆ. ಅದರಲ್ಲೂ ಇದುವರೆಗಿನ ಲೆಕ್ಕಾಚಾರದಲ್ಲಿ ಗಂಗಾವತಿ ವಿಧಾನಸಭಾ ಕ್ಷೇತ್ರ ರಾಜ್ಯದಲ್ಲಿಯೇ ಫಸ್ಟ್ ಆಗಿದೆ ಎನ್ನುವುದು ಖುಷಿಯ ವಿಷಯ ಅಂತ ಕೊಪ್ಪಳ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ ಹೇಳಿದ್ದಾರೆ.
ಕಾಂಗ್ರೆಸ್ ಸದಸ್ಯತ್ವದಲ್ಲಿ ಹಿನ್ನಡೆ ಮೋಟಮ್ಮ, ಪುತ್ರಿಗೆ ಡಿಕೆಶಿ ಕ್ಲಾಸ್
ಬಾಳೆಹೊನ್ನೂರು: ಕಾಂಗ್ರೆಸ್ ಹಮ್ಮಿಕೊಂಡಿರುವ ಡಿಜಿಟಲ್ ಸದಸ್ಯತ್ವ ನೋಂದಣಿಯಲ್ಲಿ ಚಿಕ್ಕಮಗಳೂರು(Chikkamagaluru) ಜಿಲ್ಲೆಯಲ್ಲಿ ಭಾರೀ ಹಿನ್ನೆಡೆ ಉಂಟಾಗಿರುವ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅಸಮಾಧಾನ ಹೊರಹಾಕಿದ್ದರು.
ಮಾ.17 ರಂದು ಆಯೋಜಿಸಲಾಗಿದ್ದ ಡಿಜಿಟಲ್ ಸದಸ್ಯತ್ವ ನೋಂದಣಿ ಕಾರ್ಯಕ್ರಮದಲ್ಲಿ ಡಿ.ಕೆ.ಶಿವಕುಮಾರ್ ಅವರು ಮಾಜಿ ಸಚಿವೆ ಮೋಟಮ್ಮ(Motamma), ಅವರ ಪುತ್ರಿ ನಯನಾ, ಕಾಂಗ್ರೆಸ್(Congress) ಜಿಲ್ಲಾಧ್ಯಕ್ಷ ಡಾ.ಅಂಶುಮಂತ್ ಸೇರಿದಂತೆ ಶಾಸಕರು, ಸ್ಥಳೀಯ ಮುಖಂಡರನ್ನು ತರಾಟೆಗೆ ತೆಗೆದುಕೊಂಡಿದ್ದರು.