Kalaburagi news: ಕಾಶಿ ಕಾರಿಡಾರ್‌ ರೀತಿ ಗಾಣಗಾಪುರ ಅಭಿವೃದ್ಧಿ: ಸಿಎಂ

By Kannadaprabha News  |  First Published Jan 25, 2023, 2:06 AM IST

ಕಾಶಿ ವಿಶ್ವನಾಥ ಮತ್ತು ಉಜ್ಜಯನಿಯ ಮಹಾಕಾಲ ಕಾರಿಡಾರ್‌ ಮಾದರಿಯಲ್ಲಿ ಕಲಬುರಗಿಯ ದತ್ತಾತ್ರೇಯ ಸುಕ್ಷೇತ್ರವಾದ ಗಾಣಗಾಪುರದ ಸಮಗ್ರ ಅಭಿವೃದ್ಧಿಗೆ ತಮ್ಮ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.


ಕಲಬುರಗಿ (ಜ.25) : ಕಾಶಿ ವಿಶ್ವನಾಥ ಮತ್ತು ಉಜ್ಜಯನಿಯ ಮಹಾಕಾಲ ಕಾರಿಡಾರ್‌ ಮಾದರಿಯಲ್ಲಿ ಕಲಬುರಗಿಯ ದತ್ತಾತ್ರೇಯ ಸುಕ್ಷೇತ್ರವಾದ ಗಾಣಗಾಪುರದ ಸಮಗ್ರ ಅಭಿವೃದ್ಧಿಗೆ ತಮ್ಮ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಇಲ್ಲಿನ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಗಾಣಗಾಪುರ ಪ್ರಗತಿಗಾಗಿ ಈಗಾಗಲೇ .5 ಕೋಟಿ ನೀಡಲಾಗಿದೆ. ಜಿಲ್ಲಾಡಳಿತ ದತ್ತನ ಕ್ಷೇತ್ರದ ಅಭಿವೃದ್ಧಿಗೆ .67 ಕೋಟಿ ಮೊತ್ತದ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಿದ್ದು, ಮುಂಬರುವ ಆಯವ್ಯಯದಲ್ಲಿ ಇದನ್ನು ಘೋಷಿಸಿ ಅನುದಾನ ತೆಗೆದಿಡಲಾಗುವುದು ಎಂದು ಬೊಮ್ಮಾಯಿ ತಿಳಿಸಿದರು.

Tap to resize

Latest Videos

undefined

ಇದೇ ವೇಳೆ ಈ ಬಾರಿ ತಾವು ಮಂಡಿಸಲಿರುವ ಬಜೆಟ್‌ ಜನಪರವಾಗಿರಲಿದೆ ಎಂದ ಬೊಮ್ಮಾಯಿ, ರೈತರ ಸಾಲ ಮನ್ನಾ ಮಾಡುವ ಪ್ರಸ್ತಾಪವೇನಾದರೂ ಇದೆಯಾ ಎಂಬ ಪ್ರಶ್ನೆಗೆ ಮಾತ್ರ ಕಾದು ನೋಡಿ ಎಂದಷ್ಟೇ ಉತ್ತರಿಸಿದರು.

ತೊಗರಿ ಬೆಳೆಗಾರರಿಗೆ ಗುಡ್‌ ನ್ಯೂಸ್‌- ಬೆಳೆ ನಷ್ಟಕ್ಕೆ ಸಂಜೆಯೊಳಗೆ ಪರಿಹಾರ ಧನ ಘೋಷಣೆ: ಸಿಎಂ ಬೊಮ್ಮಾಯಿ ಭರವಸೆ

ದತ್ತನ ದರ್ಶನ ಪಡೆದ ಸಿಎಂ: ನಂತರ ಕಲಬುರಗಿಯಿಂದ ರಸ್ತೆ ಮೂಲಕ ಗಾಣಗಾಪುರಕ್ಕೆ ತೆರಳಿದ ಬೊಮ್ಮಾಯಿ ಅವರು ಅಲ್ಲಿನ ಉವ ಅಮರ್ಜಾ, ಭೀಮಾ ನದಿಗಳ ಸಂಗಮ ಪ್ರದೇಶ, ನರಸಿಂಹ ಸರಸ್ವತಿ ಗುರುಗಳ ತಪಸ್ಸು ಮಾಡಿದ ಸ್ಥಳಕ್ಕೂ ಭೇಟಿ ನೀಡಿದರು.

ಸಂಗಮದಲ್ಲಿ ಪೂಜಾದಿಗಳನ್ನು ಸಲ್ಲಿಸಿ ನೇರವಾಗಿ ದತ್ತಾತ್ರೇಯ ಮಂದಿರಕ್ಕೆ ಆಗಮಿಸಿ ನಿರ್ಗುಣ ಪಾದುಕೆಗಳ ದರ್ಶನ ಪಡೆದು ಪೂಜೆ ಸಲ್ಲಿಸಿದರು. ನಂತರ ದತ್ತ ಮಂದಿರದ ಪ್ರಧಾನ ಅರ್ಚಕರಾದ ಪ್ರಫುಲ್‌ ಪೂಜಾರಿ, ರಾಮಕೃಷ್ಣ ಪೂಜಾರಿ ಇವರ ಮನೆಗೆ ತೆರಳಿ ಪ್ರಸಾದ ಸ್ವೀಕರಿಸಿದರು.

ಫೆ.13ರಿಂದ 17ರ ವರೆಗೆ ಏರೋ ಇಂಡಿಯಾ ಶೋ,

ಬೆಂಗಳೂರಲ್ಲಿ ಫೆ.13ರಿಂದ ಫೆ.17ರ ವರೆಗೆ 5 ದಿನಗಳ ಕಾಲ ಏರೋ ಇಂಡಿಯಾ ಬೃಹತ್‌ ವೈಮಾನಿಕ ಪ್ರದರ್ಶನ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿಯವರು ಈ ವೈಮಾನಿಕ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಏರೋ ಇಂಡಿಯಾ ಏರ್‌ ಶೋ ಪೂರ್ವ ಸಿದ್ಧತೆ ಕುರಿತು ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್‌ ಅವರೊಂದಿಗೆ ಕಲಬುರಗಿ ವಿಮಾನ ನಿಲ್ದಾಣದಿಂದಲೇ ವಿಡಿಯೋ ಕಾನ್ಫರೆ®್ಸ… ಮೂಲಕ ಸಂವಾದ ನಡೆಸಿ ಪೂರ್ವ ಸಿದ್ಧತೆಗಳ ಬಗ್ಗೆ ಮಾಹಿತಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

1996ರಿಂದಲೂ ಬೆಂಗಳೂರೇ ದೇಶದ ಈ ಬೃಹತ್‌ ವೈಮಾನಿಕ ಪ್ರದರ್ಶನಕ್ಕೆ ಆತಿಥ್ಯ ನೀಡುತ್ತಾ ಬಂದಿದೆ. ಇದು ಕರ್ನಾಟಕಕ್ಕೆ ಹೆಮ್ಮೆಯ ಸಂಗತಿ. ಈ ಬಾರಿ ಪ್ರದರ್ಶನ ಇನ್ನೂ ಹೆಚ್ಚಿನ ರೂಪದಲ್ಲಿ ಜನಮನ ಸೆಳೆಯಲಿದೆ. ಅದಕ್ಕಾಗಿ ಯಲಹಂಕ ವಾಯುನೆಲೆಯಲ್ಲಿ ಸಕಲ ಸಿದ್ಧತೆಗಳು ಸಾಗಿವೆ ಎಂದರು.

ಕಲಬುರಗಿಯಲ್ಲಿ ಸಿಎಂ ಬೊಮ್ಮಾಯಿಗೆ ಸ್ವಾಗತ ಕೋರಿ ಆರ್‌.ಡಿ ಪಾಟೀಲ್‌ ಬ್ಯಾನರ್‌

ಏರೋ ಇಂಡಿಯಾ ಶೋ ಪೂರ್ವ ಸಿದ್ಧತೆ ಕುರಿತು ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್‌ ಅವರೊಂದಿಗೆ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಭಾಗವಹಿಸಿದ್ದೇನೆ. ಈ ಬಾರಿ ಅತಿದೊಡ್ಡ ಏರ್‌ ಶೋ ಮತ್ತು ಏರೋಸ್ಪೇಸ್‌ ವಸ್ತುಪ್ರದರ್ಶನ ಆಯೋಜಿಸಲಾಗುತ್ತಿದೆ. ವೈಮಾನಿಕ ಕ್ಷೇತ್ರದ ಅನೇಕ ಕಂಪನಿಗಳು, ತಜ್ಞರು ಇದರಲ್ಲಿ ಭಾಗವಹಿಸಲಿದ್ದಾರೆ. ವೈಮಾನಿಕ ಪ್ರದರ್ಶನದಲ್ಲಿ ಜಾಗತಿಕವಾಗಿ ಹೆಸರು ಮಾಡಿರುವ ಅನೇಕ ಸಾಧಕರೂ ಪಾಲ್ಗೊಳ್ಳುತ್ತಿದ್ದಾರೆ, ಕರ್ನಾಟಕ ಈ ಏರ್‌ ಶೋ ಆತಿಥ್ಯ ವಹಿಸುತ್ತಿರುವುದು ನಾಡಿಗೆ ಗೌರವದ ವಿಷಯ ಎಂದರು.

click me!