ಗಣತಂತ್ರದ ದಿನ ಕರ್ನಾಟಕ ಸ್ತಬ್ಧ ಚಿತ್ರ ಪ್ರದರ್ಶನ: ನಾರಿಶಕ್ತಿಯನ್ನು ಅಭಿನಂದಿಸಿದ ಜೋಶಿ

By Ravi Janekal  |  First Published Jan 25, 2023, 12:31 AM IST

ನವದೆಹಲಿಯಲ್ಲಿ ಜನವರಿ‌ 26 ರಂದು ನಡೆಯಲಿರುವ ಗಣರಾಜ್ಯೋತ್ಸವದ ಕಾರ್ಯಕ್ರಮದ ಪರೇಡ್‌ನಲ್ಲಿ ಭಾಗವಹಿಸಲು ಕರ್ನಾಟಕದ ಸ್ತಬ್ಧಚಿತ್ರಕ್ಕೆ ಕೊನೆ ಕ್ಷಣದಲ್ಲಿ ಅವಕಾಶ ನೀಡಲಾಗಿದ್ದು. ಕರ್ನಾಟಕದ ನಾರಿ ಶಕ್ತಿಯನ್ನ ಬಿಂಬಿಸುವ ಸ್ತಬ್ಧ ಚಿತ್ರ ಗಣತಂತ್ರದ ಮೆರವಣಿಗೆಯಲ್ಲಿ ವಿರಾಜಿಸಲಿದೆ.


ಹುಬ್ಬಳ್ಳಿ (ಜ.25): ನವದೆಹಲಿಯಲ್ಲಿ ಜನವರಿ‌ 26 ರಂದು ನಡೆಯಲಿರುವ ಗಣರಾಜ್ಯೋತ್ಸವದ ಕಾರ್ಯಕ್ರಮದ ಪರೇಡ್‌ನಲ್ಲಿ ಭಾಗವಹಿಸಲು ಕರ್ನಾಟಕದ ಸ್ತಬ್ಧಚಿತ್ರಕ್ಕೆ ಕೊನೆ ಕ್ಷಣದಲ್ಲಿ ಅವಕಾಶ ನೀಡಲಾಗಿದ್ದು. ಕರ್ನಾಟಕದ ನಾರಿ ಶಕ್ತಿಯನ್ನ ಬಿಂಬಿಸುವ ಸ್ತಬ್ಧ ಚಿತ್ರ ಗಣತಂತ್ರದ ಮೆರವಣಿಗೆಯಲ್ಲಿ ವಿರಾಜಿಸಲಿದೆ.

ಪ್ರತಿ ವರ್ಷ ದೆಹಲಿಯ ರಾಜಪಥ್(Rajapath)ನಲ್ಲಿ ನಡೆಯುವ ಗಣರಾಜ್ಯೋತ್ಸವ ದಿನಾಚರಣೆ(Republic Day Celebration)ಯ ಪರೇಡ್‍ನಲ್ಲಿ ಕರ್ನಾಟಕದ ಸ್ತಬ್ಧಚಿತ್ರ ಪ್ರದರ್ಶನ ಮಾಡಲಾಗುತ್ತಿತ್ತು. ಆದರೆ, ಈ ವರ್ಷ ಅನುಮತಿ ದೊರಕದೆ ಇದ್ದದ್ದು ಸುದ್ದಿಯಾಗಿತ್ತು. ಆದರೆ ಈಗ ಅನುಮತಿ ದೊರೆತಿದ್ದು, ಕೇಂದ್ರ ಸಚಿವ ಪ್ರಹ್ಲಾದ ಜೋಶಿ(Pralhad joshi)ಯವರು ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.

Latest Videos

undefined

ರಾಹುಲ್‌ಗಾಂಧಿಯಂತೆ ಮಾತಾಡಬೇಡಿ; ಸಿದ್ದರಾಮಯ್ಯಗೆ ಜೋಶಿ ಟಾಂಗ್‌

ಪ್ರಹ್ಲಾದ್ ಜೋಶಿಯವರ ಪ್ರಯತ್ನದ ಫಲವಾಗಿ ಸ್ತಬ್ಧ ಚಿತ್ರದ ಪ್ರದರ್ಶನಕ್ಕೆ ಅವಕಾಶ  ಒದಗಿ ಬಂದಿದೆ.  ಈ ಬಾರಿಯ ಗಣರಾಜ್ಯೋತ್ಸವದ ಸ್ತಬ್ಧಚಿತ್ರ ಪ್ರದರ್ಶನ ತಮಿಳುನಾಡು, ಕೇರಳ ಸೇರಿ ಒಟ್ಟು 13 ರಾಜ್ಯಗಳ ಸ್ತಬ್ಧಚಿತ್ರಗಳನ್ನು ಆಯ್ಕೆ ಮಾಡಲಾಗಿತ್ತು. ಆದರೆ, ಕರ್ನಾಟಕದ ಟ್ಯಾಬ್ಲೊಗೆ ಅವಕಾಶ ದೊರಕಿರಲಿಲ್ಲ. ಬೇರೆ ರಾಜ್ಯಗಳಿಗೆ ಅವಕಾಶ ಮಾಡಿಕೊಡುವ ಸಲುವಾಗಿ ಕರ್ನಾಟಕದ ಸ್ತಬ್ಧಚಿತ್ರಕ್ಕೆ ಕೇಂದ್ರ ಆಯ್ಕೆ ಸಮಿತಿ ಅವಕಾಶ ನಿರಾಕರಿಸಿದೆ ಎನ್ನಲಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ಅವಕಾಶ ದೊರೆತಿದ್ದು, ಈ ಬಾರಿಯ ಸ್ತಬ್ಧ ಚಿತ್ರ ಹೊಸ ಸಂದೇಶವನ್ನು ದೇಶಕ್ಕೆ ನೀಡಲಿದ್ದು, ಸಾಧಕರ ಸೇವೆಯನ್ನು ಸ್ಮರಿಸಲಿದೆ ಎಂದು ಜೋಶಿಯವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇನ್ನೂ ದೆಹಲಿಯಲ್ಲಿ ಜನವರಿ 26ರಂದು ನಡೆಯುವ ಗಣರಾಜ್ಯೋತ್ಸವ ಪಥ ಸಂಚಲನದಲ್ಲಿ ಕರ್ನಾಟಕ ರಾಜ್ಯದ ನಾರಿಶಕ್ತಿ(Naarishakti) ಹೆಸರಿನ ಸ್ತಬ್ಧಚಿತ್ರದ ತಾಲೀಮು ಭರದಿಂದ ಸಾಗಿದೆ. 

ರಾಜ್ಯದ ಮಾದರಿ ಮಹಿಳೆಯರಾದ ಸೂಲಗಿತ್ತಿ ನರಸಮ್ಮ, ತುಳಸೀ ಗೌಡ ಹಾಗೂ ಸಾಲು ಮರದ ತಿಮ್ಮಕ್ಕ ಅವರ ಪ್ರತಿಕೃತಿಗಳನ್ನು ಹೊಂದಿದ ಆಕರ್ಷಕ ಸ್ತಬ್ಧಚಿತ್ರವನ್ನು ಹೊತ್ತ ವಾಹನ ಸೋಮವಾರ ರಾಜಪಥ ಮಾರ್ಗದಲ್ಲಿ ಸಾಗುತ್ತಾ ಗಣರಾಜ್ಯೋತ್ಸವ ತಾಲೀಮಿನಲ್ಲಿ ಪಾಲ್ಗೊಂಡಿರುವ ಆಕರ್ಷಕ ಚಿತ್ರಗಳ ನಯನ ಮನೋಹರವಾಗಿದೆ.

ಬೆಳಗಾವಿಯಿಂದ ಸಿಕಂದರಾಬಾದ್‌ಗೆ ನಿತ್ಯ ರೈಲು ಸೇವೆ: ಜೋಶಿ ಮನವಿಗೆ ಸ್ಪಂದಿಸಿದ ಸಚಿವ ವೈಷ್ಣವ್

8,000 ಗಿಡಗಳನ್ನು ನೆಟ್ಟಿರುವ ತುಮಕೂರಿನ ಗುಬ್ಬಿಯ ಹಸಿರು ಯೋಧೆ ಸಾಲುಮರದ ತಿಮ್ಮಕ್ಕ, 30,000 ಕ್ಕೂ ಹೆಚ್ಚು ಸಸಿಗಳನ್ನು ನೆಟ್ಟ ಉತ್ತರ ಕನ್ನಡದ ಅಂಕೋಲಾದ ತುಳಸಿಗೌಡ  ಹಾಗೂ 70 ವರ್ಷಗಳಲ್ಲಿ ಉಚಿತವಾಗಿ 2,000 ಕ್ಕೂ ಹೆಚ್ಚು ಸಾಂಪ್ರದಾಯಿಕ ಹೆರಿಗೆ ಮಾಡಿಸಿರುವ ಸೂಲಗಿತ್ತಿ ಪಾವಗಡದ ನರಸಮ್ಮ ಅವರ ಪ್ರತಿಮೆಗಳನ್ನು ಟ್ಯಾಬ್ಲೋ ಹೊಂದಿದೆ. ಈ ಕುರಿತು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅಭಿನಂದನೆ ಸಲ್ಲಿಸಿದ್ದಾರೆ.

click me!