ಗಾಂಧಿ ಜಯಂತಿ ಮುನ್ನಾದಿನ ಶನಿವಾರ ಸಂಜೆ 6 ಗಂಟೆಯಿಂದ ಗಾಂಧಿ ಜಯಂತಿ ದಿನವಾದ ಭಾನುವಾರ ಬೆಳಗಿನ ಜಾವ 6ರವರೆಗೆ ಅಹೋರಾತ್ರಿ ಪುರಸಭೆಯ ಅಧಿಕಾರಿಗಳು, ಪೌರ ಕಾರ್ಮಿಕರು ಸೇರಿ ಪಟ್ಟಣದ 3.5 ಕಿ.ಮೀ. ರಸ್ತೆ, ಚರಂಡಿಗಳ ಸ್ವಚ್ಛಗೊಳಿಸಿ ಇತರರಿಗೆ ಮಾದರಿಯಾಗಿದ್ದಾರೆ. ಇವರಿಗೆ ಶಾಸಕ ಎಂ.ಪಿ.ರೇಣುಕಾಚಾರ್ಯ ಕೂಡ ಸ್ವಚ್ಛತೆಗೆ ಕೈ ಜೋಡಿಸಿ ಗಾಂಧೀಜಿ ಜನ್ಮದಿನಾಚರಣೆಗೆ ಅರ್ಥ ಕಲ್ಪಿಸಿದರು.
ಹೊನ್ನಾಳಿ (ಅ.3) : ಗಾಂಧಿ ಜಯಂತಿ ಮುನ್ನಾದಿನ ಶನಿವಾರ ಸಂಜೆ 6 ಗಂಟೆಯಿಂದ ಗಾಂಧಿ ಜಯಂತಿ ದಿನವಾದ ಭಾನುವಾರ ಬೆಳಗಿನ ಜಾವ 6ರವರೆಗೆ ಅಹೋರಾತ್ರಿ ಪುರಸಭೆಯ ಅಧಿಕಾರಿಗಳು, ಪೌರ ಕಾರ್ಮಿಕರು ಸೇರಿ ಪಟ್ಟಣದ 3.5 ಕಿ.ಮೀ. ರಸ್ತೆ, ಚರಂಡಿಗಳ ಸ್ವಚ್ಛಗೊಳಿಸಿ ಇತರರಿಗೆ ಮಾದರಿಯಾಗಿದ್ದಾರೆ. ಇವರಿಗೆ ಶಾಸಕ ಎಂ.ಪಿ.ರೇಣುಕಾಚಾರ್ಯ ಕೂಡ ಸ್ವಚ್ಛತೆಗೆ ಕೈ ಜೋಡಿಸಿ ಗಾಂಧೀಜಿ ಜನ್ಮದಿನಾಚರಣೆಗೆ ಅರ್ಥ ಕಲ್ಪಿಸಿದರು.
Karnataka Cabinet Expansion: ಸಚಿವ ಸ್ಥಾನ ಸಿಗದ ಬಗ್ಗೆ ರೇಣುಕಾಚಾರ್ಯ ಅಸಮಾಧಾನ
ಮಾಜಿ ಪ್ರಧಾನಿ ಲಾಲ್ ಬಹಾದೂರ್ ಶಾಸ್ತ್ರಿ , ಮಹಾತ್ಮ ಗಾಂಧೀಜಿ ಜಯಂತಿ ಹಿನ್ನೆಲೆಯಲ್ಲಿ ಶಾಸಕ ಎಂ.ಪಿ.ರೇಣುಕಾಚಾರ್ಯ ಪುರಸಭಾ ಮುಖ್ಯಾಧಿಕಾರಿ, ಪುರಸಭಾಧ್ಯಕ್ಷ ನೇತೃತ್ವದಲ್ಲಿ ಪಟ್ಟಣದ ಟಿ.ಬಿ.ವೃತ್ತದಿಂದ ಶ್ರೀ ರಾಘವೇಂದ್ರಸ್ವಾಮಿ ಮಠದವರೆಗಿನ ಸುಮಾರು 3.5 ಕಿಮೀ. ರಸ್ತೆಯ ಇಕ್ಕೆಲಗಳು ಹಾಗೂ ಚರಂಡಿಗಳ ಅಹೋರಾತ್ರಿ ಸ್ವಚ್ಛತೆಯ ಶ್ರಮದಾನ ಮಾಡಿದ ಹಿನ್ನೆಲೆಯಲ್ಲಿ ಜನರ ಮೆಚ್ಚುಗೆಗೆ ಪಾತ್ರರಾದರು.
ಎಲ್ಲಾ ಗ್ರಾಮಗಳಲ್ಲೂ ಸ್ವಚ್ಛತೆ:
ಈ ವೇಳೆ ಶಾಸಕ ಎಂ.ಪಿ.ರೇಣುಕಾಚಾರ್ಯ ಮಾತನಾಡಿ, ಆದರ್ಶ ಪುರುಷರ ಜಯಂತಿಯ ಹಿನ್ನೆಲೆಯಲ್ಲಿ ಸಮಾಜಮುಖಿ ಕೆಲಸ ಮಾಡಿದರೆ ಜಯಂತಿಗಳು ಸಾರ್ಥಕ ಪಡೆಯುತ್ತವೆ, ಈ ನಿಟ್ಟಿನಲ್ಲಿ ವಿಶೇಷವಾಗಿ ಎಲ್ಲಾ ಸಂಘ ಸಂಸ್ಥೆಗಳು ಮುಂದಾಗಿ ಇಂಥ ಸತ್ಕಾರ್ಯಗಳಲ್ಲಿ ಪಾಲ್ಗೊಳ್ಳಿ ಎಂದು ಸಂಘÜ ಸಂಸ್ಥೆಗಳಿಗೆ ಕರೆ ನೀಡಿದರು. ಪ್ರಧಾನಿ ನರೇಂದ್ರ ಮೋದಿ ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಿದ್ದು, ಸ್ವಚ್ಛತೆಗೆ ಕರೆ ನೀಡಿದಾಗ ದೇಶವೇ ಸ್ವಚ್ಛತೆಯಲ್ಲಿ ಪಾಲ್ಗೊಂಡಿತ್ತು. ಸತತ ಎರಡು ವರ್ಷ ಪ್ರತಿನಿತ್ಯ ಅವಳಿ ತಾಲೂಕಿನ ಎಲ್ಲಾ ಗ್ರಾಮಗಳಲ್ಲೂ ಸ್ವಚ್ಛತೆ ಮಾಡಿದೆ ಕಾರ್ಯಕರ್ತರು, ಯುವಕರು ನನ್ನ ಜೊತೆ ಸ್ವಚ್ಛತೆಗೆ ಕೈ ಜೋಡಿಸಿದ್ದರು ಎಂದರು.
ಮುಖ್ಯಾಧಿಕಾರಿ ಎಸ್.ಆರ್.ವೀರಭದ್ರಯ್ಯ ಮಾತನಾಡಿ ಹಸಿ ಹಾಗೂ ಒಣ ಕಸ ಸಂಗ್ರಹಕ್ಕೆ ಪ್ರತಿ ಮನೆಗೂ ಕಸದ ಬುಟ್ಟಿಗಳ ವಿತರಿಸಲಾಗಿದೆ, ಯಾರೂ ತಮ್ಮ ಮನೆಯ ಮುಂಭಾಗ ಕಸ ಹಾಕಬೇಡಿ, ವಾಹನ ಬಂದಾಗ ಮಾತ್ರ ಕಸ ಹಾಕಿ ಎಂದು ಮನವಿ ಮಾಡಿದರು.
ನಾಯಕನಾಗಲು ಪತ್ರಿಕೆಗಳ ಪಾತ್ರವೂ ಮುಖ್ಯ: ಶಾಸಕ ರೇಣುಕಾಚಾರ್ಯ
ಪುರಸಭಾಧ್ಯಕ್ಷ ರಂಗನಾಥ್, ಸದಸ್ಯರಾದ ಬಾಬು ಹೋಬಳದಾರ್, ಧರ್ಮಪ್ಪ, ಸುರೇಶ್, ಕೆ.ವಿ.ಶ್ರೀಧರ್, ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ರವಿ, ಕಂದಾಯಾಧಿಕಾರಿ ವಸಂತ್, ಹಿರಿಯ ಆರೋಗ್ಯ ನಿರೀಕ್ಷಕ ಪರಮೇಶ್‌ನಾಯ್‌್ಕ, ಕಿರಿಯ ಅರೋಗ್ಯ ನಿರೀಕ್ಷಕ ಹರ್ಷವರ್ಧನ್, ಬಿಜೆಪಿ ಮುಖಂಡರಾದ ಮಂಜುನಾಥ್ ಇಂಚರಾ, ಮಹೇಶ್ ಹುಡೇದ್, ಚಂದ್ರು, ಪ್ರಶಾಂತ್, ಸಿಬ್ಬಂದಿಗಳಾದ ಆಕಾಶ್, ರೋಹಿತ್, ಅಜೇಯ್, ಶಿವಪ್ಪ ಹಾಗೂ ಇತರರಿದ್ದರು.