ನಕಲಿ BPL Card ಹೊಂದಿರುವ ಸರಕಾರಿ ನೌಕರರಿಗೆ ಬಿಗ್ ಶಾಕ್!

By Ravi Janekal  |  First Published Oct 3, 2022, 9:01 AM IST
  • ನಕಲಿ ಬಿಪಿಎಲ್‌ ಕಾರ್ಡ್ ಹೊಂದಿರುವ ಸರಕಾರಿ ನೌಕರರಿಗೆ ಶಾಕ್!
  •  339 ಸರಕಾರಿ ನೌಕರರನ್ನ ಪತ್ತೆ‌ ಹಚ್ಚಿದ ಆಹಾರ ಇಲಾಖೆಯ ಜಂಟಿ ನಿರ್ದೆಶಕ ವಿನೋದಕುಮಾರ ಪಾಟೀಲ 
  •  36 ಲಕ್ಷ ದಂಡ ವಸೂಲಿ ಮಾಡಿದ ವಿನೋದ್ ಕುಮಾರ್ ಪಾಟೀಲ 

 ವರದಿ : ಪರಮೇಶ್ವರ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್ ಧಾರವಾಡ

 ಧಾರವಾಡ (ಅ.3) : ಸರಕಾರ ಬಡವರಿಗೆಂದು ಪಡಿತರ ಚೀಟಿ ನೀಡಿ ಬಡತನ ರೇಖೆಗಿಂತ ಕಡಿಮೆ‌ ಇರೋರಿಗೆ ಬಿಪಿಎಲ್ ಕಾರ್ಡ್ ಕೊಟ್ಟಿದ್ದಾರೆ. ಬಿಪಿಎಲ್‌ ಕಾರ್ಡ್ ಮೂಲಕ ರೇಷನ್ ನೀಡುತ್ತಿದ್ದಾರೆ. ಬಡವರಿಗಾಗಿ ಇರುವ ಬಿಪಿಎಲ್ ಕಾರ್ಡ್‌ಗಳು ಸರ್ಕಾರಿ ನೌಕರರು ಕೂಡ ಹೊಂದಿರುವುದು ಪತ್ತೆಯಾಗಿದೆ. ವಿದ್ಯಾಕಾಶಿ ಧಾರವಾಡದಲ್ಲಿ ಸರಕಾರಿ ನೌಕರರು ಸರಕಾರದಿಂದ ವೇತನ ಪಡೆಯುತ್ತಿದ್ದರೂ, ತಾವು ಬಡವರು ಎಂದು ಪಡಿತರ ಚೀಟಿಯನ್ನ ಅಂದ್ರೆ ಬಿಪಿಎಲ್‌ ಕಾರ್ಡ್‌ನ್ನು ಬಳಕೆ ಮಾಡಿಕೊಂಡು ಸರಕಾರಕ್ಕೆ ಮೋಸ ಮಾಡಿ ಕಳೆದ ಹಲವು ವರ್ಷಗಳಿಂದ ಪ್ರತಿ ತಿಂಗಳು ರೇಷನ್ ಪಡೆದುಕೊಳ್ಳುತ್ತಿದ್ದಾರೆ. ಇತ್ತ ಸರಕಾರಕ್ಕೆ ಮತ್ತು ತಾವು ಮಾಡುವ ಇಲಾಖೆಗೆ ಕೆಟ್ಡ ಹೇಸರು ತರುವ ಕೆಲಸವನ್ನ ಮಾಡಿದ್ದಾರೆ. ಇದೀಗ ಬಿಪಿಎಲ್ ಕಾರ್ಡ್ ಹೊಂದಿರುವ ಸರ್ಕಾರಿ ನೌಕರರಿಗೆ ಆಹಾರ ಇಲಾಖೆ ಅಧಿಕಾರಿಗಳು ಬಿಗ್ ಶಾಕ್ ಕೊಟ್ಟಿದ್ದಾರೆ.

Tap to resize

Latest Videos

ಬಡವರಿಗೆ ದೀಪಾವಳಿ, ದಸರಾ ಕೊಡುಗೆ ನೀಡಿದ ಮೋದಿ ಸರ್ಕಾರ..!

ಧಾರವಾಡ(Dharwad) ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಸರಕಾರಿ ನೌಕರ(Govt employee)ರು ಆಗಿ ಸೇವೆ ಸಲ್ಲಿಸುತ್ತಿದ್ದರೂ, ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಧಾರವಾಡ ಆಹಾರ ಇಲಾಖೆಯ ಜಿಂಟಿ‌ ನಿರ್ದೆಶಕರು ವಿನೋದ್ ಕುಮಾರ್ ಅವರು ಎಚ್‌ಆರ್‌ಎಂಎಸ್ ಮುಖಾಂತರ ಧಾರವಾಡದಲ್ಲಿ 339 ಜನ ನೌಕರರನ್ನ ಪತ್ತೆ ಹಚ್ಚಿ ಬರೋಬ್ಬರಿ 36,73,774 ರೂಪಾಯಿಯಷ್ಟು ದಂಡ ವಸೂಲಿ ಮಾಡಿದ್ದಾರೆ. ಅವರ ಪಡಿತರ ಚೀಟಿಯನ್ನ‌ ರದ್ದು ಗೊಳಿಸಿ ಅವರಿಗೆ ಖಡಕ್‌ ಎಚ್ಚರಿಕೆಯನ್ನ ನೀಡಿದ್ದಾರೆ.

ಸರಕಾರಿ ವೇತನ ಪಡೆಯುತ್ತಿರುವ ನೌಕರರನ್ನ ಇಲಾಖೆ ಪತ್ತೆ‌ಹಚ್ಚುತ್ತಿದ್ದಾರೆ. ಅಂಥವರ ಬಿಪಿಎಲ್ ಕಾರ್ಡ್ ರದ್ದು ಪಡಿಸಿ ದಂಡ ವಸೂಲಿ ಮಾಡಿದ್ದಾರೆ. ಆದರೂ ಅವರಿಗೆ ಯಾವ ಭಯವೂ ಇಲ್ಲದಂತಾಗಿದೆ. ಸರಕಾರಿ ಕೆಲಸದಲ್ಲಿದ್ದು ಬಡವರಿಗೆ ಸೇರಬೇಕಿದ್ದ ಪಡಿತರವನ್ನು ಪಡೆದು ವಂಚನೆ ಮಾಡಿದ್ದಾರೆ. ಆದರೆ ಕೇವಲ ದಂಡ‌ ವಸೂಲಿ ಮಾಡಿ ಬಿಟ್ರೆ ಆಗಲ್ಲ ಅಂತವರ ಮೆಲೆ‌ ಕಾನೂನು ಕ್ರಮ‌ ಆಗಬೇಕು ಅಂತ ಸ್ಥಳಿಯರು ಒತ್ತಾಯ ಮಾಡುತ್ತಿದ್ದಾರೆ..ಇಂತಹ ಪ್ರಕರಣ ಬಂದಾಗ ಕೇವಲ ದಂಡ‌ ವಸೂಲಿ ಮಾಡಿ‌ ಕೈ ಕಟ್ಟಿ ಕುಳಿತಿದೆ ಇಲಾಖೆ ಆದರೆ‌ ಇಂತವರ ಮೆಲೆ ಸರಕಾರ ಕೂಡಲೆ‌ ಕ್ರಮವನ್ನ ಜರುಗಿಸಬೇಕು. ಇಲ್ಲದಿದ್ರೆ ಇಂತ ಅಧಿಕಾರಿಗಳಿಗೆ ಭಯ ಇಲ್ಲದಂತಾಗುತ್ತದೆ ಎಂದು ಜನರು ಕ್ರಮಕ್ಕೆ ಒತ್ತಾಯಿಸುತ್ತಿದ್ದಾರೆ.

ಸರ್ಕಾರಿ ನೌಕರರು, ಶ್ರೀಮಂತರ ಬಳಿ ಬಿಪಿಎಲ್ ಕಾರ್ಡ್ ಇರುವ ಸಮಸ್ಯೆ ಒಂದು ಕಡೆಯಾದರೆ, ನಿಜವಾಗಿಯೂ ಬಡತನದಲ್ಲಿ ಬೇಯುತ್ತಿರುವ ಜನರಿಗೆ  ರೇಷನ್ ಸಿಗುತ್ತಿಲ್ಲ. ಪ್ರತಿ ತಿಂಗಳು ಪಡಿತರ ವಿತರಿಸುತ್ತಿಲ್ಲ. ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ. ಒಟ್ಟಿನಲ್ಲಿ ಬಡವರಿಗೆ ತಲುಪಬೇಕಾದ ಪಡಿತರ ಉಳ್ಳವರ ಪಾಲಾಗುತ್ತಿದೆ. ಬಡವರಿಗೆ ಸಿಗಬೇಕಾದ ಪಡಿತರ ದಾನ್ಯಗಳನ್ನ ನೇರವಾಗಿ ಅವರಿಗೆ ಸಿಗುವಂತೆ‌ ಇನ್ನಷ್ಟು ಕಠಿಣ ಕ್ರಮ ಆಗಬೇಕು. ಆಹಾರ ಇಲಾಖೆಯ ಅಧಿಕಾರಿಗಳು ಬಿಪಿಎಲ್ ಕಾರ್ಡ್ ಹೊಂದಿರುವ ಸರ್ಕಾರಿ ನೌಕರರಿಗೆ ಖಡಕ್ ಎಚ್ಚರಿಕೆ ನೀಡಬೇಕು. ಆಗ ಮಾತ್ರ ಇಂತಹ ಪ್ರಕರಣಗಳು ಕಡಿಮೆ‌ ಆಗುತ್ತವೆ. 

ವೈರಲ್‌ ವಿಡಿಯೋ.. ಪಡಿತರ ಗೋಧಿ ಪಡೆಯಲು ಮರ್ಸಿಡೀಸ್‌ನಲ್ಲಿ ಬಂದ 'ಬಡವ' !

ಇನ್ನು ಅಧಿಕಾರಿಗಳು ಎಚ್‌ಆರ್‌ಎಂಎಸ್, ಮುಖಾಂತರ‌ ಈಗಾಗಲೇ ಒಂದು ಹಂತದ ಕಾರ್ಯಾಚರಣೆ ನಡೆಸಿ ನಕಲಿ ಬಿಪಿಎಲ್ ಕಾರ್ಡ ಬಳಕೆದಾರರಿಗೆ ಶಾಕ್ ನೀಡಿದೆ. ನಿಜಕ್ಕೂ ಆಹಾರ ಇಲಾಖೆ ಅಧಿಕಾರಿಗಳು ನಕಲಿ ಬಿಪಿಎಲ್ ಕಾರ್ಡ ಬಳಕೆದಾರರಿಗೆ ಬಿಗ್ ಶಾಕ್ ನೀಡಿದೆ..ಇನ್ನು ಅಂಥವರ ಮೇಲೆ ಕಾನೂನು ಕ್ರಮ ಆದ್ರೆ‌ ಮಾತ್ರ  ಇಂತಹ ಪ್ರಕರಣಗಳು ಇಳಿಕೆಯಾಗಬಹುದು.

click me!