ಕ್ವಿಂಟಲ್ ಮೆಣಸಿನಕಾಯಿಗೆ 72,999 ರೂ, ಕೆಂಪು ಮೆಣಸಿನಕಾಯಿ ಬೆಳೆದ ರೈತ ದಂಪತಿಗೆ ಸಿಕ್ತು ಸಂಕ್ರಾಂತಿ ಗಿಫ್ಟ್

By Suvarna News  |  First Published Jan 14, 2023, 1:45 PM IST

ಎಪಿಎಮ್ ಸಿ ಮಾರುಕಟ್ಟೆಯಲ್ಲಿ ಕೆಂಪು ಮೆಣಸಿನಕಾಯಿ‌ ಮತ್ತೊಮ್ಮೆ ದಾಖಲೆ ರೇಟ್ ಗೆ ಖರೀದಿಯಾಗಿದೆ. ಕಳೆದ ತಿಂಗಳು ಇದೇ ಮಾರುಕಟ್ಟೆಯಲ್ಲಿ ಗದಗ ತಾಲೂಕಿನ ಕೋಟಮಚಗಿ ಗ್ರಾಮದ ರೈತರೊಬ್ಬರ ಮೆಣಸಿನಕಾಯಿಗೆ ಕ್ವಿಂಟಲ್​ಗೆ ರೂ. 70,199 ಬೆಲೆ ಬಂದಿತ್ತು.


ಗದಗ(ಜ.14): ಎಪಿಎಮ್ ಸಿ ಮಾರುಕಟ್ಟೆಯಲ್ಲಿ ಕೆಂಪು ಮೆಣಸಿನಕಾಯಿ‌ ಮತ್ತೊಮ್ಮೆ ದಾಖಲೆ ರೇಟ್ ಗೆ ಖರೀದಿಯಾಗಿದೆ. ಕಳೆದ ತಿಂಗಳು ಇದೇ ಮಾರುಕಟ್ಟೆಯಲ್ಲಿ ಗದಗ ತಾಲೂಕಿನ ಕೋಟಮಚಗಿ ಗ್ರಾಮದ ರೈತರೊಬ್ಬರ ಮೆಣಸಿನಕಾಯಿಗೆ ಕ್ವಿಂಟಲ್​ಗೆ ರೂ. 70,199 ಬೆಲೆ ಬಂದಿತ್ತು. ಈ ವರೆಗೆ ಇಂತಹ ರೇಟ್​ ಯಾವತ್ತೂ ಕಂಡಿರದ ಎಪಿಎಂಸಿಯು ಇದೇ ದೊಡ್ಡ ಮೊತ್ತ ಎಂದಿದ್ದರು. ಈ ತಿಂಗಳು ಕ್ವಿಂಟಲ್​ಗೆ ಬರೋಬ್ಬರಿ ರೂ. 72,999 ರೇಟ್ ಬಂದಿದ್ದು​ ಕೊಪ್ಪಳ ಜಿಲ್ಲೆಯ ಯರೇಹಂಚಿನಾಳ‌ ಗ್ರಾಮದ ಸಾವಿತ್ರಿ ಹಾಗೂ ಉಮೇಶ ರೆಡ್ಡಿ ಎಂಬ ರೈತ ದಂಪತಿ ಆ ದಾಖಲೆಯನ್ನು ಮುರಿದಿದ್ದಾರೆ. ಹಿಂದಿನ ದಾಖಲೆಯನ್ನು ಉಡೀಸ್ ಮಾಡಿ, ದಾಖಲೆ ಬೆಲೆಗೆ ಮಾರಾಟವಾಗಿದ್ದರಿಂದ ಈ ರೈತ ದಂಪತಿಯನ್ನು ಅಶೋಕ ಟ್ರೇಡರ್ಸ್ ಮಳಿಗೆಯಲ್ಲಿ ಅಲ್ಲಿಯ ಎಪಿಎಂಸಿ ವರ್ತಕರು ಹಾಗೂ ರೈತರು ಹೂವಿನ ಮಾಲೆ ಹಾಕಿ ಅಭಿನಂದಿಸಿದ್ದಾರೆ.. ಈ ಮೂಲಕ ಸಂಕ್ರಾಂತಿ ಸುಗ್ಗಿ ಹಬ್ಬಕ್ಕೆ ರೈತ ದಂಪತಿಗೆ ಬಂಪರ್ ಗಿಫ್ಟ್ ಸಿಕ್ಕಂತಾಗಿದೆ. ಕಷ್ಟಪಟ್ಟು ಬೆಳೆದ ಮೆಣಸಿನಕಾಯಿಗೆ ಬಂಗಾರದ ಬೆಲೆ ಮೀರಿಸುವ ಬೆಲೆ ಸಿಕ್ಕಿದೆ. ಕ್ವಿಂಟಲ್ ಕೆಂಪು ಮೆಣಸಿನಕಾಯಿಗೆ ಬರೋಬ್ಬರಿ 72,999 ಸಾವಿರ ರೇಟ್ ಸಿಕ್ಕಿದೆ ಎಂದು ರೈತ ದಂಪತಿ ಖುಷಿ ಹಂಚಿಕೊಂಡಿದ್ದಾರೆ.

Chikkaballapur Utsav: ಚಿಕ್ಕಬಳ್ಳಾಪುರ ಭವಿಷ್ಯದಲ್ಲಿ ದೊಡ್ಡ ನಗರವಾಗಲಿದೆ: ಸಚಿವ ಸುಧಾಕರ್‌

Tap to resize

Latest Videos

undefined

ಶಿಕ್ಷಕ ವೃತ್ತಿ ಬಿಟ್ಟು ಭೂಮಿ ನಂಬಿದವರ ಕೈ ಹಿಡಿದ ಕೃಷಿ!
ಯರೇಹಂಚಿನಾಳ ಗ್ರಾಮದ ರೈತ ಮಹಿಳೆ ಸಾವಿತ್ರಿ ದೈಹಿಕ ಶಿಕ್ಷಕಿಯಾಗಿದ್ದು ಸದ್ಯ ವೃತ್ತಿಗೆ ಗುಡ್​​​ಬೈ ಹೇಳಿದ್ದಾರೆ. ಇನ್ನು ಪತಿ ಉಮೇಶ ನಾಗರಡ್ಡಿ ಬಿಎ, ಟಿಸಿಎಚ್ ಪದವೀಧರಾಗಿದ್ದು ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಇವರೂ ಸಹ ಅತಿಥಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು. ಅದ್ಯ ಆ ವೃತ್ತಿಗೆ ಗುಡ್​​​ಬೈ ಹೇಳಿ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಅತಿಯಾದ ಮಳೆಗೆ ಈ ಬಾರಿ ಕೆಂಪು ಮೆಣಸಿನಕಾಯಿ ಇಳುವರಿಯಲ್ಲಿ ಭಾರಿ ಕುಸಿತವಾಗಿದೆ. ಅಂತಹದ್ದರಲ್ಲಿ ಈ ರೈತ ದಂಪತಿ ಬಂಗಾರದ ಬೆಳೆ ಬೆಳೆದಿದ್ದನ್ನು ಕಂಡು ಜನ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ನಾಲ್ಕು ತಿಂಗಳ ತಡೀರಿ, ನಮ್ದೇ ಸರ್ಕಾರ ಬರ್ತದ ನಿಮಗೆಲ್ಲಾ ಸಹಾಯ ಮಾಡ್ತೀನಿ; ರೈತರಿಗೆ ಎಚ್‌ಡಿಕೆ ಅಭಯ

ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕರಾಗಿದ್ದೆವು. ಕಡಿಮೆ ಸಂಬಳ ಬರುತ್ತಿದ್ದರಿಂದ ಸಂಸಾರ ನೀಗಿಸುವುದು ಕಷ್ಟವಾಯಿತು. ಹಾಗಾಗಿ ಆ ಶಿಕ್ಷಕ ವೃತ್ತಿಗೆ ಗುಡ್ ಬೈ ಹೇಳಿ ಕೃಷಿಯಲ್ಲಿ ತೊಡಗಿಕೊಂಡೆವು. ಕಷ್ಟಪಟ್ಟು ಬೆಳೆದ ಮೆಣಸಿನಕಾಯಿಗೆ ಬಂಗಾರದ ಬೆಲೆ ಬಂದಿದೆ. ಸಾವಯವ ಗೊಬ್ಬರವನ್ನೇ ಹೆಚ್ಚಾಗಿ ಬಳಕೆ ಮಾಡಿ, ಉತ್ತಮ ಮೆಣಸಿನಕಾಯಿ ಬೆಳೆದಿದ್ದೇವೆ ಅಂತಾರೆ ರೈತ ದಂಪತಿ.

click me!