ಸ್ವಾತಂತ್ರ್ಯವು ಹೋರಾಟಗಾರರ ತ್ಯಾಗ, ಬಲಿದಾನದ ಸಂಕೇತ; ಸ್ವಾತಂತ್ರ್ಯ ಇತಿಹಾಸದ ಅವಲೋಕನವು ನಮ್ಮಲ್ಲಿ ಹೆಮ್ಮೆ, ಅರಿವು ಮೂಡಿಸುತ್ತದೆ ಹಾಲಪ್ಪ ಆಚಾರ್
ವರದಿ : ಪರಮೇಶ್ವರ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್ ಧಾರವಾಡ
ಧಾರವಾಡ (ಜು.25) : ಇಂದಿನ ಸ್ವಾತಂತ್ರ್ಯ ಫಲ ನಮ್ಮ ಹಿರಿಯರ ತ್ಯಾಗ ಬಲಿದಾನದ ಸಂಕೇತವಾಗಿದೆ ಭವಿಷ್ಯದ ಅರಿವು ಮೂಡಬೇಕಾದರೆ ಇತಿಹಾಸದ ಅವಲೋಕನ ಮಾಡಿಕೊಳ್ಳಬೇಕು ಎಂದು ಗಣಿ, ಭೂ ವಿಜ್ಞಾನ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಆಚಾರ ಹಾಲಪ್ಪ ಬಸಪ್ಪ ಅವರು ಹೇಳಿದರು. ಅವರು ಇಂದು ಮುಂಜಾನೆ ಕೇಂದ್ರ ಸಂವಹನ ಶಾಖೆ ಹಾಗೂ ಕರ್ನಾಟಕ ಮಹಾವಿದ್ಯಾಲಯದ ಎನ್.ಎಸ್.ಎಸ್(NSS) ಘಟಕ ಇವರ ಸಂಯುಕ್ತ ಆಶ್ರಯದಲ್ಲಿ ಇಂದು 75 ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ(Azadi Ka Amrit Mahotsav) ಹಾಗೂ ಕೇಂದ್ರ ಸರ್ಕಾರದ 8 ವರ್ಷಗಳ ವಿವಿಧ ಯೋಜನೆಗಳ ಕುರಿತು 3 ದಿನಗಳ ಛಾಯಾಚಿತ್ರ ಪ್ರದರ್ಶನ ಹಾಗೂ ವಿಶೇಷ ಜಾಗೃತಿ ಕಾರ್ಯಕ್ರಮವನ್ನು ಕೆಸಿಡಿ ಆವರಣದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ಪಠ್ಯಪುಸ್ತಕಗಳ ಜೊತೆ ಇತಿಹಾಸವನ್ನು ಅರಿತುಕೊಳ್ಳುವುದು ನಮ್ಮ ಕರ್ತವ್ಯ ಸ್ವಾತಂತ್ರ್ಯ ಪೂರ್ವದಲ್ಲಿ ನಮ್ಮ ಹಿರಿಯರು ಅನುಭವಿಸಿದ ಕಷ್ಟಗಳನ್ನು ತಿಳಿದುಕೊಳ್ಳಬೇಕು ದೇಶದ ಪ್ರಧಾನಿ ನರೇಂದ್ರ ಮೋದಿಯ(PM Narendra Modi)ವರು ಅತ್ಯಂತ ಕಟ್ಟ ಕಡೆಯ ಬಡವನಿಗೂ ಕೂಡ ಎಲ್ಲ ಮೂಲಭೂತ ಸೌಕರ್ಯಗಳನ್ನು ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆಯುಶ್ಮಾನ್ ಆರೋಗ್ಯ ಯೋಜನೆ((Ayushman Arogya Yojana), ಮುದ್ರಾ ಯೋಜನೆ(Mudra Loan), ಉಜ್ವಲ ಗ್ಯಾಸ್(Ujwal Gas), ಜಲ ಶಕ್ತಿ ಯೋಜನೆಗಳ ಮೂಲಕ ಪ್ರತಿಯೊಂದು ಸಣ್ಣ ಕುಟುಂಬಕ್ಕೂ ಕೂಡ ಶುದ್ಧ ನಲ್ಲಿಯ ನೀರನ್ನು ಒದಗಿಸುತ್ತಿದೆ. ಇಡೀ ರಾಜ್ಯದಲ್ಲಿ ಅಭಿವೃದ್ಧಿ ವಿಚಾರದಲ್ಲಿ ಕೇಂದ್ರ ಸರ್ಕಾರದಿಂದ ಬರುವಂತಹ ಎಲ್ಲಾ ಯೋಜನೆಗಳು ಮೊದಲು ಮುಟ್ಟುವುದು ಧಾರವಾಡದ ಭಾಗದ ಜನರಿಗೆ ಎಂದರು.
ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವಕ್ಕೆ ಡೇಟ್ ಫಿಕ್ಸ್: ಶಶೀಲ್ ನಮೋಶಿ
ಜೀವನದಲ್ಲಿ ಸಿಕ್ಕಂತಹ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ಗುರಿಯನ್ನು ತಲುಪಬೇಕು. ದೇಶದಲ್ಲಿ ಮಾನವನಿಗೆ ಅಸಾಧ್ಯವಾದುದು ಯಾವುದು ಇಲ್ಲ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸಾಧ್ಯ ಸಾಧ್ಯತೆಗಳ ಕುರಿತು ಅರಿತುಕೊಳ್ಳಬೇಕು. ಎಲ್ಲ ರಾಜ್ಯಗಳನ್ನು ಒಗ್ಗೂಡಿಸಿಕೊಂಡು ಅವರಿಗೆ ಮಾನವೀಯತೆಯ ದೃಷ್ಟಿಯಿಂದ ಎಲ್ಲಾ ಸಹಾಯ, ಸಹಕಾರಗಳನ್ನು ನೀಡುತ್ತಿರುವ ದೇಶ ನಮ್ಮ ಭಾರತ ಹಿರಿಯಣ್ಣನ ಸ್ಥಾನದಲ್ಲಿದೆ ಎಂದರು ವಿದ್ಯಾರ್ಥಿಗಳಲ್ಲಿ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಲು ಮತ್ತು ಸಂಬಂಧಿಸಿದ ಎಲ್ಲರನ್ನೂ ಉತ್ತರದಾಯಿಗಳನ್ನಾಗಿ ಮಾಡುವ ಉದ್ದೇಶದಿಂದ ಕಲಿಕೆಯ ಫಲಿತಾಂಶಗಳ ಮೇಲೆ ಹೆಚ್ಚು ಗಮನ ನೀಡಲಾಗುತ್ತಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಮಹಿಳೆಯರಿಗೆ ಸಮಾನ ಮತ್ತು ಸಕ್ರಿಯ ಪಾಲ್ಗೊಳ್ಳುವಿಕೆಯ ಖಾತ್ರಿಪಡಿಸುವ ಪರಿಸರ ನಿರ್ಮಿಸಲಾಗುತ್ತಿದೆ. ವಿಶ್ವದಲ್ಲಿಯೇ ಭಾರತ ಯುವ ರಾಷ್ಟ್ರವಾಗಿದೆ. ಯುವಶಕ್ತಿಯೇ ಭಾರತದ ನಿಜವಾದ ಬಲವಾಗಿದೆ. ಲಕ್ಷಾಂತರ ಭಾರತೀಯರ ಅಭೂತ ಪೂರ್ವ ಪ್ರಗತಿಯ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಶ್ರಮಿಸುತ್ತಿದೆ. ಮುಂದಿನ ಪೀಳಿಗೆಗೆ ಮೂಲಸೌಕರ್ಯ ರೂಪಿಸುವ ಮೂಲಕ ಭಾರತಕ್ಕೆ ಭದ್ರಬುನಾದಿ ಹಾಕೋಣ ಎಂದರು.
ಸ್ವಾತಂತ್ರ್ಯ ಯೋಧರಿಗೆ ನಮನ ಸಲ್ಲಿಸಲು ‘ಡಿಜಿಟಲ್ ಜ್ಯೋತಿ’: ಪ್ರಧಾನಿ ಮೋದಿ
ಕರ್ನಾಟಕ ಕಲಾ ಮಹಾವಿದ್ಯಾಲಯದ ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಜಗದೀಶ ಕಿವುಡನವರ ಮಾತನಾಡಿ, ಭಾರತದ ಸ್ವಾತಂತ್ರ್ಯ ಚಳುವಳಿ ಹಾಗೂ ಕರ್ನಾಟಕದ ಏಕೀಕರಣ ಚಳುವಳಿಗೆ ವೇದಿಕೆಯನ್ನು ಕಲ್ಪಿಸಿ ಕೊಟ್ಟದ್ದು ಧಾರವಾಡದ ಪುಣ್ಯಭೂಮಿ. ಭಾರತದ ಚರಿತ್ರೆ ಮಹತ್ವದ್ದಾಗಿದೆ. ಜಗತ್ತಿನಲ್ಲಿ ಪ್ರಬಲ ಹಾಗೂ ಗಟ್ಟಿತನ ಸಂಸ್ಕøತಿ ಎಂದರೆ ಅದು ನಮ್ಮ ಭಾರತೀಯ ಸಂಸ್ಕೃತಿಯಾಗಿದೆ. ವಿದ್ಯಾರ್ಥಿಗಳು ನಮ್ಮ ದೇಶ, ನಾಡು, ಸಂಸ್ಕೃತಿ, ಭಾರತ ಪರಂಪರೆ ಹಾಗೂ ಭಾರತೀಯ ಇತಿಹಾಸದ ಪುಟಗಳನ್ನು ತಿಳಿದುಕೊಳ್ಳಬೇಕು ಎಂದರು.
ಗಿರಿ ಫೌಂಡೇಶನ್ ಮುಖ್ಯಸ್ಥ ಪ್ರದೀಪ ಮೇಲಗಡೆ ಮಾತನಾಡಿ, ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಆವಾಸ್ ಯೋಜನೆಗಳ ಮೂಲಕ ಮೂಲಭೂತ ಸೌಕರ್ಯ ಹಾಗೂ ವೈಯಕ್ತಿಕ ಶೌಚಾಲಯ ಸಮುದಾಯ ಶೌಚಾಲಯ ಕಟ್ಟಿಕೊಡುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಸ್ವಚ್ಛ ಭಾರತ ಅಭಿಯಾನ, ಅಟಲ್ ಮಿಷನ್ ಯೋಜನೆ, ಜಲ ಜೀವನ ಮಿಷನ್, ಉಜ್ವಲ ಯೋಜನೆ, ಪ್ರಧಾನಮಂತ್ರಿ ಜನಧನ್ ಯೋಜನೆ, ಫಸಲ್ ಭೀಮಾ ಯೋಜನೆ, ಕೃಷಿ ಸಿಂಚಾಯಿ ಯೋಜನೆ, ಮಹಿಳಾ ಸಬಲೀಕರಣ ಹಾಗೂ ರೈತಾಪಿ ಯೋಜನೆಗಳ ಕುರಿತು ವಿವರಿಸಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಅರವಿಂದ್ ಚಂದ್ರಕಾಂತ ಬೆಲ್ಲದ(Arvind Chandrakanth Bellad) ಮಾತನಾಡಿ, ಜಗತ್ತಿನಲ್ಲಿ ಅತ್ಯಂತ ಶ್ರೀಮಂತ ರಾಷ್ಟ್ರವಾದ ನಮ್ಮ ಭಾರತ ಬಲಿಷ್ಠವಾಗಿದೆ. ಭಾರತ ದೇಶದಲ್ಲಿ ಏಕತೆ, ವಿಜ್ಞಾನ, ತಂತ್ರಜ್ಞಾನ, ಉತ್ತಮ ಶಿಕ್ಷಣ ವ್ಯವಸ್ಥೆಯನ್ನು ಹೊಂದಿದೆ. ಇತಿಹಾಸದ ಬಗ್ಗೆ ತಿಳಿದುಕೊಂಡರೆ ಮುಂದಿನ ಭವಿಷ್ಯವನ್ನು ಅರಿತುಕೊಳ್ಳಬಹುದು. ಕೇಂದ್ರ ಸರ್ಕಾರ ಹೊಸ ವಿಚಾರ, ಹೊಸ ದಿಕ್ಕುಗಳನ್ನು ದೇಶಕ್ಕೆ ನೀಡುತ್ತಿದೆ ಅದರ ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಶಾಸಕ ಅಮೃತ ದೇಸಾಯಿ(MLA Amruta desai), ಜಿಲ್ಲಾಧಿಕಾರಿ ಗುರುದತ್ತ ಹೆಗಡೆ(Gurudatt Hegde), ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ ಇಟ್ನಾಳ(Suresh Itnal), ಕರ್ನಾಟಕ ಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಡಿ. ಬಿ. ಕರಡೋಣಿ, ಕರ್ನಾಟಕ ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎಂ.ಸಿ. ಚೌಗಲಾ ಉಪಸ್ಥಿತರಿದ್ದರು.
ಅಮೃತ ಮಹೋತ್ಸವ ಯಾತ್ರೆಗೆ ರಾಜ್ಯಪಾಲ ಚಾಲನೆ, ಏಷ್ಯಾನೆಟ್ ನ್ಯೂಸ್ ಗ್ರೂಪ್ ಕಾರ್ಯಕ್ಕೆ ಮೆಚ್ಚುಗೆ
ಕೇಂದ್ರ ಸಂವಹನ ಶಾಖೆಯ ಕ್ಷೇತ್ರ ಪ್ರಚಾರ ಅಧಿಕಾರಿ ಶೃತಿ ಎಸ್. ಟಿ ಪ್ರಸ್ತಾವಿಕವಾಗಿ ಮಾತನಾಡಿದರು. ಕರ್ನಾಟಕ ಕಲಾ ಮಹಾವಿದ್ಯಾಲಯದ ಎನ್.ಎಸ್.ಎಸ್ ಕಾರ್ಯಕ್ರಮ ಅಧಿಕಾರಿ ಡಾ. ಸಲೀಮಾಬಿ ಎ. ಕೋಳೂರ ಸ್ವಾಗತಿಸಿದರು. ಕೇಂದ್ರ ಸಂವಹನ ಶಾಖೆಯ ಎಸ್.ಪಿ.ಎ ಮುರಳೀಧರ ಕಾರಭಾರಿ ಕಾರ್ಯಕ್ರಮ ನಿರೂಪಿಸಿದರು.ಕೇಂದ್ರ ಸರ್ಕಾರದ ವಾರ್ತಾ ಮತ್ತು ಪ್ರಸಾರ ಮಂತ್ರಾಲಯದ ಸಂವಹನ ಶಾಖೆ ಹಾಗೂ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ ಧಾರವಾಡ ವಲಯ ಸಂಯುಕ್ತವಾಗಿ 75 ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಸ್ವಾತಂತ್ಯ್ರ ಚಳುವಳಿ ಮತ್ತು ಉತ್ತರ ಕರ್ನಾಟಕದ ಪ್ರಮುಖ ಐತಿಹಾಸಿಕ ಸ್ಥಳಗಳ ಕುರಿತು ಮೂರು ದಿನಗಳ ಛಾಯಾಚಿತ್ರ ಪ್ರದರ್ಶನವನ್ನು ಕೆಸಿಡಿ ಗ್ರಂಥಾಲಯ ಕಟ್ಟಡದಲ್ಲಿ ಏರ್ಪಡಿಸಲಾಗಿದೆ.