ಬೀದಿ ನಾಯಿಗಳ ಹಾವಳಿಗೆ ಬೆಚ್ಚಿ ಬಿದ್ದ ಕೋಟೆನಾಡಿನ ಜನರು!

By Ravi Nayak  |  First Published Jul 25, 2022, 5:09 PM IST

ಕೋಟೆನಾಡು ಚಿತ್ರದುರ್ಗದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಸಾರ್ವಜನಿಕರು ಮನೆಯಿಂದ ಹೊರಬರಲು ಹೆದರುತ್ತಿದ್ದಾರೆ. ನಗರಸಭೆ ಬೀದಿನಾಯಿಗಳನ್ನು ನಿಯಂತ್ರಿಸುವಂತೆ ಒತ್ತಾಯಿಸಿದ್ದಾರೆ.


ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ (ಜು.25) : ಇತ್ತೀಚಿನ ದಿನಗಳಲ್ಲಿ ಜನರಿಗೆ ನಾಯಿಗಳ ಮೇಲಿನ ಪ್ರೀತಿ ಹೆಚ್ಚಾಗ್ತಿದೆ. ಅದಕ್ಕಂತಲೇ ಅನೇಕ ಮಂದಿ ವಿವಿಧ ಜಾತಿಯ ನಾಯಿಗಳನ್ನು ಮನೆಗೆ ತಂದು ಸಾಕಲು ಮುಂದಾಗಿದ್ದಾರೆ. ಆದ್ರೆ ಬಡಾವಣೆಯಲ್ಲಿರುವ ಬೀದಿ ನಾಯಿಗಳನ್ನು ಕಂಡ್ರೆ ಸಾಕು ಚಿತ್ರದುರ್ಗ ನಗರದ ಬಹುತೇಕ ಬಡಾವಣೆಯ ಜನರು ಹೆದರಿ ಮನೆಯಿಂದ ಹೊರಬರುವುದಕ್ಕೂ ಚಿಂತಿಸುವ ಕಾಲ ಬಂದಿದೆ.

Tap to resize

Latest Videos

 ಕಳೆದ ಒಂದು ತಿಂಗಳಿಂದಲೂ ಚಿತ್ರದುರ್ಗ ನಗರದ, ಐಯುಡಿಪಿ(IUDP), ಸಾದಿಕ್‌ನಗರ(Sadiq Nagar), ಕೆಳಗೋಟೆ(Kelgote), ದೊಡ್ಡಪೇಟೆ(Doddapete), ಸರಸ್ವತಿ ಪುರಂ(Saraswatipuram) ಇನ್ನಿತರ ಬಡಾವಣೆಯ ಜನರು ರಾತ್ರಿ ವೇಳೆ ತಮ್ಮ ಮನೆಗಳಿಗೆ ನಿರ್ಭಯವಾಗಿ ತೆರಳೋದಕ್ಕೂ ಆತಂಕ ಪಡುವ ವಾತಾವರಣ ಸೃಷ್ಡಿಯಾಗಿದೆ‌‌. ಇದಕ್ಕೆಲ್ಲಾ ಮೂಲ ಕಾರಣವೇ ಬೀದಿ ನಾಯಿಗಳ ಹಾವಳಿ. ರಸ್ತೆ ಮೇಲೆ ಬೈಕ್ ಹಾಗು ಕಾರ್ ಗಳಲ್ಲಿ ಜನರು ಹೋಗುವ ಹಾಗೆ ಇಲ್ಲ ಏಕಾಏಕಿ ಬೀದಿ ನಾಯಿಗಳು ಬಂದು ಅಟ್ಯಾಕ್ ಮಾಡುತ್ತವೆ.

ಬೀದಿನಾಯಿಗಳ ದಾಳಿಗೆ ಪೌರ ಸಂಸ್ಥೆಗಳೇ ಹೊಣೆ: ಹೈಕೋರ್ಟ್‌

ಎಷ್ಟೇ ಬಾರಿ ಜನರು ಈ ಕುರಿತು ಅಧಿಕಾರಿಗಳ ಗಮನಕ್ಕೆ ತಂದ್ರೂ ಯಾವುದೇ ಪ್ರಯೋಜನ ಆಗಿಲ್ಲ. ಇನ್ನೂ ನಿನ್ನೆ ನಗರದ ಕೂದಲಳತೆ ದೂರದಲ್ಲಿರುವ ಮೆದೇಹಳ್ಳಿ(medehalli) ವ್ಯಾಪ್ತಿಗೆ ಬರುವ ಬಿಳಿಕಲ್ಲು ನಾಯಕರಹಟ್ಟಿ(Nayakanhatti) ಬಡಾವಣೆಯಲ್ಲಿ ಒಂದೂವರೆ ವರ್ಷರ ಬಾಲಕ ಯಶವಂತ್ ಗೆ ಬೀದಿ ನಾಯಿ(Street Dog) ಕಡಿದ ಪರಿಣಾಮವಾಗಿ ಎಷ್ಟೇ ಆಸ್ಪತ್ರೆಗಳನ್ನು ಅಲೆದರೂ ಕೊನೆಗೂ ಚಿಕಿತ್ಸ ಫಲಿಸದೇ ಆ ಮಗು ಕೊಲೆಯುಸಿರು ಎಳದಿದ್ದು ದುರಂತವೇ ಸರಿ. 

ಬೀದಿ ನಾಯಿಗಳ ಹಾವಳಿ ನೆನ್ನೆ ಮೊನ್ನೆಯದಲ್ಲ, ಇದು ಸುಮಾರು ಒಂದು ತಿಂಗಳುಗಳಿಂದಲೂ ನಗರದ ಪ್ರಮುಖ ಬಡಾವಣೆಗಳಲ್ಲಿ ಜನರ ಮೇಲೆ ಅಟ್ಯಾಕ್(Attack) ಮಾಡುತ್ತಲೇ ಬಂದಿದ್ದಾವೆ. ಈ ಕುರಿತು ಸ್ಥಳೀಯರು ಅನೇಕ ಬಾರಿ ನಗರಸಭೆ ಇಲಾಖೆಗೆ ಮನವಿ ಸಲ್ಲಿಸಿದ್ದಾರೆ. ಕೂಡಲೇ ಬೀದಿ ನಾಯಿಗಳನ್ನು ಬಂಧಿಸಿ ಜನರ ನೆಮ್ಮದಿ ಕಾಪಾಡಿ ಎಂದು ಗೋಗರದಿದ್ದಾರೆ. ಆದ್ರೂ ಅಧಿಕಾರಿಗಳು ಮಾತ್ರ ಸೈಲೆಂಟ್ ಆಗಿ ಇರೋದು ಇಂತಹ ಅನೇಕ ಘಟನೆಗಳಿಗೆ ಎಡೆಮಾಡಿಕೊಟ್ಟಂತಾಗಿದೆ. ಇನ್ನೂ ಗುಂಪು ಗುಂಪಾಗಿ ಬರುವ ಬೀದಿ ನಾಯಿಗಳ ಯಾವಾಗ ಜನರ ಮೇಲೆ ಎರಗುತ್ತಾವೋ ಎಂಬುದೇ ತಿಳಿದಿರುವುದಿಲ್ಲ.

ತಂಗಿಯೊಂದಿಗೆ ಹೆಜ್ಜೆ ಹಾಕುತ್ತಿದ್ದ 5 ವರ್ಷದ ಬಾಲಕನ ಕಚ್ಚಿ ಎಳೆದೊಯ್ದು ಕೊಂದು ಹಾಕಿದ ಬೀದಿ ನಾಯಿ!

ಇನ್ನೂ ಏರಿಯಾಗಳಲ್ಲಿ ಬೀದಿ ನಾಯಿಗಳ ಉಪಟಳ ಹೆಚ್ಚಾಗಿರೋದಕ್ಕೆ ಪೋಷಕರು ತಮ್ಮ ಮಕ್ಕಳನ್ನು ಮನೆಯಿಂದ ಹೊರಗೆ ಕಳುಹಿಸುವುದಕ್ಕೂ ಚಿಂತಿಸುತ್ತಿದ್ದಾರೆ. ಯಾಕಂದ್ರೆ ಎಲ್ಲಿ ನಾಯಿಗಳು ಮಕ್ಕಳ ಮೇಲೆ ಎಗರಿ ಅಟ್ಯಾಕ್ ಮಾಡುತ್ತವೋ ಎಂಬ ಪ್ರಾಣ ಭಯದಲ್ಲಿಯೆ ನಿತ್ಯ ಬಡಾವಣೆಯ ಜನರು ಜೀವನ‌ ಸಾಗಿಸುತ್ತಿದ್ದಾರೆ. ಆದ್ದರಿಂದ ಕೂಡಲೇ ನಗರಸಭೆ ಅಧಿಕಾರಿಗಳು ಈ ಬೀದಿ ನಾಯಿಗಳ ಹಾವಳಿಯನ್ನು ತಪ್ಪಿಸಿ ಜನರ ನೆಮ್ಮದಿ ಕಾಪಾಡಬೇಕಿದೆ.

click me!