ವಿದ್ಯಾರ್ಥಿಗಳಿಂದ ಬಾಬ್ರಿ ಮಸೀದಿ ಪ್ರತಿಕೃತಿ ಧ್ವಂಸ: ಕಲ್ಲಡ್ಕ ಭಟ್ ಸೇರಿ ಐವರ ವಿರುದ್ದ ಕೇಸ್

By Suvarna NewsFirst Published Dec 17, 2019, 11:46 AM IST
Highlights

ಶಾಲಾ ಮಕ್ಕಳ ಕ್ರೀಡೋತ್ಸವದಲ್ಲಿ ಬಾಬ್ರಿ ಮಸೀದಿ ಘಟನೆ ಮರುಸೃಷ್ಠಿ ಪ್ರಕರಣ| ಆರ್ ಎಸ್ ಎಸ್ ಮುಖಂಡ ಕಲ್ಕಡ್ಕ ಪ್ರಭಾಕರ ಭಟ್ ಸೇರಿ ಐವರ ವಿರುದ್ದ ಪ್ರಕರಣ ದಾಖಲು| ಆರ್ ಎಸ್ ಎಸ್ ಮುಖಂಡ ಕಲ್ಕಡ್ಕ ಪ್ರಭಾಕರ ಭಟ್ ಅಧ್ಯಕ್ಷತೆಯ ಶ್ರೀರಾಮ ವಿದ್ಯಾಕೇಂದ್ರ

ಮಂಗಳೂರು[ಡಿ.17]: ಹಿಂದೂ ಹಾಗೂ ಮುಸಲ್ಮಾನರ ನಡುವಿನ ಕೋಮು ವೈಷಮ್ಯಕ್ಕೆ ಕಾರಣವಾಗಿದ್ದ ಅಯೋಧ್ಯೆ ವಿಚಾರವಾಗಿ ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಪ್ರತಿ ಬಾರಿಯೂ ಗಲಭೆಗೆ ಕಾರಣವಾಗುತ್ತಿದ್ದ ಈ ವಿಚಾರ ಶಾಂತಿಯುತವಾಗಿ ಅಂತ್ಯವಾಗಿದ್ದು, ದೇಶದ ನಾಗರಿಗರು ಸುಪ್ರೀಂ ತೀರ್ಪಿಗೆ ತಲೆಬಾಗಿದ್ದಾರೆ. ಆದರೀಗ ಮತ್ತೆ ಅಯೋಧ್ಯೆಯ ಬಾಬ್ರಿ ಮಸೀದಿ ಧ್ವಂಸ ವಿಚಾರ ಸದ್ದು ಮಾಡಿದೆ. 

ಹೌದು ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ವಿದ್ಯಾರ್ಥಿಗಳು ಭಾನುವಾರ ನಡೆದ ಕ್ರೀಡೋತ್ಸವದಲ್ಲಿ ಬಾಬ್ರ ಮಸೀದಿ ಪ್ರತಿಕೃತಿ ಧ್ವಂಸಗೊಳಿಸುವ ಅಣಕು ಪ್ರದರ್ಶನ ಮಾಡಿದ್ದರು. ಈ ವೇಳೆ ವಿದ್ಯಾರ್ಥಿಗಳು 'ರಾಮ್ ಮಂದಿರ್ ವಹೀಂ ಬನೇಗಾ' ಹಾಗೂ 'ಜೈ ಶ್ರೀರಾಮ್' ಎಂಬ ಘೋಷಣೆಗಳನ್ನು ಕೂಗಿದ್ದರು. ಈ ಕಾರ್ಯಕ್ರಮದಲ್ಲಿ ಮಾಜಿ ಐಪಿಎಸ್ ಅಧಿಕಾರಿ ಹಾಗೂ ಪುದುಚೇರಿ ರಾಜ್ಯಪಾಲೆ ಕಿರಣ್ ಬೇಡಿ, ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ಎಸಿಬಿ ಐಜಿ ಚಂದ್ರಶೇಖರ್, ದ‌.ಕ ಜಿಲ್ಲಾ ಎಸ್ಪಿ ಲಕ್ಷ್ಮೀ ಪ್ರಸಾದ್ ಸೇರಿ ಅನೇಕ‌ ಗಣ್ಯರು ಹಾಜರಿದ್ದರು. ಸದ್ಯ ಈ ಅಣಕು ಪ್ರದರ್ಶನದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ವಿವಾದ ಹುಟ್ಟು ಹಾಕಿದೆ. 

"

ಅಲ್ಲದೇ ಹಿಂದುತ್ವದ ಹೆಸರಿನಲ್ಲಿ ಮುಗ್ಧ ಮಕ್ಕಳ ಮನಸ್ಸಿನಲ್ಲಿ ಕೋಮುದ್ವೇಷ ಮೂಡಿಸುತ್ತಿದ್ದು, ಶಿಕ್ಷಣ ಸಂಸ್ಥೆಯಲ್ಲೇ ಧರ್ಮದ ನಡುವೆ ವಿಷಬೀಜ ಬಿತ್ತುವ ಕೆಲಸ ನಡೆಯುತ್ತಿದೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.  

ಪ್ರಕರಣ ದಾಖಲು

ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ಕಲ್ಲಡ್ಕ ವಲಯದ PFI ನಾಯಕ ಅಬೂಬಕ್ಕರ್ ಸಿದ್ದೀಕ್ ಈ ಸಂಬಂಧ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ವಿದ್ಯಾರ್ಥಿಗಳಿಂದ ಇಂತಹ ಅಣಕು ಪ್ರದರ್ಶನ ನಡೆಸಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದಾರೆಂದು ಆರೋಪಿಸಿದ್ದು, ಆರ್ ಎಸ್ ಎಸ್ ಮುಖಂಡ ಹಾಗೂ ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷ ಪ್ರಭಾಕರ ಭಟ್, ಶಾಲಾ ಸಂಚಾಲಕ ನಾರಾಯಣ ಸೋಮಯಾಜಿ, ವಸಂತ ಮಾಧವ, ಚೆನ್ನಪ್ಪ ಕೋಟ್ಯಾನ್ ಮತ್ತು ಪ್ರಾಂಶುಪಾಲರ ವಿರುದ್ಧ ಪ್ರಕರಣ ದಾಖಲು ಮಾಡಿದ್ದಾರೆ.

"
"

""

ಡಿಸೆಂಬರ್ 17ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!