ಎಪಿಎಲ್ ಹಾಗೂ ಬಿಪಿ ಕಾರ್ಡು ನಿಮ್ಮ ಬಳಿ ಇದೆಯಾ ಹಾಗಾದರೆ ನಿಮಗಿಲ್ಲಿದೆ ಗುಡ್ ನ್ಯೂಸ್. ಮುಖ್ಯಮಂತ್ರಿ ಯಡಿಯೂರಪ್ಪ ಹುಟ್ಟು ಹಬ್ಬದ ಅಂಗವಾಗಿ ಬಂಪರ್ ಕೊಡುಗೆ ನೀಡಲಾಗುತ್ತಿದೆ.
ಸಾಗರ (ಫೆ.27): ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಹುಟ್ಟುಹಬ್ಬದ ಅಂಗವಾಗಿ ಭಾರತ ಮತ್ತು ಕರ್ನಾಟಕ ಸರ್ಕಾರದ ಸಹಯೋಗದೊಂದಿಗೆ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ಎಪಿಎಲ್ ಮತ್ತುಬಿಪಿಎಲ್ ಕಾರ್ಡ್ ಹೊಂದಿರುವ ಎಲ್ಲರಿಗೂ ಉಚಿತ ಆರೋಗ್ಯ ಕಾರ್ಡ್ ಮಾಡಿಕೊಡುವ ಯೋಜ ನೆಗೆ ಚಾಲನೆ ನೀಡಲಾಗುತ್ತಿದೆ ಎಂದು ಶಾಸಕ ಎಚ್.ಹಾಲಪ್ಪ ತಿಳಿಸಿದರು.
ಶಾಸಕರ ಕಚೇರಿಯಲ್ಲಿ ಬುಧವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಇಂದು ತಾಲೂಕಿನ ೩೫ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲೂ ಬೆಳಿಗ್ಗೆ 8 ರಿಂದ ಸಂಜೆ 7ರವರೆಗೆ ಕಾರ್ಡ್ ಮಾಡಿಕೊಡಲಾಗುತ್ತದೆ. ನಿಯಮದಂತೆ ಕಾರ್ಡ್ ಮಾಡಿಕೊಡಲು 10 ರು. ತೆಗೆದುಕೊಳ್ಳಲಾಗುತ್ತದೆ. ಆದರೆ ಯಡಿಯೂರಪ್ಪ ಹುಟ್ಟುಹಬ್ಬದ ಅಂಗವಾಗಿ ಸಂಸದ ಬಿ.ವೈ.ರಾಘವೇಂದ್ರ ಅವರ ಸಲಹೆಯಂತೆ ಉಚಿತವಾಗಿ ಗ್ರಾಮೀಣ ಭಾಗದ ಜನರಿಗೆ ಆರೋಗ್ಯ ಕಾರ್ಡ್ ಮಾಡಿಕೊಡಲಾಗುತ್ತದೆ ಎಂದು ತಿಳಿಸಿದರು.
ಏಕ ದೇಶ, ಏಕ ಪಡಿತರ ಚೀಟಿ: ಕರ್ನಾಟಕದಲ್ಲಿ ಚಾಲನೆ...
ಕೆಎಫ್‌ಡಿ ಪ್ರಕರಣ: ತಾಲ್ಲೂಕಿನ ತುಮರಿಯ ಮಾರಲಗೋಡು ಗ್ರಾಮದ ಎಚ್.ಕೆ.ಮಂಜಪ್ಪ ಎಂಬುವವರಲ್ಲಿ ಕೆ.ಎಫ್.ಡಿ. ವೈರಾಣು ಕಾಣಿಸಿಕೊಂಡಿದ್ದು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜೊತೆಗೆ ಮಂಗನಕಾಯಿಲೆ ಸಂಶೋಧನಾ ಘಟಕ ಸಾಗರದಲ್ಲಿಯೆ ಸ್ಥಾಪಿಸುವ ಸಂಬಂಧ ಐದು ಬಾರಿ ಪತ್ರ ಬರೆಯಲಾಗಿದೆ. ಯಾವುದೇ ಕಾರಣಕ್ಕೂ ಘಟಕ ಸ್ಥಳಾಂತರಕ್ಕೆ ಅವಕಾಶ ನೀಡುವುದಿಲ್ಲ. ಈ ಬಾರಿ ಬಜೆಟ್‌ನಲ್ಲಿ ಘಟಕ ಸ್ಥಾಪನೆಗೆ ಬೇಕಾದ ಹಣವನ್ನು ಮಂಜೂರು ಮಾಡಿಸಲಾಗುತ್ತದೆ ಎಂದು ತಿಳಿಸಿದರು.
ಜೋಗದಲ್ಲಿ ಜಿಪ್ ಲೈನ್ : ಜೋಗ ಜಲಪಾತ ಪ್ರದೇಶಾಭಿವದ್ಧಿ ಖಾಸಗಿಯವರಿಂದ ಸಾಧ್ಯವಿಲ್ಲ. ಇಲ್ಲಿ ಕೆಪಿಸಿ, ಕೆಪಿಟಿಸಿಎಲ್, ಅರಣ್ಯ ಇಲಾಖೆ, ಕಂದಾಯ ಇಲಾಖೆ, ಪ್ರವಾಸೋದ್ಯಮ ಇಲಾಖೆ ಸೇರಿದಂತೆ ಬೇರೆಬೇರೆ ಇಲಾಖೆಯ ಜಮೀನು ಇದೆ.ಇಂತಹ ಸಂದರ್ಭದಲ್ಲಿ ಖಾಸಗಿಯವರು ಇದನ್ನು ಬಗೆ ಹರಿಸಿಕೊಳ್ಳಲು ಸಮಸ್ಯೆ-ಯಾಗುತ್ತದೆ. ಈ ಹಿನ್ನೆಲೆಯಲ್ಲಿ ಸರ್ಕಾರವೇ ಜೋಗ ಅಭಿವದ್ಧಿಗೆ ಮುಂದಾಗಬೇಕು. ಜೋಗ್‌ಫಾಲ್ಸ್ ವೀಕ್ಷಣೆ ಮತ್ತು ಪ್ರವಾಸಿಗರನ್ನು ಆಕರ್ಷಿಸಲು 78.50 ಲಕ್ಷ ರು. ವೆಚ್ಚದಲ್ಲಿ ಜಿಪ್ ಲೈನ್ ಕಾಮಗಾರಿ ಕೈಗೊಳ್ಳಲು ಹಣ ಮಂಜೂರಾತಿಗೆ ಆಡಳಿತಾತ್ಮಕ ಅನುಮೋದನೆ ಕೋರಲಾಗಿದೆ ಎಂದು ಹೇಳಿದರು.