ರಾಜ್ಯಾದ್ಯಂತ ಸರ್ಕಾರಿ ಸಾರಿಗೆ ಬಸ್ ಟಿಕೆಟ್ ದರವನ್ನು ಶೇ.12ರಷ್ಟುಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶಿಸಿದ್ದು, ಮಂಗಳೂರಿನಿಂದ ಇತರೆಡೆ ತೆರಳುವ ಸಾರಿಗೆ ಬಸ್‌ಗಳ ಪ್ರಯಾಣದರಲ್ಲೂ ಭಾರೀ ಏರಿಕೆ ಉಂಟಾಗಿದೆ.
ಮಂಗಳೂರು(ಫೆ.27): ರಾಜ್ಯಾದ್ಯಂತ ಸರ್ಕಾರಿ ಸಾರಿಗೆ ಬಸ್ ಟಿಕೆಟ್ ದರವನ್ನು ಶೇ.12ರಷ್ಟುಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶಿಸಿದ್ದು, ಮಂಗಳೂರಿನಿಂದ ಇತರೆಡೆ ತೆರಳುವ ಸಾರಿಗೆ ಬಸ್‌ಗಳ ಪ್ರಯಾಣದರಲ್ಲೂ ಭಾರೀ ಏರಿಕೆ ಉಂಟಾಗಿದೆ.
ಕೆಎಸ್ಸಾರ್ಟಿಸಿ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳ ವ್ಯಾಪ್ತಿಯಲ್ಲಿ ಈ ದರ ಹೆಚ್ಚಳ ಉಂಟಾಗಿದೆ. ಬಡ, ಮಧ್ಯಮ ವರ್ಗದವರೇ ಹೆಚ್ಚಾಗಿ ಬಳಕೆ ಮಾಡುವ ಸಾರಿಗೆ ಬಸ್ಸುಗಳ ಪ್ರಯಾಣದರ ಮಾತ್ರ ಹೆಚ್ಚಿಸಲಾಗಿದೆ.
ಮಂಗಳೂರಿನಿಂದ ಎಲ್ಲಿಗೆ ಎಷ್ಟು? ಹಳೆ ದರ ಮತ್ತು ಪರಿಷ್ಕೃತ ದರ
ಹಾಸನ- 164- 183, ಬೆಂಗಳೂರು- 356- 396, ಮೈಸೂರು- 246- 276, ಧರ್ಮಸ್ಥಳ- 75- 85, ಸುಬ್ರಹ್ಮಣ್ಯ- 106- 118, ಉಪ್ಪಿನಂಗಡಿ- 55- 61, ಬಿ.ಸಿ.ರೋಡ್- 35- 39, ಪುತ್ತೂರು- 60- 65, ಮಡಿಕೇರಿ- 135- 151
ಉಡುಪಿ- 66- 71, ಮಣಿಪಾಲ- 71- 76, ಕುಂದಾಪುರ- 106- 116, ಹುಬ್ಬಳ್ಳಿ- 390- 433, ಚಿಕ್ಕಮಗಳೂರು- 206- 230, ಶಿವಮೊಗ್ಗ- 246- 276, ದಾವಣಗೆರೆ- 333- 373, ಶಿರಸಿ- 297- 329, ಕಾಸರಗೋಡು- 57- 60, ಪ್ರೋತ್ಸಾಹಕ ದರಗಳು, ಮಂಗಳೂರಿನಿಂದ ಧರ್ಮಸ್ಥಳ- 72 ರು, ಉಪ್ಪಿನಂಗಡಿ- 45 ರು, ಸುಬ್ರಹ್ಮಣ್ಯ- 100 ರು.., ಬಿ.ಸಿ.ರೋಡ್- 25 ರು.