ಅಜ್ಜನನ್ನೇ ಕೊಲೆ ಮಾಡಿದ್ದ ಮೊಮ್ಮಗನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಬುದ್ದಿ ಮಾತು ಹೇಳಿದ್ದಕ್ಕೆ ಕೊಲೆ ಮಾಡಲಾಗಿದ್ದು ವಿಚಾರಣೆ ನಡೆಸಿದ ಕೋರ್ಟ್ ಶಿಕ್ಷೆ ನೀಡಿದೆ.
ಸಾಗರ [ಫೆ.7]: ತಾಲೂಕಿನ ಕೆಳದಿ ಗ್ರಾಮದಲ್ಲಿ ತನ್ನ ಅಜ್ಜನನ್ನೆ ಕೊಲೆ ಮಾಡಿದ್ದ ಸಾತ್ವಿಕ್ ಎಂಬಾತನಿಗೆ ಇಲ್ಲಿನ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಸಾತ್ವಿಕ್ ಪೋಲಿ ಹುಡುಗರ ಸಹವಾಸ ಮಾಡುವ ಜೊತೆಗೆ ಕುಡಿತದ ಅಭ್ಯಾಸವನ್ನು ಹೊಂದಿದ್ದನು. ಈ ಬಗ್ಗೆ ಅಜ್ಜ ರಾಮರಾವ್ ಆತನಿಗೆ ಬುದ್ಧಿವಾದ ಹೇಳು ತ್ತಿದ್ದರು. 2018 ನೇ ಸಾಲಿನ ಮೇ 9ರಂದು ಸಾತ್ವಿಕ್ ಎಂದಿನಂತೆ ಕುಡಿದು ಮನೆಗೆ ಬಂದಾಗ ರಾಮರಾವ್ ಆತನಿಗೆ ಬುದ್ಧಿಮಾತು ಹೇಳಿದ್ದಾರೆ.
ಮಹಿಳೆ ಕೊಂದ ಮಂಗಳಮುಖಿಯ ಬಡಿದು ಕೊಂದ ಗ್ರಾಮಸ್ಥರು!.
ಇದರಿಂದ ಕೆರಳಿದ ಸಾತ್ವಿಕ್ ತನ್ನ ಬೈಕಿನಲ್ಲಿದ್ದ ಹರಿತವಾದ ಆಯುಧದಿಂದ ರಾಮರಾವ್ ಅವರ ತಲೆಗೆ ಹೊಡೆದು ಗಾಯಗೊಳಿಸಿದ್ದನು. ಗಂಭೀರವಾಗಿ ಗಾಯಗೊಂಡ ರಾಮ್‌ರಾವ್ ಸಾವನ್ನಪ್ಪಿದ್ದರು. ಈ ಸಂಬಂಧ ರಾಮರಾವ್ ಪತ್ನಿ ಬಂಗಾರಮ್ಮ ಸಾತ್ವಿಕ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು.
ಗ್ರಾಮಾಂತರ ಠಾಣೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿ ಸಾತ್ವಿಕ್‌ನನ್ನು ಬಂಧಿಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಎಂ.ಶೋಭಾ ಆರೋಪ ಸಾಬೀತಾಗಿದೆ ಎಂಬ ತೀರ್ಮಾನಕ್ಕೆ ಬಂದು ಸಾತ್ವಿಕ್‌ಗೆ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಅಣ್ಣಪ್ಪ ನಾಯ್ಕ್ ವಾದಿಸಿದ್ದರು.
ಇದನ್ನೂ ನೋಡಿ | ಇಂದಿನ ಚಿನ್ನ-ಬೆಳ್ಳಿ ದರ, ಪೆಟ್ರೋಲ್-ಡೀಸೆಲ್ ಬೆಲೆ: