ಬೆಂಗ್ಳೂರು ಬಿಟ್ಟು ಹಳ್ಳಿ ಸೇರಿ ನೇಗಿಲು ಹಿಡಿದ ಮಾಜಿ ಶಾಸಕ..!

Published : Jul 05, 2020, 01:30 PM ISTUpdated : Jul 05, 2020, 01:37 PM IST
ಬೆಂಗ್ಳೂರು ಬಿಟ್ಟು ಹಳ್ಳಿ ಸೇರಿ ನೇಗಿಲು ಹಿಡಿದ ಮಾಜಿ ಶಾಸಕ..!

ಸಾರಾಂಶ

ಮಾಜಿ ಶಾಸಕ ಕೊತ್ತೂರು ಮಂಜುನಾಥ್‌ ಅವರು ಕೃಷಿ ಕಡೆಗೆ ಮುಖ ಮಾಡಿದ್ದಾರೆ. ಬೆಂಗಳೂರಿನಲ್ಲಿ ಕೊರೊನಾ ದಿನೇ ದಿನೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ ಅವರು ಸ್ವಗ್ರಾಮ ಸೇರಿಕೊಂಡು ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ.

ಕೋಲಾರ(ಜು.05): ಮಾಜಿ ಶಾಸಕ ಕೊತ್ತೂರು ಮಂಜುನಾಥ್‌ ಅವರು ಕೃಷಿ ಕಡೆಗೆ ಮುಖ ಮಾಡಿದ್ದಾರೆ. ಬೆಂಗಳೂರಿನಲ್ಲಿ ಕೊರೊನಾ ದಿನೇ ದಿನೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ ಅವರು ಸ್ವಗ್ರಾಮ ಸೇರಿಕೊಂಡು ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ.

ಮುಳಬಾಗಿಲು ತಾಲೂಕಿನ ಕೊತ್ತೂರು ಗ್ರಾಮದಲ್ಲಿ ತಮ್ಮ ಜಮೀನಿನಲ್ಲಿ ನೇಗಿಲು ಹಿಡಿದು ಬಿತ್ತನೆ ಮಾಡಿದ ಮಾಜಿ ಶಾಸಕ ಕೊತ್ತೂರು ಮಂಜುನಾಥ್‌ ಅವರು ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ನೆಲಗಡಲೆ ಬಿತ್ತನೆ:

ಮಾಜಿ ಶಾಸಕ ಕೊತ್ತೂರು ಮಂಜುನಾಥ್‌ ಅವರು ಹೊಸ ಗೇಟಪ್‌ನಲ್ಲಿ ಕಾಣಿಸಿಕೊಂಡಿರುವುದು ಅವರ ಅಭಿಮಾನಿಗಳಲ್ಲಿ ಸಂತಸವನ್ನುಂಟು ಮಾಡಿದೆ. ಸ್ವಗ್ರಾಮದ ತಮ್ಮ ಜಮೀನಿನಲ್ಲಿ ನೆಲಗಡಲೆ ಬಿತ್ತನೆ ಮಾಡಲು ನೇಗಿಲು ಹಿಡಿದು ಉಳುಮೆ ಮಾಡಿದ ಕೊತ್ತೂರು ಮಂಜುನಾಥ್‌ ಫೋಟೋ ನೋಡಿ ಜನ ನಿಬ್ಬೆರಗಾಗಿದ್ದಾರೆ.

HIV ಪಾಸಿಟಿವ್ ಮಹಿಳೆಗೆ ಕೊರೊನಾ ಸೋಂಕು..?

ಕರೋನಾದಿಂದಾಗಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಅನೇಕರು ತಮ್ಮ ಹಳ್ಳಿಗಳಿಗೆ ವಾಪಸ್‌ ಆಗಿ ಕೃಷಿಯಲ್ಲಿ ತೊಡಗಿದ್ದಾರೆ,ಇದೀಗ ಮಾಜಿ ಶಾಸಕರ ಸರದಿ, ತಾವೇ ನೇಗಿಲು ಹಿಡಿದು ಹೊಲದಲ್ಲಿ ಬಿತ್ತನೆ ಕಾರ್ಯದಲ್ಲಿ ತೊಡಗಿರುವುದು ಅವರ ಅಭಿಮಾನಿಗಳಲ್ಲಿ ಕೃಷಿ ಆಸಕ್ತಿ ಹೆಚ್ಚಿಸಿದೆ.

PREV
click me!

Recommended Stories

ಕೋಲಾರ: ಸೆಕ್ಯೂರಿಟಿ ಕ್ಯಾಬಿನ್‌ನಲ್ಲಿ ಅಗ್ನಿ ಅವಘಡ; ಚಿಕಿತ್ಸೆ ಫಲಕಾರಿಯಾಗದೆ ತಂದೆ-ಮಗು ದುರ್ಮರಣ!
ಚಿಟ್ಸ್ ಫಂಡ್ ಹೆಸರಲ್ಲಿ ಹತ್ತು ಕೋಟಿ ವಂಚಿಸಿದವ ಕೋರ್ಟ್‌ಗೆ ಬಂದಾಗ ಹಿಡಿದ ಗ್ರಾಹಕರು! ರಸ್ತೆಯಲ್ಲಿ ಮೆರವಣಿಗೆ ಶಿಕ್ಷೆ!