HIV ಪಾಸಿಟಿವ್ ಮಹಿಳೆಗೆ ಕೊರೊನಾ ಸೋಂಕು..?

By Suvarna NewsFirst Published Jul 5, 2020, 1:04 PM IST
Highlights

ಕೋಲಾರದಲ್ಲಿ HIV ಪಾಸಿಟಿವ್ ಮಹಿಳೆಗೆ ಕೊರೊನಾ ಸಾಧ್ಯತೆ ಕಂಡು ಬಂದಿದೆ. ಮಾನಸಿಕ ಅಸ್ವಸ್ಥೆ ರೀತಿಯಲ್ಲಿ ವರ್ತಿಸುತ್ತಿರುವ ಮಹಿಳೆಗೆ ಕೊರೋನಾ ಇರಬಹುದೆಂಬ ಶಂಕೆ ವ್ಯಕ್ತವಾಗಿದೆ.

ಕೋಲಾರ(ಜು.05):  ಕೋಲಾರದಲ್ಲಿ HIV ಪಾಸಿಟಿವ್ ಮಹಿಳೆಗೆ ಕೊರೊನಾ ಸಾಧ್ಯತೆ ಕಂಡು ಬಂದಿದೆ. ಮಾನಸಿಕ ಅಸ್ವಸ್ಥೆ ರೀತಿಯಲ್ಲಿ ವರ್ತಿಸುತ್ತಿರುವ ಮಹಿಳೆಗೆ ಕೊರೋನಾ ಇರಬಹುದೆಂಬ ಶಂಕೆ ವ್ಯಕ್ತವಾಗಿದೆ.

ತನ್ನ ಮನೆಯ ವಿಳಾಸ ಸಹ ತಿಳಯದ ಮಹಿಳೆ ಅನಾಮದೇಯವಾಗಿ ಓಡಾಡುತ್ತಿದ್ದಾರೆ. ಸದ್ಯ ಮಹಿಳೆಯನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ. ಮಹಿಳೆಯ ಸಂಬಂಧಿಕರ ವಿವರ ಪತ್ತೆ ಹಚ್ಚವುದು ಸದ್ಯ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.

ಪಾಸಿಟಿವ್ ಇದ್ರೂ ಕೊರೋನಾ ಆಸ್ಪತ್ರೆಗೆ ಬರಲ್ಲ ಎಂದು ಹಠ ಮಾಡಿದ JDS ಮುಖಂಡ..!

ಕೇಂದ್ರ ಸರ್ಕಾರದ ಗೃಹ ಮಂತ್ರಾಲಯದ ಆದೇಶದಂತೆ ಜಿಲ್ಲೆಯಲ್ಲಿ ಜು. 1ರಿಂದ 31ರ ವರೆಗೆ ಲಾಕ್‌ಡೌನ್‌ ಮುಂದುವರೆದಿದ್ದು, ಜುಲೈನ ಎಲ್ಲ ಭಾನುವಾರ ಮತ್ತು ಪ್ರತಿದಿನ ಸಂಜೆ 8ರಿಂದ ಬೆಳಿಗ್ಗೆ 5 ರವರೆಗೆ ಇಡೀ ಜಿಲ್ಲೆಯಲ್ಲಿ ಕಫä್ರ್ಯ ಜಾರಿಗೊಳಿಸಲಾಗಿದೆ ಎಂದು ಜಿಲ್ಲಾಧಿ​ಕಾರಿ ಸಿ.ಸತ್ಯಭಾಮ ತಿಳಿಸಿದ್ದಾರೆ.

ಕೊರೋನಾ ಸೋಂಕು ದಿನೇ ದಿನೇ ಹೆಚ್ಚಾಗಿ ಹರಡುತ್ತಿರುವುದರಿಂದ ಇದನ್ನು ತಡೆಯುವ ನಿಟ್ಟಿನಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದ್ದು, ಜು. 5ರ ಭಾನುವಾರದಿಂದ 12, 19, 26 ಹಾಗೂ ಆ. 2 ದವರೆಗೂ ಭಾನುವಾರಗಳನ್ನು ಬಂದ್‌ ಮಾಡಲಾಗುವುದು, ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದ ಎಲ್ಲವನ್ನು ಬಂದ್‌ ಮಾಡಲು ಆದೇಶ ಹೊರಡಿಸಲಾಗಿದೆ ಎಂದು ತಿಳಿಸಿದ್ದಾರೆ. ಪ್ರತಿದಿನ ಸಂಜೆ 8 ರಿಂದ ಬೆಳಿಗ್ಗೆ 5 ರವರೆಗೆ ಕಫä್ರ್ಯ ಜಾರಿಯಲ್ಲಿರುತ್ತದೆ ಸಾರ್ವಜನಿಕರು ಸಹಕಾರ ನೀಡುವಂತೆ ಜಿಲ್ಲಾ​ಕಾರಿ ತಿಳಿಸಿದ್ದಾರೆ.

click me!