'ಪರೀಕ್ಷೆ ಹೇಗಾಯ್ತು..? ಫೋನಲ್ಲೇ ಪಾಯಸ ಕಳಿಸಲಾ..'? ವಿದ್ಯಾರ್ಥಿನಿಗೆ ಸಚಿವರ ಕಾಲ್

By Kannadaprabha NewsFirst Published Jul 5, 2020, 12:30 PM IST
Highlights

SSLC ವಿದ್ಯಾರ್ಥಿನಿಗೆ ಕರೆ ಮಾಡಿದ ಸಚಿವರು ಪರೀಕ್ಷೆ ಹೇಗೆ ಬರೆದಿದ್ದೀಯಾ, ಮನಸ್ಸಿನ ಭಾರ ಈಗ ಇಳಿಯಿತಾ, ವಿಶೇಷ ಅಡುಗೆ ಏನಾದರೂ ಮಾಡಿಸಿಕೊಂಡಿದ್ದೀಯಾ ಎಂದು ಆಪ್ತವಾಗಿ ಮಾತನಾಡುವ ಜೊತೆಗೆ ನಮ್ಮ ಮನೆಯಲ್ಲಿ ಪಾಯಸ ಮಾಡಿದ್ದೇವೆ ಫೋನಿನಲ್ಲೇ ಕಳುಹಿಸಲಾ ಎಂದು ನಗೆ ಚಟಾಕಿಯನ್ನೂ ಹಾರಿಸಿದ್ದಾರೆ.

ಚಾಮರಾಜನಗರ(ಜು.05): ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಅಚ್ಚುಕಟ್ಟಾಗಿ ಮುಗಿಸಿದ ಬೆನ್ನಲ್ಲೇ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌. ಸುರೇಶ್‌ ಕುಮಾರ್‌ ಚಾಮರಾಜನಗರದ ವಿದ್ಯಾರ್ಥಿನಿಯೊಬ್ಬಳಿಗೆ ಕರೆ ಮಾಡಿ ಪರೀಕ್ಷೆಯ ಅನುಭವ, ಇಲಾಖೆ ಮಾಡಿದ್ದ ವ್ಯವಸ್ಥೆ ಕುರಿತು ಪ್ರತಿಕ್ರಿಯೆ ಪಡೆದುಕೊಂಡಿದ್ದಾರೆ.

"

ಕೊರೋನಾ ಹೆಚ್ಚಳವಾಗುತ್ತಿರುವ ಹಿನ್ನೆಲೆ ಚಾಮರಾಜನಗರದ ದೀನಬಂಧು ಕನ್ನಡ ಮಾಧ್ಯಮ ಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಗೌರಿ ಅವರ ತಂದೆ ಪತ್ರಕರ್ತ ಬನಶಂಕರ ಆರಾಧ್ಯ ಅವರು ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸುತ್ತಿರುವ ಬಗ್ಗೆ ಫೇಸ್‌ಬುಕ್‌ನಲ್ಲಿ ಆತಂಕ ವ್ಯಕ್ತಪಡಿಸಿ ಪೋಸ್ಟ್‌ ಮಾಡಿದ್ದರು. ಅಂದೇ ಅವರಿಗೆ ಕರೆ ಮಾಡಿ ಪರೀಕ್ಷೆ ನಡೆಸಲು ಕೈಗೊಂಡಿರುವ ಮುಂಜಾಗ್ರತೆ ಬಗ್ಗೆ ತಿಳಿಸಿದ್ದರು.

ಕೊರೋನಾ ತಡೆ​ಗಾಗಿ 15 ದಿನ ಲಾಕ್‌​ಡೌ​ನ್‌ಗೆ ಜೆಡಿ​ಎಸ್‌ ಆಗ್ರ​ಹ

ಇದೀಗ ಪರೀಕ್ಷೆ ಮುಗಿದ ಮುಗಿದ ಮೇಲೆ ಗೌರಿಗೆ ಕರೆ ಮಾಡಿದ ಸಚಿವರು ಪರೀಕ್ಷೆ ಹೇಗೆ ಬರೆದಿದ್ದೀಯಾ, ಮನಸ್ಸಿನ ಭಾರ ಈಗ ಇಳಿಯಿತಾ, ವಿಶೇಷ ಅಡುಗೆ ಏನಾದರೂ ಮಾಡಿಸಿಕೊಂಡಿದ್ದೀಯಾ ಎಂದು ಆಪ್ತವಾಗಿ ಮಾತನಾಡುವ ಜೊತೆಗೆ ನಮ್ಮ ಮನೆಯಲ್ಲಿ ಪಾಯಸ ಮಾಡಿದ್ದೇವೆ ಫೋನಿನಲ್ಲೇ ಕಳುಹಿಸಲಾ ಎಂದು ನಗೆ ಚಟಾಕಿಯನ್ನೂ ಹಾರಿಸಿದ್ದಾರೆ.

ಆಗಸ್ಟ್‌ ಮೊದಲ ವಾರದಲ್ಲಿ ಫಲಿತಾಂಶ ಬರಲಿದ್ದು, ನೀನು ನನಗೆ ಕರೆ ಮಾಡಬೇಕು. ಎರಡು, ಮೂರು ದಿನ ಏನನ್ನೂ ಯೋಚಿಸದೇ ಆರಾಮವಾಗಿ ನಿದ್ರೆ ಮಾಡು. ಪರೀಕ್ಷೆ ವೇಳೆಯಲ್ಲಿ ಕಲಿತ ಸಾಮಾಜಿಕ ಅಂತರ, ಕೈ ಸ್ವಚ್ಛವಾಟ್ಟುಕೊಳ್ಳುವುದನ್ನು ಹಾಗೇ ಮುಂದುವರೆಸಬೇಕು ಎಂದು ಸಲಹೆ ನೀಡಿದ್ದಾರೆ.

ಕೊರೋನಾ ಭಯ: ಪ್ರವಾ​ಸಿ​ಗರ ವಾಹನ ತಡೆದು ವಾಪಸ್‌ ಕಳು​ಹಿ​ಸಿದ ಗ್ರಾಮ​ಸ್ಥ​ರು

ಬಳಿಕ, ಗೌರಿ ತಂದೆ ಪತ್ರಕರ್ತ ಬನಶಂಕರ ಆರಾಧ್ಯ ಅವರೊಂದಿಗೆ ಮಾತನಾಡಿ, ಮೊದಲ ದಿನವೇ ಪಾಲಕರ ಆತಂಕ ದೂರವಾಯಿತು, ಶಕ್ತಿಮೀರಿ ಅಚ್ಚುಕಟ್ಟಾಗಿ ಪರೀಕ್ಷೆ ಮುಗಿಸಿದ್ದೇವೆ, ಬೇರೆ ರಾಜ್ಯಗಳು ಕೂಡ ನಮ್ಮನ್ಮು ಫಾಲೋ ಮಾಡಬಹುದಾಗಿದೆ, ನಿಮ್ಮ ಮಗಳನ್ನು ನಮ್ಮ ಮಗಳಿನಂತೆ ನೋಡಿಕೊಂಡಿದ್ದೇವೆ ಎಂದು ಪಾಲಕರಿಗೂ ವಿಶ್ವಾಸ ತುಂಬಿದ್ದಾರೆ.

ಗೌರಿ ಪರೀಕ್ಷೆ ಬರೆದ ಬಾಲಕರ ಪಟ್ಟಣ ಪರೀಕ್ಷಾ ಕೇಂದ್ರದ ವ್ಯವಸ್ಥೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳುತ್ತಿದ್ದ ಬಗೆ, ಅಚ್ಚುಕಟ್ಟುತನಕ್ಕೆ ಪಾಲಕರೂ ಕೂಡಾ ಶಿಕ್ಷಣ ಸಚಿವರಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

click me!