ಮಾಜಿ ಸಚಿವ ವಿನಯ ಕುಲಕರ್ಣಿ ಪೋಟೋ ಹಾಕದಿದ್ದಕ್ಕೆ ಪ್ರತಿಭಟನೆ ಇಳಿದ ಪಂಚಮಸಾಲಿ ಮುಖಂಡರು. ಬಸವೇಶ್ವರರ ಕಂಚಿನ ಮೂರ್ತಿ ಅನಾವರಣ ಕಾರ್ಯಕ್ರಮ ಬ್ಯಾನರ್‌ನಲ್ಲಿಲ್ಲ ವಿನಯ ಕುಲಕರ್ಣಿ ಪೋಟೋ
ವರದಿ: ಪರಮೇಶ್ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್
ಧಾರವಾಡ (ಮೇ.11) : ಇದೇ ಭಾನುವಾರ ಮೇ 15 ರಂದು ಧಾರವಾಡದ ಪ್ರತಿಷ್ಟಿತ ದೇವಸ್ಥಾನವಾದ ಉಳವಿ ಚನ್ನಬಸವೇಶ್ವರ ದೇವಸ್ಥಾನದಲ್ಲಿ ಚನ್ನಬಸವೇಶ್ವರರ ಕಂಚಿನ ಪುತ್ತಳಿ ಅನಾವರಣ ಸಮಾರಂಭ ನಡೆಯಲಿದೆ. ಕಾರ್ಯಕ್ರಮದ ಬ್ಯಾನರ್ ನಲ್ಲಿ ಪಂಚಮಸಾಲಿಯ ನಾಯಕರಾದ ಮಾಜಿ ಸಚಿವ ವಿನಯ ಕುಲಕರ್ಣಿ ಪೋಟೋ ಕೈ ಬಿಟ್ಟಿದಕ್ಕೆ ಹಿಂದೂ ಸಮುದಾಯದವರು ಪ್ರತಿಭಟನೆ ನಡೆಸಿದರು.
ಉಳವಿ ಚನ್ನಬಸವೇಶ್ವರ ದೇವಸ್ಥಾನದ ಎದುರು 30 ಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಮತ್ತು ಹಿಂದೂ ಸಮುದಾಯದ ನಾಕರುಗಳು ದೇವಸ್ಥಾನದ ಆಡಳಿಯ ಮಂಡಳಿ ವಿರುದ್ದ ಪ್ರತಿಬಟೆನೆ ಕೂಗಿ ಆಕ್ರೋಶ ಹೊರಹಾಕಿದರು.
ಇನ್ನು ಕಂಚಿನ ಮೂರ್ತಿಯ ಅನಾವಣರಣದ ಬ್ಯಾನರ ಗಳಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಪೋಟೋವನ್ನ ಕೈ ಬಿಡಲಾಗಿದೆ. ಅವರು ಧಾರವಾಡಕ್ಕೆ ಬರಲು ಆಗದೆ ಇರೋ ಕಾರಣಕ್ಕೆ ಅವರ ಪೋಟೋವನ್ನ ಬ್ಯಾನರ್ ನಲ್ಲಿ ಕೈ ಬಿಟ್ಟಿದ್ದಾರೆ. ಇನ್ನು ಪಂಚಮಸಾಲಿ ಸಮುದಾಯದ ಮುಖಂಡರುಗಳು ಒಂದು ಘಂಟೆಯವರೆಗೆ ದೇವಸ್ಥಾನದ ಆಡಳಿತ ಮಂಡಳಿ ವಿರುದ್ದ ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕಿದ್ದಾರೆ.
Tumakuru ಊರ ಜಾತ್ರೆಯಲ್ಲಿ ಎತ್ತುಗಳನ್ನು ಬಲಿಕೊಟ್ಟ ಗ್ರಾಮಸ್ಥರು!
ಬ್ಯಾನರ್ ನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಬಸವರಾಜ ಹೊರಟ್ಟಿ, ಚಂದ್ರಕಾಂತ ಬೆಲ್ಲದ, ಅರವಿಂದ ಬೆಲ್ಲದ, ಜಗದೀಶ ಶೆಟ್ಟರ್, ಶಂಕರ ಪಾಟೀಲ ಮುನೇನಕೊಪ್ಪ,ಅಮೃತ ದೇಸಾಯಿ, ವಿರಣ್ಣ ಮತ್ತಿಕಟ್ಟಿ ಪೋಟೋ ಹಾಕಿದ್ದಾರೆ.
ಈ ಹಿನ್ನೆಲೆಯಲ್ಲಿ ಉದ್ದೇಶ ಪೂರ್ವಕವಾಗಿ ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಪೋಟೋವನ್ನ ಕೈ ಬಿಡಲಾಗಿದೆ ಎಂದು ಪಂಚಮಸಾಲಿ ಮುಖಂಡರು ಪ್ರತಿಬಟನೆ ನಡೆಸಿ ಆಕ್ರೋಶ ಹೊರ ಹಾಕಿದರು. ಬಳಿಕ ಮಾಧ್ಯಮಗಳಿಗೆ ಮಾತನಾಡಿದ ಪಾಲಿಕೆ ಸದಸ್ಯ ರಾಜಶೇಖರ್ ಕಮತಿ , ದೇವಸ್ಥಾನ ಕಾರ್ಯಕ್ರಮದಲ್ಲೂ ನಮ್ಮ ನಾಯಕರ ಪೋಟೋ ಹಾಕದೆ ಆಡಳಿತ ಮಂಡಳಿ ಅವರು ಅವರು ಬಿಜೆಪಿ ಅವರ ಮಾತು ಕೇಳಿಕೊಂಡು ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಪೋಟೋವನ್ನ ಹಾಕಿಲ್ಲ ಎಂದು ಆಡಳಿತ ಮಂಡಳಿ ವಿರುದ್ದ ಆಕ್ರೋಶ ಹೊರ ಹಾಕಿದ್ದಾರೆ.
Mandya ಊರ ಜಾತ್ರೆಯಲ್ಲಿ ಬಲಿ ತಪ್ಪಿಸಲು ಮರವೇರಿ ಕುಳಿತ ಹರಕೆ ಹುಂಜ!
ಇನ್ನು ಸ್ಥಳದಲ್ಲಿ ಬಿಜೆಪಿ ಮುಖಂಡ ಕೆ ಎಸ್ ಪಾಟೀಲ, ಮತ್ತು ಕೈ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ಕೂಡಾ ನಡೆಯಿತು. ಬ್ಯಾನರ್‌ನಲ್ಲಿ ವಿನಯ ಕುಲಕರ್ಣಿ ಪೋಟೋ ವನ್ನ ಹಾಕಬೇಕು ಎಂದು ಕೈ ಕಾರ್ಯಕರ್ತರು ಬಿಜೆಪಿ ಮುಖಂಡರ ನಡುವೆ ಮಾತಿನ ಚಕಮಕಿ ನಡೆಯಿತು. ಸಮಾಜಕ್ಕೆ ಬೇಕಾದ ವ್ಯಕ್ತಿಯನ್ನ ಕಡೆಗಣನೆ ಮಾಡೋದು ಸರಿ ಅಲ್ಲ ದು ಪ್ರತಿಬಟನಾಕಾರರು ಆಕ್ರೋಶ ಹೊರ ಹಾಕಿದರು.