ಅದು ನಗರವೊಂದಕ್ಕೆ ಕುಡಿಯುವ ನೀರು ಪೂರೈಕೆಯಾಗುತ್ತಿದ್ದ ಪೈಪ್‌ಲೈನ್. ಆದರೆ ಅದು ಏಕಾಏಕಿ ಒಡೆದ ಪರಿಣಾಮವಾಗಿ ಅಪಾರ ಪ್ರಮಾಣದ ನೀರು ಪೋಲಾಗಿದೆ. ಅಷ್ಟಕ್ಕೂ ಎಲ್ಲಿ ನೀರು ಪಾಲಾಗಿದ್ದು ಅಂತೀರಾ? ಹಾಗಾದ್ರೆ ಈ ರಿಪೋರ್ಟ್ ನೋಡಿ.
ವರದಿ: ದೊಡ್ಡೇಶ್ ಯಲಿಗಾರ್, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಪ್ಪಳ
ಕೊಪ್ಪಳ (ಮೇ.11): ಅದು ನಗರವೊಂದಕ್ಕೆ ಕುಡಿಯುವ ನೀರು ಪೂರೈಕೆಯಾಗುತ್ತಿದ್ದ ಪೈಪ್‌ಲೈನ್. ಆದರೆ ಅದು ಏಕಾಏಕಿ ಒಡೆದ ಪರಿಣಾಮವಾಗಿ ಅಪಾರ ಪ್ರಮಾಣದ ನೀರು ಪೋಲಾಗಿದೆ. ಅಷ್ಟಕ್ಕೂ ಎಲ್ಲಿ ನೀರು ಪಾಲಾಗಿದ್ದು ಅಂತೀರಾ? ಹಾಗಾದ್ರೆ ಈ ರಿಪೋರ್ಟ್ ನೋಡಿ.
ಎಲ್ಲಿ ನೀರು ಪೋಲಾಗಿದ್ದು: ಕೊಪ್ಪಳ ಜಿಲ್ಲೆಯಲ್ಲಿ ಹನಿ ಹನಿ ನೀರಿಗೂ ಸಹ ಆಹಾಕರ ಇದೆ. ಪ್ರತಿಯೊಂದು ಹಳ್ಳಿಗೆ ಹೋದರೂ ಸಹ ನೀರಿನ ಸಮಸ್ಯೆ ಇದ್ದೆ ಇದೆ. ಈ ರೀತಿಯಾಗಿ ಕೊಪ್ಪಳ ನಗರದಲ್ಲಿರುವ ಅನೇಕ ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆ ಬಹಳಷ್ಟು ಇದೆ. ಈ ಹಿನ್ನಲೆಯಲ್ಲಿ ಕೊಪ್ಪಳ ನಗರಕ್ಕೆ ತುಂಗಭದ್ರಾ ನದಿಯಿಂದ ನೀರು ಪೂರೈಕೆ ಮಾಡುವ ಪೈಪಲೈನ್ ಕೊಪ್ಪಳ ತಾಲೂಕಿನ ಕಾಸನಕಂಡಿ ಬಳಿ ಒಡೆದು ಅಪಾರ ಪ್ರಮಾಣದ ನೀರು ಪೋಲಾಗಿದೆ.
Koppal: ಕಿತ್ತು ತಿನ್ನುವ ಬಡತನ: ಇಳಿವಯಸ್ಸಲ್ಲೂ ದುಡಿಯುತ್ತಿರುವ 70ರ ವೃದ್ಧೆ..!
ನೀರು ಪೋಲಾಗಿರುವುದರಿಂದ ಏನೆಲ್ಲಾ ತೊಂದರೆ: ಇನ್ನು ಕೊಪ್ಪಳಕ್ಕೆ ನಗರಕ್ಕೆ ನೀರು ಪೂರೈಸುವ ಪೈಪ್ ಒಡೆದಿರುವ ಹಿನ್ನಲೆಯಲ್ಲಿ ಆಗಿರುವ ತೊಂದರೆಗಳು ಒಂದಲ್ಲ, ಎರಡಲ್ಲ.ಮೊದಲನೆಯದಾಗಿ ಇದೀಗ ಪೈಪ್ ಒಡೆದಿರುವುದಿಂದ ಸಹಜವಾಗಿಯೇ ಕೊಪ್ಪಳ ನಗರಕ್ಕೆ ನೀರು ಸರಬರಾಜು ಆಗುವುದರಲ್ಲಿ ತೊಂದರೆ ಆಗಲಿದೆ. ಜೊತೆಗೆ ಪೈಪ್ ಒಡೆದಿರುವುದಿಂದ ಅಪಾರ ಪ್ರಮಾಣದ ನೀರು ಪೋಲಾಗುತ್ತಿದ್ದು, ಈ ನೀರು ಜಮೀನಿಗೆ ನುಗ್ಗಿ, ಹತ್ತಾರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ವಿವಿಧ ಬೆಳೆಗಳು ಸಹ ಹಾಳಾಗಿವೆ.
ನೀರು ಸ್ಥಗಿತ ಮಾಡಲು ಅಧಿಕಾರಿಗಳ ನಿರ್ಲಕ್ಷ್ಯ: ಇನ್ನು ಕೊಪ್ಪಳ ನಗರಕ್ಕೆ ಕುಡಿಯುವ ನೀರು ಪೂರೈಕೆಯಾಗುವ ಪೈಪ್ ಮಂಗಳವಾರ ಮಧ್ಯಾಹ್ನವೇ ಒಡೆದಿದೆ.ಪೈಪ್ ಒಡೆದು 24 ಗಂಟೆ ಕಳೆದರೂ ಸಹ ಅಧಿಕಾರಿಗಳು ಮಾತ್ರ ನೀರು ಸ್ಥಗಿತ ಮಾಡುವ ಗೋಜಿಗೆ ಹೋಗಿಲ್ಲ. ಇದರಿಂದಾಗಿ ನಿರಂತರವಾಗಿ ನೀರು ಪೋಲಾಗುತ್ತಿದ್ದರೂ ಸಹ ಅಧಿಕಾರಿಗಳ ಕಣ್ಮುಚ್ಚಿ ಕುಳಿತಿರುವುದು ನೋಡಿದರೆ ಅವರ ನಿರ್ಲಕ್ಷ್ಯ ಎದ್ದು ತೋರುತ್ತದೆ.
ಬೈಕ್‌ನಲ್ಲೇ ಭಾರತ ಸುತ್ತುತ್ತಿರುವ ಭಾರತಿ: ಇಂಡಿಯಾ ಟೂರ್ ಹಿಂದಿದೆ ರೋಚಕ ಕಥೆ..!
ಇನ್ನು ಈಗ ತಾನೇ ಮುಂಗಾರು ಆರಂಭವಾಗಿದ್ದು, ಇನ್ನೂ ಸಹ ಕೊಪ್ಪಳ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಇದರ ಮಧ್ಯೆ ಅಪಾರ ಪ್ರಮಾಣದ ಕುಡಿಯುವ ನೀರು ಪೋಲಾಗುತ್ತಿದ್ದರೂ ಸಹ ನೀರು ಪೋಲಾಗುತ್ತಿರುವುದನ್ನು ತಡೆಗಟ್ಟುವ ಕೆಲಸಕ್ಕೆ ಅಧಿಕಾರಿಗಳು ಮುಂದಾಗಿಲ್ಲ. ಇನ್ನಾದರೂ ಅಧಿಕಾರಿಗಳು ಎಚ್ಚೇತ್ತು ಶೀಘ್ರವೇ ನೀರು ಪೋಲಾಗುತ್ತಿರುವುದನ್ನು ತಡೆಗಟ್ಟಬೇಕಿದೆ.