ಅಂಬಿರಾವ್ ಮುಂದೆ ನಾನು ಶೂನ್ಯವೆಂದು ಸತೀಶ್ ಜಾರಕಿಹೊಳಿ ಬೇಸರ

By Web DeskFirst Published Oct 3, 2019, 1:45 PM IST
Highlights

ರಮೇಶ್ ಜಾರಕಿಹೊಳಿ ಅಳಿಯ ಅಂಬಿರಾಯ ಎದುರು ನಾನು ಶೂನ್ಯ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಕಾರಣ ಏನು?

ಬೆಳಗಾವಿ [ಅ.03]: ಬೆಳಗಾವಿ ಅತ್ಯಂತ ದೊಡ್ಡ ಜಿಲ್ಲೆಯಾಗಿದ್ದು, ಮೂರು ಜಿಲ್ಲೆಯಾಗುವಷ್ಟು ವಿಸ್ತಾರವಾಗಿದೆ ಎಂದು ನಮ್ಮ ಒತ್ತಾಯವಿದೆ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

ಬೆಳಗಾವಿಯಲ್ಲಿ ಮಾತನಾಡಿದ ಅವರು ಇದೇ ವೇಳೆ ರಮೇಶ್ ಜಾರಕಿಹೊಳಿ ಅಳಿಯ ಅಂಬಿರಾವ್ ಪಾಟೀಲ್ ವಿರುದ್ಧವೂ ವಾಗ್ದಾಳಿ ನಡೆಸಿದರು.  ಅವರ ಪ್ರಾಬಲ್ಯ ಬಹಳ ಇದ್ದು, ಜನರಿಗೆ ಸುಖಾ ಸುಮ್ಮನೆ ತೊಂದರೆ ಕೊಡುತ್ತಿದ್ದಾರೆ. ಇದನ್ನು ನೋಡಿ ಸುಮ್ಮನೇ ಕುಳಿತುಕೊಳ್ಳಲು ಸಾಧ್ಯವಿಲ್ಲ ಎಂದು ಸತೀಶ್ ಜಾರಕಿಹೊಳಿ ಹೇಳಿದರು.

ಗೋಕಾಕ್ ನಲ್ಲಿ ಕತ್ತೆಗೆ ಲತ್ತೆ ಪೆಟ್ಟು ಎಂದು ಆಗಾಗ ಎಚ್ಚರಿಸುತ್ತಿರಬೇಕು. ಇಲ್ಲದಿದ್ದರೆ ಅಂಬಿರಾವ್ ಬೆಂಬಲಿಗರು ಜನರನ್ನು ಹೆದರಿಸುವುದು  ಬೆದರಿಸುವುದು ಮಾಡುತ್ತಾರೆ. ಇನ್ನು ಮುಂದೆ ನಾನು ಜನರ ಪರವಾಗಿ ನಿಂತು ಬಿಸಿ ಮುಟ್ಟಿಸುವ ಕೆಲಸ ಮಾಡುತ್ತೇನೆ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಗೋಕಾಕ್ ತಾಲೂಕಿನಲ್ಲಿ ಭಯದ ವಾತಾವರಣವಿದೆ. ಗೋಕಾಕ ನಲ್ಲಿ ನಾನೂ ಶೂನ್ಯವಾಗಿದ್ದೇನೆ, ಅಂಬಿರಾವ್ ಪಾಟೀಲ್ ದರ್ಬಾರ್ ಮುಂದೆ ನಾನೂ ಶೂನ್ಯವಾಗಿದ್ದೇನೆ. ಇಲ್ಲಿನ ತಹಸೀಲ್ದಾರ್ ಕೂಡಾ ಒಂದು ಸರ್ಟಿಫಿಕೇಟ್ ಕೊಡುವುದಿಲ್ಲ ಅಷ್ಟೊಂದು ಪ್ರಬಾವವನ್ನ ಅಂಬಿರಾಬ್ ಗೋಕಾಕ್ ಆಡಳಿತವನ್ನು ತನ್ನ ಹಿಡಿತದಲ್ಲಿ ಇಟ್ಟುಕ್ಕೊಂಡಿದ್ದಾನೆ ಎಂದರು. 

 ಇನ್ನು ರಮೇಶ್ ಜಾರಕಿಹೊಳಿ ನಾನೂ ಒಂದೇ ಪಕ್ಷದಲ್ಲೆ ಇದ್ದೇವೆ.  ಆದರೆ ಅವರ ಪ್ರಭಾವ ಮಾಥ್ರ ಶೂನ್ಯವಾಗಿದೆ ಎಂದು ಹೇಳಿದರು.

click me!