ತಾಲೂಕಿನ ಹೊನ್ನವಳ್ಳಿ ಹೋಬಳಿಯ ಮಣಕೀಕೆರೆ, ಹೊಸಊಳ್ಳಿ, ಕಲ್ಕೆರೆ, ಮೀಸೆತಿಮ್ಮನಹಳ್ಳಿ ಭಾಗದ ಜನರ ನಿದ್ದೆಗೆಡಿಸಿದ್ದ ಚಿರತೆ ಕಳೆದ ರಾತ್ರಿ ಬೋನಿನಲ್ಲಿ ಸೆರೆ| ಕಳೆದ 15 ದಿನಗಳಿಂದ ಈ ಭಾಗದಲ್ಲಿ ಚಿರತೆ ಬೀಡು ಬೀಡುಬಿಟ್ಟತಿತ್ತು| ಇದರಿಂದ ಜನರು ಭಯಬೀತರಾಗಿದ್ದರು| ರೈತರು ಬೆಳಗ್ಗೆ ತೋಟಗಳಿಗೆ ಹೋಗುವುದು ಸಹ ಕಷ್ಟಕರವಾಗಿತ್ತು| ಕಲ್ಕೆರೆಯಲ್ಲಿ ಕಳೆದ ವಾರ ಒಂದು ಕರುವನ್ನು ತಿಂದಿದೆ ಹಾಗೂ ಮೀಸೆತಿಮ್ಮನಹಳ್ಳಿಯಲ್ಲಿ 2 ದಿನಗಳಲ್ಲಿ 3 ಕುರಿಗಳನ್ನು ತಿಂದಿದ್ದು, ಜನರು ಇನ್ನಷ್ಟುಭಯಭಿತರಾಗಿದ್ದರು|
ತಿಪಟೂರು(ಅ.3): ತಾಲೂಕಿನ ಹೊನ್ನವಳ್ಳಿ ಹೋಬಳಿಯ ಮಣಕೀಕೆರೆ, ಹೊಸಊಳ್ಳಿ, ಕಲ್ಕೆರೆ, ಮೀಸೆತಿಮ್ಮನಹಳ್ಳಿ ಭಾಗದ ಜನರ ನಿದ್ದೆಗೆಡಿಸಿದ್ದ ಚಿರತೆ ಕಳೆದ ರಾತ್ರಿ ಬೋನಿನಲ್ಲಿ ಕಲ್ಕೆರೆ ಸಮೀಪದ ಚನ್ನನಕಟ್ಟೆಯಲ್ಲಿ ಸೆರೆಯಾಗಿದೆ.
ಕಳೆದ 15 ದಿನಗಳಿಂದ ಈ ಭಾಗದಲ್ಲಿ ಚಿರತೆ ಬೀಡು ಬಿಟ್ಟಿದ್ದು, ಜನರು ಭಯಬೀತರಾಗಿದ್ದರು. ರೈತರು ಬೆಳಗ್ಗೆ ತೋಟಗಳಿಗೆ ಹೋಗುವುದು ಸಹ ಕಷ್ಟಕರವಾಗಿತ್ತು. ಕಲ್ಕೆರೆಯಲ್ಲಿ ಕಳೆದ ವಾರ ಒಂದು ಕರುವನ್ನು ತಿಂದಿದೆ ಹಾಗೂ ಮೀಸೆತಿಮ್ಮನಹಳ್ಳಿಯಲ್ಲಿ 2 ದಿನಗಳಲ್ಲಿ 3 ಕುರಿಗಳನ್ನು ತಿಂದಿದ್ದು, ಜನರು ಇನ್ನಷ್ಟುಭಯಭಿತರಾಗಿದ್ದರು.ಎಚ್ಚೆತ್ತುಕೊಂಡ ಅಧಿಕಾರಿಗಳು ಚನ್ನನಕಟ್ಟೆಯಲ್ಲಿ ಬೋನನ್ನು ಇಟ್ಟಿದ್ದು ಚಿರತೆ ಬೋನಿಗೆ ಬಿದ್ದಿದ್ದು ಈಗ ಜನರು ನಿರಾಳರಾಗಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಚಿರತೆಯು ಬೋನಿನಲ್ಲಿ ಸಿಕ್ಕಿದೆ ಎಂಬ ವಿಷಯ ತಿಳಿಯುತ್ತಿದ್ದಂತೆ ಸುತ್ತಮುತ್ತಲಿನ ಗ್ರಾಮಗಳ ಜನಸಾಗರವೇ ನೆರೆದಿತ್ತು. ಬಹುದೊಡ್ಡದಿದ್ದ ಚಿರತೆಯನ್ನು ಮೊಬೈಲ್‌ಗಳಲ್ಲಿ ಸೆರೆ ಹಿಡಿಯುವವರೆ ಹೆಚ್ಚಾಗಿದ್ದರು. ಚಿರತೆಯು 8-10 ವರ್ಷದ್ದಾಗಿದ್ದು ಚಿರತೆಗೆ ಚಿಕಿತ್ಸೆ ಕೊಡಿಸಿ ಸುರಕ್ಷಿತವಾಗಿ ಬುಕ್ಕಾಪಟ್ಟಣ, ಸಕಲೇಶಪುರ ಅಥವಾ ಬನ್ನೇರುಘಟ್ಟ ಕಾಡಿಗೆ ಬಿಡಲಾಗುತ್ತದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.