ಅಪರಾಧ ಪ್ರಕರಣಗಳ ತನಿಖೆಯಲ್ಲಿ ವಿಧಿ ವಿಜ್ಞಾನ ಪ್ರಕ್ರಿಯೆ ಮುಖ್ಯ. ಬೆರಳಚ್ಚು ಸೇರಿದಂತೆ ವಿಧಿ ವಿಜ್ಞಾನದ ತಜ್ಞರು ಬಹು ಬೇಡಿಕೆ ಹೊಂದಿದ್ದು, ರಾಜ್ಯದಲ್ಲಿ ನೂತನವಾಗಿ ಆರಂಭವಾಗಿರುವ ರಾಷ್ಟ್ರೀಯ ವಿಧಿವಿಜ್ಞಾನ ವಿವಿ ಬೆಳವಣಿಗೆಗೆ ಕೇಂದ್ರ ಸರ್ಕಾರ ಅಗತ್ಯ ಸಹಾಯ ಮತ್ತು ಪ್ರೋತ್ಸಾಹ ನೀಡಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
ಧಾರವಾಡ (ಡಿ.03): ಅಪರಾಧ ಪ್ರಕರಣಗಳ ತನಿಖೆಯಲ್ಲಿ ವಿಧಿ ವಿಜ್ಞಾನ ಪ್ರಕ್ರಿಯೆ ಮುಖ್ಯ. ಬೆರಳಚ್ಚು ಸೇರಿದಂತೆ ವಿಧಿ ವಿಜ್ಞಾನದ ತಜ್ಞರು ಬಹು ಬೇಡಿಕೆ ಹೊಂದಿದ್ದು, ರಾಜ್ಯದಲ್ಲಿ ನೂತನವಾಗಿ ಆರಂಭವಾಗಿರುವ ರಾಷ್ಟ್ರೀಯ ವಿಧಿವಿಜ್ಞಾನ ವಿವಿ ಬೆಳವಣಿಗೆಗೆ ಕೇಂದ್ರ ಸರ್ಕಾರ ಅಗತ್ಯ ಸಹಾಯ ಮತ್ತು ಪ್ರೋತ್ಸಾಹ ನೀಡಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
ಇಲ್ಲಿನ ವಾಲ್ಮೀ ಕಟ್ಟಡದಲ್ಲಿರುವ ರಾಷ್ಟ್ರೀಯ ವಿಧಿ ವಿಜ್ಞಾನ ವಿಶ್ವವಿದ್ಯಾಲಯ ಹಾಗೂ ಕರ್ನಾಟಕ ಡಿ.ಎನ್.ಎ. ಸಂಶೋಧನಾ ಸಂಸ್ಥೆ ಜಂಟಿಯಾಗಿ ಆಯೋಜಿಸಿದ್ದ ಡಿ.ಎನ್.ಎ. ಪೊರೆನ್ಸಿಕ್‌ನಲ್ಲಿ ಇತ್ತೀಚಿನ ಪ್ರವೃತ್ತಿಗಳ ಕುರಿತ ಎರಡು ದಿನಗಳ ಅಂತಾರಾಷ್ಟ್ರೀಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಹೆಚ್ಚುತ್ತಿರುವ ಅಪರಾಧ ಪ್ರಕರಣಗಳನ್ನು ನಿಯಂತ್ರಿಸುವಲ್ಲಿ ಆರೋಪಿಗಳ ತನಿಖೆಯಲ್ಲಿ ಹೊಸ ತಂತ್ರಜ್ಞಾನಗಳ ಬಳಕೆ ಅಗತ್ಯವಿದೆ. ವಿಶ್ವವಿದ್ಯಾಲಯ ಮಟ್ಟದಲ್ಲಿ ಉನ್ನತ ವ್ಯಾಸಂಗ ಮಾಡುವ ಪದವೀಧರರು ಸಮರ್ಥವಾಗಿ ಈ ಕಾರ್ಯವನ್ನು ನಿರ್ವಹಿಸುತ್ತಾರೆ.
ಟಿಪ್ಪು ಯಾವುದೇ ಧರ್ಮ ವಿರೋಧಿಯಲ್ಲ: ಎಚ್.ವಿಶ್ವನಾಥ್
ಕೇಂದ್ರ ಹಾಗೂ ರಾಜ್ಯ ಸರ್ಕಾರ ಗೃಹ ಇಲಾಖೆಯ ಮೂಲಕ ವಿಧಿ ವಿಜ್ಞಾನ ಪದವೀಧರರಿಗೆ ಆದ್ಯತೆ ನೀಡಲಾಗುತ್ತಿದೆ ಎಂದರು. ಧಾರವಾಡದಲ್ಲಿ ಇರುವ ರಾಷ್ಟ್ರೀಯ ವಿಧಿ ವಿಜ್ಞಾನ ವಿಶ್ವವಿದ್ಯಾಲಯ ಮತ್ತು ಡಿಎನ್ಎ ಕೇಂದ್ರಗಳು ಉತ್ತಮ ಕಾರ್ಯ ಮಾಡುತ್ತಿದ್ದು, ಭವಿಷ್ಯತಿನ್ನಲ್ಲಿ ರಾಷ್ಟ್ರದ ಬೇಡಿಕೆ ಪೂರ್ಣಗೊಳಿಸುತ್ತವೆ ಎಂದರು. ಎನ್ಎಫ್ಎಸ್‌ಯು ಕ್ಯಾಂಪಸ್‌ನ ನಿರ್ದೇಶಕ ಡಾ. ಮಂಜುನಾಥ ಘಾಟೆ ಸ್ವಾಗತಿಸಿದರು. ಎನ್ಎಫ್ಎಸ್‌ಯು ಸುದ್ದಿಪತ್ರದ ಮೊದಲ ಆವೃತ್ತಿಯನ್ನು ಸಚಿವ ಪ್ರಹ್ಲಾದ ಜೋಶಿ ಇದೇ ವೇಳೆ ಬಿಡುಗಡೆ ಮಾಡಿದರು.
ಅಂತಾರಾಷ್ಟ್ರೀಯ ಸಮೇಳನ: ಈ ಸಮ್ಮೇಳನದಲ್ಲಿ ವಿವಿಧ ಶಿಕ್ಷಣ ಸಂಸ್ಥೆಗಳು, ವೈದ್ಯಕೀಯ ಮತ್ತು ಸಂಶೋಧನಾ ಸಂಸ್ಥೆಗಳು, ರಾಜ್ಯ ಮತ್ತು ಪ್ರಾದೇಶಿಕ ವಿಧಿ ವಿಜ್ಞಾನ ಪ್ರಯೋಗಾಲಯಗಳಿಂದ ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಮತ್ತು ಆಹ್ವಾನಿತ ಅತಿಥಿಗಳು ಸೇರಿದಂತೆ 250 ಕ್ಕೂ ಹೆಚ್ಚು ಜನ ಭಾಗವಹಿಸಿದ್ದರು.
ಬಡವರ ಏಳ್ಗೆಗೆ ಟೊಂಕಕಟ್ಟಿ ನಿಂತ ಪ್ರಧಾನಿ ಮೋದಿ: ಸಂಸದ ರಮೇಶ ಜಿಗಜಿಣಗಿ
ನ್ಯಾಯಶಾಸ್ತ್ರ ಮತ್ತು ವೈದ್ಯಕೀಯ ಕಾನೂನು ಪ್ರಕರಣಗಳಲ್ಲಿ ಡಿ.ಎನ್.ಎ. ವಿಶ್ಲೇಷಣೆ ಬಹುಮುಖಿ ಅನ್ವಯಗಳೂ, ವೈಲ್ಡ್ ಲೈಪ್ ಡಿಎನ್‌ಎ ಪೊರೆನ್ಸಿಕ್ಸ್, ಪೊರೆನ್ಸಿಕ್ ಜೆನಟಿಕ್ಸನಲ್ಲಿ ಜೆನೆಟಿಕ್ ಮಾರ್ಕರ್‌ಗಳ ಅಪ್ಲಿಕೇಶನ್‌ಗಳು, ಶ್ರೀಲಂಕಾದ ಸನ್ನಿವೇಶದಿಂದ ಒಳನೋಟ, ನೇಪಾಳದಲ್ಲಿ ಡಿ.ಎನ್.ಎ. ಪೊರೆನ್ಸಿಕ್ಸ್‌ನಲ್ಲಿನ ಇತ್ತೀಚಿನ ಪ್ರವೃತ್ತಿ, ಡಿ.ಎನ್.ಎ. ಪೊರೆನ್ಸಿಕ್ಸ್‌ನಲ್ಲಿ ನೆಕ್ಟ್ ಜನರೇಶನ್ ಸಿಕ್ವೆನ್ಸಿಂಗ್ ಅಪ್ಲಿಕೇಶನ್ ಇತ್ಯಾದಿ ವಿಷಯಗಳ ಕುರಿತು ಭಾರತ, ನೇಪಾಳ, ಶ್ರೀಲಂಕಾ ಮತ್ತು ಅಮೆರಿಕಾದ ಪರಿಣಿತ ವಿಜ್ಞಾನಿಗಳು ವಿಶೇಷ ಉಪನ್ಯಾಸಗಳನ್ನು ನೀಡಿದರು. ಯುವ ವಿಜ್ಞಾನಿಗಳಲ್ಲಿ ವೈಜ್ಞಾನಿಕ ಜ್ಞಾನ ವಿನಿಮಯವನ್ನು ಉತ್ತೇಜಿಸಲು ಮೌಖಿಕ ಮತ್ತು ಪೋಸ್ಟರ್ ಮೇಕಿಂಗ್ ಸ್ಪರ್ಧೆಯನ್ನು ನಡೆಸಲಾಯಿತು.