ಟಿಪ್ಪು ಯಾವುದೇ ಧರ್ಮ ವಿರೋಧಿಯಾಗಿರಲಿಲ್ಲ. ಅನೇಕ ಹಿಂದು ದೇಗುಲಗಳಿಗೆ ಕೊಡುಗೆಗಳ ನೀಡಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹೇಳಿದರು.
ಶ್ರೀರಂಗಪಟ್ಟಣ (ಡಿ.03): ಟಿಪ್ಪು ಯಾವುದೇ ಧರ್ಮ ವಿರೋಧಿಯಾಗಿರಲಿಲ್ಲ. ಅನೇಕ ಹಿಂದು ದೇಗುಲಗಳಿಗೆ ಕೊಡುಗೆಗಳ ನೀಡಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹೇಳಿದರು. ಪಟ್ಟಣದ ಶ್ರೀರಂಗನಾಥ ದೇಗುಲದ ಮೈದಾನದಲ್ಲಿ ಸಮಾನ ಮನಸ್ಕರ ವೇದಿಕೆಯಿಂದ ಟಿಪ್ಪು ಸುಲ್ತಾನ್ ಜನ್ಮ ದಿನದ ನೆನಪಿಗಾಗಿ ಬಹುಸಂಸ್ಕೃತಿ ಸಾಮರಸ್ಯ ಮೇಳದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಟಿಪ್ಪು ಮತಾಂಧನಲ್ಲ ಎನ್ನುವುದಕ್ಕೆ ಆತ ಮಡಿದಾಗಲು ತನ್ನ ಕೈ ಬೆರಳಲ್ಲಿ ಶ್ರೀರಾಮ್ ಎಂಬ ಅಚ್ಚೆಯಿರುವ 43 ಗ್ರಾಂ ತೂಕದ ಚಿನ್ನದ ಉಂಗುರ ಧರಿಸಿದ್ದ. ಅದು ಈಗಲೂ ಬ್ರಿಟನ್ ಮ್ಯೂಸಿಯಂನಲ್ಲಿದೆ. ಅದೇಗೆ ಟಿಪ್ಪು ಮತಾಂಧ ಎನ್ನಲು ಸಾಧ್ಯ ಎಂದರು.
ಟಿಪ್ಪುವಿಗೆ ಕೇವಲ ತನ್ನ ಧರ್ಮದವರಿಂದ ಮಾತ್ರ ಮೋಸ ಹೋಗಲಿಲ್ಲ. ಮೀರ್ ಸಾದಿಕ್ ಹಾಗೂ ದಿವಾನ್ ಪೂರ್ಣಯ್ಯ ಅವರು ದ್ರೋಹ ಮಾಡಿದ್ದರು. ಇವರ ಸಂಚಿನಿಂದ ಬ್ರಿಟೀಷರಿಗೆ ಬಲಿಯಾದ ವೀರ ಟಿಪ್ಪುಸುಲ್ತಾನ್ ಎಂದು ಬಣ್ಣಿಸಿದರು. ವೇದಿಕೆಯಲಿ ಟಿಪ್ಪು ಸುಲ್ತಾನ್ ವಂಶಸ್ಥ ನಾದ ಮನ್ಸೂರ್ ಅಲಿಖಾನ್, ಇತಿಹಾಸಕಾರ ನಂಜರಾಜೆ ಅರಸ್, ಗಾಂಧಿವಾದಿ ಡಾ.ಸುಜಯ್ ಕುಮಾರ್, ಜಿಲ್ಲಾ ರೈತ ಸಂಘದ ಅಧ್ಯಕ್ಷ ಕೆಂಪೂಗೌಡ, ಪ್ರಜ್ಞಾವಂತರ ವೇದಿಕೆ ವಕೀಲರಾದ ವೆಂಕಟೇಶ್, ಹಿಂದುಳಿದ ವರ್ಗಗಳ ಹರ್ಷ ಕುಮಾರ್ ಕುಗೈ, ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಚಾಲಕ ಎಂ.ವಿ.ಕೃಷ್ಣ, ಮುಸ್ಲಿಂ ಮುಖಂಡ ಮೊಹಮದ್ ತಾಹಿರ್, ಕೆ.ಶೆಟ್ಟಿಹಳ್ಳಿ ಅಪ್ಪಾಜಿ ಸೇರಿದಂತೆ ಇತರರು ಇದ್ದರು.
ಶಿಕ್ಷಣ ಕ್ಷೇತ್ರಕ್ಕೆ ರೇವಣ್ಣ ದಂಪತಿಯ ಕೊಡುಗೆ ಅಪಾರ: ಎಚ್.ಡಿ.ದೇವೇಗೌಡ
ವರದಿ ಕೈ ಸೇರುವ ಮುನ್ನ ವಿರೋಧ ಸರಿಯಲ್ಲ: ಜಾತಿಗಣತಿ ವರದಿ ರಾಜ್ಯ ಸರ್ಕಾರದ ಕೈ ಸೇರುವ ಮುನ್ನವೇ ವಿರೋಧಿಸುವುದು ಸರಿಯಲ್ಲ. ವರದಿಯನ್ನು ಸಂಪೂರ್ಣವಾಗಿ ಅಧ್ಯಯನ ನಡೆಸಿದ ಬಳಿಕ ಮಾತನಾಡಬೇಕೆ ಹೊರತು ಸುಮ್ಮನೆ ವಿರೋಧಿಸುವುದು ಎಷ್ಟು ಸರಿ ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಪ್ರಶ್ನಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿ ಗಣತಿ ವರದಿ ಕುರಿತಂತೆ ಹಿಂದುಳಿದ ವರ್ಗಗಳ ಆಯೋಗವು ಅಧಿಕೃತವಾಗಿ ವರದಿ ನೀಡಿಲ್ಲ. ನ್ಯಾ.ಎಚ್.ಎಂ. ಕಾಂತರಾಜ್ ಸಮೀಕ್ಷೆ ವರದಿ ರಾಜ್ಯ ಸರ್ಕಾರದ ಕೈಗೆ ತಲುಪಿಲ್ಲ. ಹೀಗಿದ್ದರೂ ವಿರೋಧ ಮಾಡುವುದು ಯಾವ ನ್ಯಾಯ ಎಂದು ಕಿಡಿಕಾರಿದರು.
ಕಾಂತರಾಜ್ ವರದಿ ಜಾತಿಗಣತಿಯಾಗಿರದೆ ಸಮೀಕ್ಷೆಯಾಗಿದೆ. ಕೇವಲ ಒಂದು ಸಮುದಾಯದ ಪರವಾಗಿ ಮಾಡಿಲ್ಲ. ಪ್ರತಿಯೊಂದು ಸಮುದಾಯದಲ್ಲಿರುವ ಬಡ ಜನರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಮಾಡಲಾಗಿದೆ ಎಂಬುದನ್ನು ಅರಿಯಬೇಕು. ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದವರು, ಆರ್. ಅಶೋಕ್‌ಉಪ ಮುಖ್ಯಮಂತ್ರಿ ಆಗಿದ್ದವರು. ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡುವಾಗ ಸಂವಿಧಾನದ ಚೌಕಟ್ಟಿನ ಒಳಗೆ ನೀಡಬೇಕು ಎಂದರು. ಆರ್. ಅಶೋಕ್ ವಿಪಕ್ಷ ನಾಯಕರಾಗಿದ್ದಾರೆ. ಈಗ ಜವಾಬ್ದಾರಿಯುತವಾಗಿ ಮಾತನಾಡಬೇಕೆ ಹೊರತು ಏನೇನೋ ಹೇಳಿಕೆ ನೀಡುವುದಲ್ಲ.
ಕಾಂಗ್ರೆಸ್ ಅಭ್ಯರ್ಥಿಗಳ ಖರೀದಿಗೆ ಸಿಎಂ ಕೆಸಿಆರ್ ಯತ್ನ: ಡಿಕೆಶಿ ಆರೋಪ
ಕಾಂತರಾಜ್ ವರದಿ ಸಮೀಕ್ಷೆಯನ್ನು ರಾಜ್ಯ ಸರ್ಕಾರ ಸ್ವೀಕಾರಿಸಬೇಕು. ಬಳಿಕ ಅದನ್ನು ಅಧಿವೇಶನದಲ್ಲಿ ಚರ್ಚಿಸಬೇಕು ಎಂದು ಅವರು ಹೇಳಿದರು. ಶಾಸಕರು ಮತ್ತು ಸಚಿವರ ನಡುವೆ ಸಮನ್ವಯದ ಕೊರತೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸಿಎಲ್‌ಪಿ ಸಭೆ ಕರೆಯದಿರುವುದೇ ಸಮನ್ವಯದ ಕೊರತೆಗೆ ಕಾರಣ. ಶಾಸಕರು ತಮ್ಮ ಅಭಿಪ್ರಾಯ ಹೇಳುವಂತಿಲ್ಲವೇ? ಸಚಿವರು ಮತ್ತು ಶಾಸಕರಿಗೆ ಸ್ಪಂದಿಸದಿದ್ದಾಗ ಹೇಳಿಕೆ ನೀಡುತ್ತಾರೆ. ಕೆಲವೊಂದು ವಿಚಾರಗಳನ್ನು ಪಕ್ಷದ ಚೌಕಟ್ಟಿನ ಒಳಗೆ ಚರ್ಚಿಸಬೇಕು. ಬಿ.ಆರ್. ಪಾಟೀಲ್ ಅವರನ್ನು ಸಿಎಂ ಕರೆದು ಮಾತನಾಡಿದ್ದಾರೆ. ಈಗ ಎಲ್ಲವೂ ಸರಿ ಹೋಗಿದೆ ಎಂದು ಅವರು ತಿಳಿಸಿದರು.