ಮಂಗಳೂರು: ಕಟೀಲು ಪರಿಸರದಲ್ಲಿ ಮತ್ತೆ ನೆರೆ

By Kannadaprabha NewsFirst Published Aug 15, 2019, 4:01 PM IST
Highlights

ಕಟೀಲು ಪರಿಸರದ ಮಿತ್ತಬೈಲು, ಕಿಲೆಂಜೂರು, ಕೆಮ್ರಾಲ್‌ ಗ್ರಾಮದ ಅತ್ತೂರು ಮತ್ತಿತರ ಪರಿಸರದ ಪ್ರದೇಶಗಳು ನೆರೆಯಿಂದ ಆವೃತ್ತವಾಗಿ ಅಪಾರ ನಷ್ಟಉಂಟಾಗಿತ್ತು. ಮಂಗಳವಾರ ರಾತ್ರಿಯಿಂದ ಸುರಿದ ನಿರಂತರ ಮಳೆಗೆ ಬುಧವಾರ ನಂದಿನಿ ನದಿ ಮತ್ತೆ ಉಕ್ಕೇರಿದ್ದು ನೀರಿನ ಮಟ್ಟಹೆಚ್ಚಾಗಿ ನೆರೆ ಬಂದಿದೆ. ಅತ್ತೂರು ಬೈಲು ಗಣಪತಿ ಮಂದಿರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಮುಳುಗಡೆಯಾಗಿದೆ.

ಮಂಗಳೂರು(ಆ.15): ಮೂಲ್ಕಿಯಲ್ಲಿ ಕೆಲವು ದಿನಗಳ ಹಿಂದೆ ಸುರಿದ ಭಾರಿ ಮಳೆಗೆ ನಂದಿನಿ ನದಿ ಉಕ್ಕೇರಿ ಕಟೀಲು ಪರಿಸರದ ಮಿತ್ತಬೈಲು, ಕಿಲೆಂಜೂರು, ಕೆಮ್ರಾಲ್‌ ಗ್ರಾಮದ ಅತ್ತೂರು ಮತ್ತಿತರ ಪರಿಸರದ ಪ್ರದೇಶಗಳು ನೆರೆಯಿಂದ ಆವೃತ್ತವಾಗಿ ಅಪಾರ ನಷ್ಟಉಂಟಾಗಿತ್ತು.

ಮಂಗಳವಾರ ರಾತ್ರಿಯಿಂದ ಸುರಿದ ನಿರಂತರ ಮಳೆಗೆ ಬುಧವಾರ ನಂದಿನಿ ನದಿ ಮತ್ತೆ ಉಕ್ಕೇರಿದ್ದು ನೀರಿನ ಮಟ್ಟಹೆಚ್ಚಾಗಿ ನೆರೆ ಬಂದಿದೆ. ಅತ್ತೂರು ಬೈಲು ಗಣಪತಿ ಮಂದಿರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಮುಳುಗಡೆಯಾಗಿದೆ.

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ನಾಟಿ ಮಾಡಿದ ಬತ್ತದ ಪೈರು ಕೆಲವು ದಿನಗಳಿಂದ ನೀರಿನಿಂದ ಮುಳುಗಡೆಯಾಗಿದ್ದು ಮಳೆ ಮುಂದುವರಿದಲ್ಲಿ ಅತ್ತೂರು, ಕಿಲೆಂಜೂರು, ಕೊಡೆತ್ತೂರು, ಮಿತ್ತಬೈಲ್‌ ಮತ್ತಿತರ ಪ್ರದೇಶದ ನೂರಾರು ಎಕರೆ ಬತ್ತದ ಕೃಷಿ ಸಂಪೂರ್ಣ ನಾಶವಾಗುವ ಸಾಧ್ಯತೆ ಇದೆ. ಈಗಾಗಲೇ ನೆರೆಯಿಂದ ರೈತರು ಕಂಗಾಲಾಗಿದ್ದಾರೆ.

click me!