ಯಡಗೆರೆ ಸೌಹಾರ್ದ ಕ್ರೆಡಿಟ್ ಕೋ ಅಪರೇಟಿವ್ ನಿ. ಕೊಪ್ಪ ಇದರ ವತಿಯಿಂದ ಇತ್ತೀಚೆಗೆ ರು.2030 ಮೌಲ್ಯದ ಔಷಧಿ-ಮಾತ್ರೆಗಳನ್ನು ಕೊಪ್ಪ ಸರ್ಕಾರಿ ಆಸ್ಪತ್ರೆಗೆ ಮತ್ತು ರು. 4,600 ಮೌಲ್ಯದ ಔಷಧಿ-ಮಾತ್ರೆಗಳನ್ನು ಬಸವಾನಿಯಲ್ಲಿರುವ ವೃದ್ಧಾಶ್ರಮ ಅಭಯಾಶ್ರಮಕ್ಕೆ ಕೊಡುಗೆಯಾಗಿ ನೀಡಲಾಯಿತು.
ಚಿಕ್ಕಮಗಳೂರು(ಆ.15): ಯಡಗೆರೆ ಸೌಹಾರ್ದ ಕ್ರೆಡಿಟ್ ಕೋ ಅಪರೇಟಿವ್ ನಿ. ಕೊಪ್ಪ ಇದರ ವತಿಯಿಂದ ಇತ್ತೀಚೆಗೆ ರು.2030 ಮೌಲ್ಯದ ಔಷಧಿ-ಮಾತ್ರೆಗಳನ್ನು ಕೊಪ್ಪ ಸರ್ಕಾರಿ ಆಸ್ಪತ್ರೆಗೆ ಮತ್ತು ರು. 4,600 ಮೌಲ್ಯದ ಔಷಧಿ-ಮಾತ್ರೆಗಳನ್ನು ಬಸವಾನಿಯಲ್ಲಿರುವ ವೃದ್ಧಾಶ್ರಮ ಅಭಯಾಶ್ರಮಕ್ಕೆ ಕೊಡುಗೆಯಾಗಿ ನೀಡಲಾಯಿತು.
ಕೊಪ್ಪ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ. ಗಾನವಿ, ನಿವೃತ್ತ ವೈದ್ಯಾಧಿಕಾರಿ ಡಾ. ಕೋದಂಡರಾಮ ಅವರು ಔಷಧಿಯನ್ನು ಬಡರೋಗಿಗಳಿಗೆ ಉಚಿತವಾಗಿ ನೀಡಲು ಸ್ವೀಕರಿಸಿದರು.
ಸಹಕಾರಿ ನಿರ್ದೇಶಕರಾದ ಕೆ.ಎಸ್. ಸುಬ್ರಹ್ಮಣ್ಯ, ಎಚ್.ಎ. ಕೃಷ್ಣಮೂರ್ತಿ, ಮುಖ್ಯಕಾರ್ಯನಿರ್ವಹಣಾಧಿಕಾರಿ ಸುದೀರ.ಸಿ.ಎ ಹಾಗೂ ಶಾಖಾ ವ್ಯವಸ್ಥಾಪಕರಾದ ಡಿ.ವಿ. ವೇಣು ಮುಂತಾದವರಿದ್ದರು.