ಧಾರವಾಡ: ಕಾಂಗ್ರೆಸ್‌ ಮುಖಂಡನ ಜನ್ಮದಿನ, ಗಾಳಿಯಲ್ಲಿ ಗುಂಡು ಹಾರಿಸಿ ಸಂಭ್ರಮ

Kannadaprabha News   | Asianet News
Published : Mar 25, 2021, 02:29 PM IST
ಧಾರವಾಡ: ಕಾಂಗ್ರೆಸ್‌ ಮುಖಂಡನ ಜನ್ಮದಿನ, ಗಾಳಿಯಲ್ಲಿ ಗುಂಡು ಹಾರಿಸಿ ಸಂಭ್ರಮ

ಸಾರಾಂಶ

ಅಣ್ಣಪ್ಪಗೌಡ ಚಿನ್ನಗುಡಿ ಎಂಬುವರ ಜನ್ಮದಿನ ಸಮಾರಂಭ| ಧಾರವಾಡ ತಾಲೂಕಿನ ಶಿವಳ್ಳಿ-ಹೆಬ್ಬಳ್ಳಿ ಗ್ರಾಮಗಳ ಮಧ್ಯೆ ನಡೆದ ಘಟನೆ| ರಿವಾಲ್ವರ್‌ನಿಂದ ಗಾಳಿಯಲ್ಲಿ ಗುಂಡು ಹಾರಿಸಿದ ಕಾಂಗ್ರೆಸ್‌ ಮುಖಂಡ ಮಲ್ಲಿಕಾರ್ಜುನ ಆಯಟ್ಟಿ| ಈ ಸಂಬಂಧ ಧಾರವಾಡ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲು| 

ಧಾರವಾಡ(ಮಾ.25):  ಕಾಂಗ್ರೆಸ್‌ ಮುಖಂಡರೊಬ್ಬರ ಜನ್ಮದಿನದ ಸಂಭ್ರಮದಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿದ ಘಟನೆ ತಾಲೂಕಿನ ಶಿವಳ್ಳಿ-ಹೆಬ್ಬಳ್ಳಿ ಗ್ರಾಮ ಮಧ್ಯದ ತೋಟದ ಮನೆಯಲ್ಲಿ ಮಂಗಳವಾರ ತಡ ರಾತ್ರಿ ಸಂಭವಿಸಿದೆ. ತಡವಾಗಿ ಪ್ರಕರಣ ಬೆಳಕಿಗೆ ಬಂದಿದೆ.

ತಾಲೂಕು ಪಂಚಾಯ್ತಿ ಮಾಜಿ ಸದಸ್ಯ ಅಣ್ಣಪ್ಪಗೌಡ ಚಿನ್ನಗುಡಿ ಎಂಬುವರ ಜನ್ಮದಿನ ಸಮಾರಂಭದಲ್ಲಿ ಚಿನ್ನಗುಡಿ ಅವರ ಸ್ನೇಹಿತ ಕಾಂಗ್ರೆಸ್‌ ಮುಖಂಡ ಮಲ್ಲಿಕಾರ್ಜುನ ಆಯಟ್ಟಿ ಎಂಬುವರು ತಮ್ಮ ರಿವಾಲ್ವರ್‌ನಿಂದ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಇದಾದ ಬಳಿಕ ಚಿನ್ನಗುಡಿ ಅವರ ತಲೆಗೆ ರಿವಾಲ್ವಾರ್‌ ಪಾಯಿಂಟ್‌ ಇಟ್ಟು ಶುಭ ಹಾರೈಸಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಸ್‌ ಕಾರ್ಗೋ ಸೇವೆಗೆ ಉತ್ತಮ ಪ್ರತಿಕ್ರಿಯೆ: ಭರ್ಜರಿ ಲಾಭ..!

ಮಲ್ಲಿಕಾರ್ಜುನ ಆಯಟ್ಟಿ ಮತ್ತು ಅಣ್ಣಪ್ಪಗೌಡ ಚಿನ್ನಗುಡಿ ಅವರನ್ನು ಬುಧವಾರ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
 

PREV
click me!

Recommended Stories

ತುಮಕೂರಿನಲ್ಲಿ ಉದ್ಯಮಿಗೆ ಲಂಚಕ್ಕೆ ಬೇಡಿಕೆ; ಇಬ್ಬರು ಭ್ರಷ್ಟ ಅಧಿಕಾರಿಗಳು ಲೋಕಾಯುಕ್ತ ಬಲೆಗೆ!
ಮಂಡ್ಯಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ರಾಜಕೀಯ ಹೊಸ ದಾಳ ಉರುಳಿಸಿದ ದಳಪತಿ!