ಬಂಡಿಪುರ ರಾಷ್ಟ್ರೀಯ ಉದ್ಯಾನವನ ಆಗಾಗ್ಲೇ ಸುದ್ದಿಯಾಗುತ್ತೆ. ಅದರಲ್ಲೂ 2019ರಲ್ಲಿ ಉಂಟಾದ ಬೆಂಕಿ ಅನಾಹುತ ಕಾಡಿನ ಸೌಂದರ್ಯವನ್ನೇ ಹದಗೆಡಿಸಿತು. ಆ ಬಳಿಕ ಎಚ್ಚೆತ್ತಿರುವ ಅರಣ್ಯ ಇಲಾಖೆ ಕಾಡ್ಗಿಚ್ಚು ತಡೆಗೆ ಫೈರ್ ಲೈನ್ ಕಾಮಗಾರಿ ಶುರು ಮಾಡಿದೆ.
ವರದಿ: ಪುಟ್ಟರಾಜು.ಆರ್.ಸಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ
ಚಾಮರಾಜನಗರ (ಜ.11): ಬಂಡಿಪುರ ರಾಷ್ಟ್ರೀಯ ಉದ್ಯಾನವನ ಆಗಾಗ್ಲೇ ಸುದ್ದಿಯಾಗುತ್ತೆ. ಅದರಲ್ಲೂ 2019ರಲ್ಲಿ ಉಂಟಾದ ಬೆಂಕಿ ಅನಾಹುತ ಕಾಡಿನ ಸೌಂದರ್ಯವನ್ನೇ ಹದಗೆಡಿಸಿತು. ಆ ಬಳಿಕ ಎಚ್ಚೆತ್ತಿರುವ ಅರಣ್ಯ ಇಲಾಖೆ ಕಾಡ್ಗಿಚ್ಚು ತಡೆಗೆ ಫೈರ್ ಲೈನ್ ಕಾಮಗಾರಿ ಶುರು ಮಾಡಿದೆ. ಈ ಬಾರಿ ಮಳೆ ಕೊರತೆ ಆಗಿರುವುದರಿಂದ ಬೆಂಕಿಯಿಂದ ಬಂಡೀಪುರದ ರಕ್ಷಣೆ ಅಧಿಕಾರಿಗಳಿಗೆ ದೊಡ್ಡ ಸವಾಲಾಗಿದೆ.ಇದಕ್ಕೆ ಸಾಕಷ್ಟು ಶ್ರಮವಹಿಸ್ತಿದ್ದಾರೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ ನೋಡಿ.
undefined
ಹೌದು! ಕಾಡಿನ ಒಳಗೆ ಬೆಂಕಿ ಹಚ್ಚುತ್ತಿರುವ ಅರಣ್ಯ ಸಿಬ್ಬಂದಿ, ಮತ್ತೊಂದೆಡೆ ಬೆಂಕಿ ನಂದಿಸುತ್ತಿರುವ ಜನರು ಇವೆಲ್ಲ ನಮಗೆ ಕಾಣ ಸಿಕ್ಕಿದ್ದು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ. ಈ ಪ್ರಕ್ರಿಯೆಗೆ ಫೈರ್ ಲೈನ್ (ಬೆಂಕಿ ರೇಖೆ) ನಿರ್ಮಾಣ ಎನ್ನುತ್ತಾರೆ. ಅರಣ್ಯದ ಒಳಗೆ ರಸ್ತೆಯ ಇಕ್ಕೆಲಗಳಲ್ಲಿ ಒಣಗಿರುವ ಹುಲ್ಲು, ಕುರುಚಲು ಗಿಡಗಳನ್ನು ಅರಣ್ಯ ಇಲಾಖೆ ಬೆಂಕಿ ಹಾಕಿ ಭಸ್ಮ ಮಾಡ್ತಿದೆ. ಒಂದು ವೇಳೆ ಕಾಡ್ಗಿಚ್ಚು ಸಂಭವಿಸಿದರೆ ಅದನ್ನು ನಿಯಂತ್ರಣ ಮಾಡಲು ಇದು ಸಹಕಾರಿಯಾಗಲಿದೆ.
ಏಕೆಂದರೆ ಒಂದು ಬಾರಿ ಬೆಂಕಿ ಹಾಕಿದರೆ ಸುತ್ತ ಹುಲ್ಲಿಗೆ ಮತ್ತೆ ಬೆಂಕಿ ತಾಕುವುದಿಲ್ಲ. ಹೀಗಾಗಿ ಮೊದಲು ಬೆಂಕಿ ಹಾಕಿ ಕಾಡ್ಗಿಚ್ಚು ನಿಯಂತ್ರಣಕ್ಕೆ ಅರಣ್ಯ ಇಲಾಖೆ ಮುಂದಾಗಿದೆ. ಬಂಡೀಪುರ ವ್ಯಾಪ್ತಿಯಲ್ಲಿ 2780 ಕಿ.ಮೀ. ಬೆಂಕಿ ರೇಖೆ ಗುರುತಿಸಿದ್ದಾರೆ. ಹೊಸದಾಗಿಯೂ ಕೂಡ 125 ಫೈರ್ ಲೈನ್ ಗಳನ್ನ ಗುರುತಿಸಿದ್ದೇವೆ ಅಂತಾರೆ ಬಂಡಿಪುರ ಅರಣ್ಯ ಸಂರಕ್ಷಣಾಧಿಕಾರಿ ರಮೇಶ್ ಕುಮಾರ್. ಇನ್ನೂ ಫೈರ್ ಲೈನ್ ಕೆಲಸ ನಿರ್ವಹಣೆ ಕೇವಲ ಅರಣ್ಯ ಇಲಾಖೆ ಸಿಬ್ಬಂದಿಯಿಂದ ಸಾಧ್ಯವಾಗುವುದಿಲ್ಲ. ಹೀಗಾಗಿ ಜನವರಿಯಿಂದ ಮೇ ವರೆಗೆ ದಿನಗೂಲಿ ಆಧಾರದ ಮೇಲೆ ಕಾರ್ಮಿಕರನ್ನ ನೇಮಕ ಮಾಡಿಕೊಳ್ಳಲಾಗುತ್ತೆ.
ರೆಸಾರ್ಟ್‌ನಲ್ಲಿ ಮಾಜಿ ಸಿಎಂ ಎಚ್‌ಡಿಕೆ ತಂತ್ರಗಾರಿಕೆ: ರಾಜಕೀಯ ಲೆಕ್ಕಚಾರದಲ್ಲಿ ಕುಮಾರಸ್ವಾಮಿ!
ಬಂಡೀಪುರದ ವ್ಯಾಪ್ತಿಯಲ್ಲಿ 470 ಕ್ಕೂ ಹೆಚ್ಚು ಫೈರ್ ವಾಚರ್ ಗಳ ನೇಮಕ ಮಾಡಿಕೊಳ್ಳಲಾಗಿದೆ. ಅರಣ್ಯ ಇಲಾಖೆ ವಾಹನದಲ್ಲೇ ಬರುವ ಇವರು ಬೆಳಗ್ಗೆ 9 ರಿಂದ ಸಂಜೆ 5 ರವರೆಗೆ ಕೆಲಸ ಮಾಡ್ತಾರೆ. ಸಣ್ಣಪುಟ್ಟ ಗಿಡಗಂಟಿಗಳನ್ನ ಮೊದಲು ಕಡಿದು ಬಳಿಕ ಬೆಂಕಿ ಹಾಕಲಾಗುತ್ತೆ. ಕಾಡಲ್ಲಿ ಸಿಗುವ ಸೊಪ್ಪು ತಗೊಂಡು ಬೆಂಕಿ ನಂದಿಸುವ ಕೆಲಸವನ್ನ ಒಟ್ಟಾಗಿ ಮಾಡ್ತಿದಾರೆ. ಈ ಬಾರಿ ಜಿಲ್ಲೆಯಲ್ಲಿ ಮಳೆ ಕಡಿಮೆಯಾಗಿರುವುದರಿಂದ ಬೆಂಕಿಯ ಆತಂಕ ಹೆಚ್ಚಿದೆ.ಆದ್ರೆ ಅರಣ್ಯ ಇಲಾಖೆ ಮುನ್ನೆಚ್ಚರಿಕೆ ವಹಿಸಿರುವುದು ಕಾಡು ಪ್ರಾಣಿಗಳಿಗೆ ವರದಾನವೇ ಅಂತಾನೇ ಹೇಳಬಹುದು.