30 ವರ್ಷ ಕಳೆದರು ಇನ್ನೂ ಮುಗಿಯದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಮಳಲೂರು ಏತ ನೀರಾವರಿ ಕಾಮಗಾರಿ ಶೀಘ್ರ ಪೂರ್ಣಗೊಳಿಸದಿದ್ದರೆ ಮುಂದಿನ ಲೋಕಸಭಾ ಚುನಾವಣೆ ಬಹಿಷ್ಕರಿಸುವುದಾಗಿ ಕರ್ನಾಟಕ ರೈತ ಸಂಘ ಎಚ್ಚರಿಸಿದೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಜ.11): 30 ವರ್ಷ ಕಳೆದರು ಇನ್ನೂ ಮುಗಿಯದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಮಳಲೂರು ಏತ ನೀರಾವರಿ ಕಾಮಗಾರಿ ಶೀಘ್ರ ಪೂರ್ಣಗೊಳಿಸದಿದ್ದರೆ ಮುಂದಿನ ಲೋಕಸಭಾ ಚುನಾವಣೆ ಬಹಿಷ್ಕರಿಸುವುದಾಗಿ ಕರ್ನಾಟಕ ರೈತ ಸಂಘ ಎಚ್ಚರಿಸಿದೆ.
undefined
1480 ಎಕ್ರೆ ಪ್ರದೇಶಕ್ಕೆ ನೀರೋದಗಿಸುವ ಯೋಜನೆ: ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಮಳಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಮೀನುಗಳಿಗೆ ನೀರು ಒದಗಿಸೋ ಮಹತ್ವಾಕಾಂಕ್ಷೆ ಯೋಜನೆ . 1998ರಲ್ಲಿ ಈ ಯೋಜನೆಗೆ ಚಾಲನೆ ಸಿಕ್ತು. ಸುಮಾರು 1480 ಎಕರೆ ಪ್ರದೇಶಕ್ಕೆ ನೀರೋದಗಿಸುವ ಈ ಏತ ನೀರಾವರಿ ಯೋಜನೆಗೆ ಗುದ್ದಲಿ ಪೂಜೆಯನ್ನೂ ಮಾಡಿದ್ರು. ಮೊದಲ ಹಂತದಲ್ಲಿ ಜಾಕ್ವೆಲ್, ಇಂಟೆಕ್ವೆಲ್, ಪೈಪ್ಗಳ ಅಳವಡಿಕೆ ಮಾಡಲಾಗಿತ್ತು. 2ನೇ ಹಂತದಲ್ಲಿ ಪಂಪ ಅಳವಡಿಕೆ, ವಿದ್ಯುತ್ ಕಾಮಗಾರಿ ಕೂಡ ನಡೆದಿದೆ. ಈ ಯೋಜನೆಗಾಗಿ ಇಲ್ಲಿನ ರೈತರು ಕೃಷಿ ಜಮೀನುಗಳನ್ನ ನೀಡಿದ್ದಾರೆ. ಆದ್ರೆ, ಕೆಲ ರೈತರಿಗೆ ಸರ್ಕಾರದಿಂದ ಪರಿಹಾರ ಬಂದಿಲ್ಲ.
ರೆಸಾರ್ಟ್‌ನಲ್ಲಿ ಮಾಜಿ ಸಿಎಂ ಎಚ್‌ಡಿಕೆ ತಂತ್ರಗಾರಿಕೆ: ರಾಜಕೀಯ ಲೆಕ್ಕಚಾರದಲ್ಲಿ ಕುಮಾರಸ್ವಾಮಿ!
ಇದರ ಜೊತೆಗೆ ಮಳಲೂರು, ಕಂಬಿಹಳ್ಳಿ, ತಡರೂರು, ಕದ್ರಿಮಿದ್ರಿ ಗ್ರಾಮದ 19 ಎಕರೆ 7 ಗುಂಟೆ ಭೂಮಿಯನ್ನ ಜಿಲ್ಲಾಡಳಿತ ಸ್ವಾಧೀನ ಪಡಿಸಿಕೊಂಡಿದೆ. ಆದ್ರೆ, ಸರ್ಕಾರ ಬಹುತೇಕ ರೈತರಿಗೆ ಭೂಮಿ ನೀಡಿದ್ರು ಪರಿಹಾರ ನೀಡಿಲ್ಲ. ಪರಿಹಾರಕ್ಕಾಗಿ ರೈತರು ಕಾವೇರಿ ನಿಗಮದ ಕಚೇರಿಗೆ ಅಲೆದು ಚಪ್ಪಲಿ ಸವೆಸಿದ್ರೋ ವಿನಃ ಪರಿಹಾರ ಮಾತ್ರ ಬಂದಿಲ್ಲ. ಇದರ ಜೊತೆಗೆ ಯೋಜನೆಗಾಗಿ ಕ್ಯೋಟಾಂತರ ರೂಪಾಯಿ ಹಣ ವ್ಯಯ ಮಾಡಲಾಗಿದೆ. ಆದ್ರೆ, ಪಂಪ್ ಹೌಸ್ ಹಾಗೂ ಮೋಟರ್ಗಳ ಸುತ್ತ ಗಿಡ ಬೆಳೆದು ತುಕ್ಕು ಹಿಡಿಯುತ್ತಿದೆ. ಸಾವಿರಾರು ಎಕರೆ ಭೂಮಿಯನ್ನ ಹಸಿರಾಗಿಸುವ ಈ ಯೋಜನೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ನೆನೆಗುದಿಗೆ ಬಿದ್ದಿದೆ. ಈ ಭಾಗದ ರೈತರಿಗೆ ಅನ್ನ ನೀಡಿ ಆದಾಯ ಹೆಚ್ಚಿಸುವ ಈ ಯೋಜನೆ ಇನ್ನೆಷ್ಟು ಶಾಸಕರು ಹಾಗೂ ಸರ್ಕಾರವನ್ನ ಕಾಣಬೇಕೋ ಗೊತ್ತಿಲ್ಲ ಎಂದು ರೈತರು ಆಕ್ರೋಶ ಹೊರಹಾಕಿದ್ದಾರೆ.
ಒಂದು ತಿಂಗಳು ಗಡುವು: ಕಳೆದ 30 ವರ್ಷಗಳಿಂದ 7 ಶಾಸಕರು ಆಯ್ಕೆ ಆಗಿದ್ದಾರೆ, ಪ್ರಸ್ತುತ ಗೆದ್ದಿರುವ ಎಂ.ಎಲ್.ಎ ಗೆಲ್ಲಿಸಿದ್ದು ಕೂಡಾ ಮಳಲೂರು ಏತ ನೀರಾವರಿ ಕೆಲಸ ಮಾಡಿಸುತ್ತಾರೆ ಅಂತ, ಆದರೆ ಅಂಬಳೆ ಹೋಬಳಿಯ ಹತ್ತಾರು ಗ್ರಾಮಗಳ ಯೋಜನೆಯ ಕಾಮಗಾರಿ ಮಾತ್ರ ಅಲ್ಲೇ ನಿಂತಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಬೇಸರ ವ್ಯಕ್ತಪಡಿಸಿದೆ. ಒಂದು ತಿಂಗಳು ಗಡುವು ನೀಡಿರುವ ರೈತ ಮುಖಂಡರು ಅಷ್ಟರೊಳಗೆ ಬಾಕಿ ಕಾಮಗಾರಿ ಕೈಗೆತ್ತಿಕೊಳ್ಳದಿದ್ದರೆ ಮೂಡಿಗೆರೆ ಶಾಸಕಿ ನಯನ ಮೋಟಮ್ಮ ಮನೆ ಮುಂದೆ ಅನಿರ್ದಿಷ್ಟವಾಗಿ ಚಳುವಳಿ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಡೈರಿ ಮಿಲ್ಕ್ ಚಾಕಲೇಟ್ ನೀಡಿಕೆ: ಅನ್ಯ ಕೋಮಿನ ಯುವಕನ ಮೇಲೆ ಹಲ್ಲೆ, ದೂರು ಪ್ರತಿ ದೂರು ದಾಖಲು
ಮುಂಬರುವ ಲೋಕಸಭಾ ಚುನಾವಣೆಗೆ ಮತ ಕೇಳಲು ಬಂದರೆ ಚೀಮಾರಿ ಹಾಕುತ್ತೇವೆ ಮತದಾನ ಬಹಿಷ್ಕಾರ ಹಾಕುತ್ತೇವೆ ಎಂದು ರೈತ ಸಂಘದ ರಾಜ್ಯ ಪದಾಧಿಕಾರಿ ಕೃಷ್ಣೇಗೌಡ ಎಚ್ಚರಿಕೆ ನೀಡಿದ್ದಾರೆ. ಮಳಲೂರು ಏತ ನೀರಾವರಿ ಕಾಮಗಾರಿ ಜಾರಿ ಯಿಂದ ಭೂಮಿ ಕಳೆದುಕೊಂಡವರಿಗೆ ಇನ್ನೂ ಪರಿಹಾರ ಕೊಟ್ಟಿಲ್ಲ, ಜಮೀನು ಹದಗೆಟ್ಟು ಹೋಗಿದೆ, ಮಾನವೀಯತೆ ಇಲ್ಲದ ರಾಜಕಾರಣಿಗಳು ನಮ್ಮ ಮಕ್ಕಳು ನಗರಕ್ಕೆ ಹೋಗಿ ಹೊಟೆಲ್ ಗಳಲ್ಲಿ ಲೋಟ ತೊಳೆಯುವಂತೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.