ಉಡುಪಿ: ಯಕ್ಷಗಾನಂ ಗೆಲ್ಗೆ, ಸಿರಿಗನ್ನಡಕ್ಕೂ ಏಳ್ಗೆ

Published : Oct 31, 2022, 04:25 PM ISTUpdated : Oct 31, 2022, 04:39 PM IST
ಉಡುಪಿ: ಯಕ್ಷಗಾನಂ ಗೆಲ್ಗೆ, ಸಿರಿಗನ್ನಡಕ್ಕೂ ಏಳ್ಗೆ

ಸಾರಾಂಶ

ಯಕ್ಷ ಕನ್ನಡದ ಕೊಡುಗೆ ಅಪಾರ. ಹತ್ತು ಗಂಟೆಯ ಪ್ರದರ್ಶನದಲ್ಲಿ ಇಂಗ್ಲೀಷ್ ಪದ ಬಳಕೆಯೇ ಇಲ್ಲ. ಸಾವಿರಕ್ಕೂ ಅಧಿಕ ಕಲಾವಿದರ ನಿತ್ಯ ಕನ್ನಡ ಸೇವೆ. ಯಕ್ಷಗಾನಂ ಗೆಲ್ಗೆ, ಸಿರಿಗನ್ನಡಂ ಗೆಲ್ಗೆ. 

ವರದಿ: ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್

ಉಡುಪಿ (ಅ.31): ಎಲ್ಲೂ ದಾಖಲಾಗಿಲ್ಲ, ಆದರೂ ಅದೊಂದು ದಾಖಲೆ. ಕರಾವಳಿಯ ಹೆಮ್ಮೆಯ ಕಲೆ ಯಕ್ಷಗಾನ ಕನ್ನಡ ಭಾಷೆಗೆ ಕೊಟ್ಟ ಕೊಡುಗೆ ಅಳೆಯಲು ಯಾವುದೇ ಮಾಪನವಿಲ್ಲ. ಒಂದೇ ಒಂದು ಆಂಗ್ಲಭಾಷೆಯ ಶಬ್ದ ಬಳಸದೆ ಪ್ರಯೋಗವಾಗುವ ಯಕ್ಷಗಾನ ಪ್ರದರ್ಶನಗಳು ಪ್ರತಿ ರಾತ್ರಿ ಕನ್ನಡಮ್ಮನ ರಥೋತ್ಸವ ನಡೆಸುತ್ತೆ ಗೊತ್ತಾ?! ಯಕ್ಷಗನ್ನಡದ ಬಗ್ಗೆ ಕನ್ನಡಿಗರು ಹೆಮ್ಮೆ ಪಡುವ ಅನೇಕ ಸಂಗತಿಗಳು ಇಲ್ಲಿವೆ. ಅಸ್ಖಲಿತ ಕನ್ನಡ, ತಪ್ಪಿಯೂ ಒಂದೇ ಒಂದು ಆಂಗ್ಲ ಭಾಷೆಯ ಶಬ್ದ ಕಾಣಸಿಗೋದಿಲ್ಲ. ಒಂದಿಡೀ ರಾತ್ರಿ ಸತತ ಹತ್ತು ಗಂಟೆ ಯಕ್ಷಗಾನ ಪ್ರದರ್ಶನ ನಡೆದರೂ ನಿಮಗೆ ಒಂದೇ ಒಂದು ಆಂಗ್ಲ ಅಥವಾ ಅನ್ಯ ಭಾಷೆಯ ಶಬ್ದ ಯಕ್ಷಗಾನದಲ್ಲಿ ಕೇಳಸಿಗೋದಿಲ್ಲ. ಇಂಗ್ಲೀಷ್ ಇಲ್ಲದೆ ಮಾತನಾಡೋದು ಈ ಕಾಲದಲ್ಲಿ ಆಗದ ಮಾತು, ಆದ್ರೆ ಸ್ವಚ್ಛ ಕನ್ನಡದ ನಿಜವಾದ ಸೊಬಗು ಸವಿಯಬೇಕಾದ್ರೆ ನೀವೊಂದು ಸಂಪೂರ್ಣ ಯಕ್ಷಗಾನ ಪ್ರದರ್ಶನ ನೋಡ್ಲೇಬೇಕು. ಹೇಳಿ ಕೇಳಿ ಕರಾವಳಿಯ ಬಹುತೇಖ ಜನರ ಮಾತೃಭಾಷೆ ತುಳು. ಆದ್ರೆ ತುಳುವರು ಕನ್ನಡಕ್ಕೆ ಕೊಟ್ಟ ಅಪ್ರತಿಮ ಕೊಡುಗೆ ಯಕ್ಷಗಾನ. ಇಲ್ಲಿ ಕಲಾವಿದನೊಬ್ಬ ಆಡುವ ಮಾತುಗಳು ಪುಸ್ತಕ ರೂಪದಲ್ಲಿ ದಾಖಲಾದ್ರೆ, ಯಾವ ಮಹಾ ಕಾವ್ಯಕ್ಕೂ ಕಮ್ಮಿಯಿಲ್ಲ. 

ಐವತಕ್ಕೂ ಅಧಿಕ ಯಕ್ಷಗಾನ ಮೇಳಗಳು, ಸಾವಿರಕ್ಕೂ ಅಧಿಕ ಯಕ್ಷಗಾನ ಕಲಾವಿದರು, ಕನ್ನಡದಲ್ಲೇ ಪದ್ಯಗಳಿಗೆ ಅರ್ಥಹೇಳಿ ಪ್ರತಿನಿತ್ಯ ರಾತ್ರಿ ರಂಗಸ್ಥಳದಲ್ಲಿ ಭುನವೇಶ್ವರಿಯ ರಥೋತ್ಸವ ನಡೆಸ್ತಾರೆ.

ಕರಾವಳಿಯ ಗ್ರಾಂಥಿಕ ಕನ್ನಡವನ್ನು ಸಿನಿಮಾಗಳಲ್ಲಿ ತಮಾಷೆಗೆ ಬಳಸೋದುಂಟು. ಆದರೆ ಇಲ್ಲಿನ ಜನರ ಸ್ವಚ್ಛ ಕನ್ನಡಕ್ಕೆ ನಿಜವಾದ ಪ್ರೇರಣೆಯೇ ಯಕ್ಷಗಾನ. ಅದರಲ್ಲೂ ಯಕ್ಷಗಾನ ತಾಳಮದ್ದಲೆ ಕೂಟಗಳಲ್ಲಿ ಪಂಡಿತ ಕಲಾವಿದರು ಮಂಡಿಸುವ ವಾದಗಳನ್ನು ಕೇಳಿದ್ರೆ, ಕನ್ನಡ ಭಾಷೆಯ ಶ್ರೀಮಂತಿಕೆಯ ಬಗ್ಗೆ ಬೆರಗು ಹುಟ್ಟುತ್ತೆ. ಇನ್ನೂ ಅಚ್ಚರಿಯ ವಿಷಯ ಅಂದ್ರೆ ಈ ಕಲಾವಿದರ್ಯಾರೂ ವಿಶ್ವವಿದ್ಯಾಲಯಗಳಲ್ಲಿ ಪದವಿ ಪಡೆದವರಲ್ಲ. ಅವರಲ್ಲಿ ಅನಕ್ಷರಸ್ಥರಗೂ ಕೊರತೆಯಿಲ್ಲ.

ಯಕ್ಷಗಾನದಲ್ಲಿ ಕಾಲಮಿತಿ ಪ್ರದರ್ಶನ ಅನಿವಾರ್ಯವೇ?

ರಾಜ್ಯದ ಇತರ ಭಾಗಗಳಂತೆ ಕರಾವಳಿಯಲ್ಲೂ ಇಂಗ್ಲೀಷ್ ಮೀಡಿಯಂ ಶಾಲೆಗಳದ್ದೇ ಹಾವಳಿ. ಆದರೆ ನೆಮ್ಮದಿಯ ವಿಚಾರ ಅಂದ್ರೆ ಉಡುಪಿಯ ಬಹುತೇಕ ಇಂಗ್ಲೀಷ್ ಮೀಡಿಯಂ ಶಾಲೆಗಳಲ್ಲಿ ಯಕ್ಷಗಾನವನ್ನು ಖಡ್ಡಾಯವಾಗಿ ಕಲಿಸಲಾಗುತ್ತೆ, ಇದರಿಂದ ಕನ್ನಡ ಸಂಸ್ಕೃತಿ ಮತ್ತು ಭಾಷೆಯ ಮೇಲಿನ ಹಿಡಿತವನ್ನು ಈ ಭಾಗದ ವಿದ್ಯಾರ್ಥಿಗಳು ಕಳೆದುಕೊಂಡಿಲ್ಲ.

ಉಡುಪಿ: ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಮಿಂಚು ಹರಿಸಿದ ಕರಾವಳಿಯ ಯಕ್ಷಗಾನ

ಯಕ್ಷಗಾನ ಕರಾವಳಿ ಜನರ ಅವಿಭಾಜ್ಯ ಅಂಗ, ಹಾಗೆಯೇ ಶುದ್ಧ ಕನ್ನಡ ಇಲ್ಲಿನ ಜನರ ಜೀವನಕ್ರಮದಲ್ಲೇ ರೂಢಿಯಾಗಿದೆ.
ಯಕ್ಷಗಾನ ಕನ್ನಡ ಭಾಷೆಗೆ ಕೊಟ್ಟ ಕೊಡುಗೆ ಅಪಾರ. ಆದರೆ ಅದು ಎಲ್ಲೂ ದಾಖಲಾಗಿಲ್ಲ. ಪ್ರತಿದಿನ ಸಾವಿರಕ್ಕೂ ಅಧಿಕ ಕಲಾವಿದರು ಐನೂರು ಗಂಟೆಗೂ ಅಧಿಕ ಕಾಲ ಶುದ್ಧ ಕನ್ನಡದಲ್ಲಿ ಸಂಭಾಷಿಸುವ ಏಕೈಕ ಜೀವಂತ ಕಲಾ ಮಾದ್ಯಮ ಯಕ್ಷಗಾನ. ಯಕ್ಷಗಾನಂ ಗೆಲ್ಗೆ, ಸಿರಿ ಗನ್ನಡಂ ಗೆಲ್ಗೆ!!

PREV
Read more Articles on
click me!

Recommended Stories

ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ
ಜನರ ವಿಶ್ವಾಸ ಕಳೆದುಕೊಂಡ ಕಾಂಗ್ರೆಸ್, ಚುನಾವಣೆಗೇ ಬನ್ನಿ: ಸರ್ಕಾರಕ್ಕೆ ಸಿ.ಟಿ.ರವಿ ಸವಾಲು