Egg Distribution in School : ಶಾಲೆಯಲ್ಲಿ ಮೊಟ್ಟೆ ಕೊಟ್ಟಿದ್ದಕ್ಕೆ ಮಗನ ಟಿಸಿ ಪಡೆದ ತಂದೆ

By Kannadaprabha News  |  First Published Dec 19, 2021, 7:42 AM IST
  • ಶಾಲೆಯಲ್ಲಿ ಮೊಟ್ಟೆ ವಿತರಣೆಗೆ ರಾಜ್ಯಾದ್ಯಂತ ಕೆಲವು ಕಡೆ ಪರ, ವಿರೋಧದ ಚರ್ಚೆ
  •  ಮಗನಿಗೆ ಮೊಟ್ಟೆ ನೀಡಿದ್ದಾರೆಂದು ಶಾಲೆಯಿಂದಲೇ ಟಿಸಿ ಪಡೆದ ತಂದೆ

 ಕೊಪ್ಪಳ (ಡಿ.19): ಶಾಲೆಯಲ್ಲಿ (School) ಮೊಟ್ಟೆ (Egg) ವಿತರಣೆಗೆ ರಾಜ್ಯಾದ್ಯಂತ ಕೆಲವು ಕಡೆ ಪರ, ವಿರೋಧದ ಚರ್ಚೆ ನಡೆಯುತ್ತಿರುವಾಗಲೇ ಇಲ್ಲೊಬ್ಬರು ಮಗನಿಗೆ ಮೊಟ್ಟೆ ನೀಡಿದ್ದಾರೆಂದು ಶಾಲೆಯಿಂದಲೇ (School) ಟಿಸಿ (TC) ಪಡೆದ ಘಟನೆ ನಗರದಲ್ಲಿ ಜರುಗಿದೆ.  ಕೊಪ್ಪಳದ (Koppal) ನಾಗರಿಕ ಹಾಗೂ ಲಿಂಗಾಯತ ಧರ್ಮ ಮಹಾಸಭಾದ ರಾಜ್ಯಾಧ್ಯಕ್ಷ ವೀರಣ್ಣ ಕೊರ್ಲಹಳ್ಳಿ ಅವರು ನಗರದ ರೈಲ್ವೆ ಸ್ಟೇಷನ್‌ ಎದುರಿಗಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ (Primery School) 1ನೇ ತರಗತಿಯಲ್ಲಿ ಓದುತ್ತಿರುವ ಮಗ ಶರಣ ಬಸವರಾಜನ ಟಿಸಿ ಪಡೆದು ಖಾಸಗಿ ಶಾಲೆಗೆ (Private School) ಸೇರಿಸಿದ್ದಾರೆ. ಈ ಕುರಿತು ಅವರೇ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ (Facebook) ಹಾಕಿಕೊಂಡಿದ್ದಾರೆ.

"

Tap to resize

Latest Videos

ನಾವೆಲ್ಲ ಮನೆಯಲ್ಲಿ ಬಸವ ಧರ್ಮದ ಆಚರಣೆ ಮಾಡುತ್ತಿದ್ದೇವೆ. ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸುತ್ತಿದ್ದೇವೆ. ಆದರೆ ಶಾಲೆಯಲ್ಲಿ (School) ಮಕ್ಕಳಿಗೆ ಮೊಟ್ಟೆ ಕೊಡುತ್ತಿರುವುದು ನಮ್ಮ ಧರ್ಮಕ್ಕೆ, ಸಂಸ್ಕೃತಿಗೆ ಅಡ್ಡಿಯುಂಟಾಗುತ್ತಿದೆ. ನನ್ನ ಮಗುವು ಮೊಟ್ಟೆ (Egg) ತಿನ್ನುವುದಿಲ್ಲ. ಎಲ್ಲ ಮಕ್ಕಳಿಗೂ ಮೊಟ್ಟೆ ಕೊಡುವಾಗ ನನ್ನ ಮಗುವು ಮೊಟ್ಟೆ ಕೊಟ್ಟರೆ ಒಂದೆರಡು ದಿನ ತಿನ್ನದೇ ಬಿಡಬಹುದು. ಬಳಿಕ ಆತನು ತಿನ್ನಲು ಆರಂಭಿಸಿ, ಮುಂದೆ ಆತನೂ ನನ್ನ ಮನೆಯಲ್ಲಿ ಮೊಟ್ಟೆ ಮಾಡಿ ಕೊಡಿ ಎಂದು ಕೇಳಿದರೆ ನಾವು ಏನು ಮಾಡಬೇಕು? ನಮ್ಮ ಸಂಸ್ಕಾರ, ಧರ್ಮದಲ್ಲಿ ಆ ರೀತಿಯ ಆಚರಣೆ ಇಲ್ಲ ಎಂದಿದ್ದಾರೆ.

ಮೊಟ್ಟೆ  ಕೊಡುವ ಯೋಜನೆ ಒಳ್ಳೆಯದು ಇರಬಹುದು. ಒಂದೇ ಮಾದರಿ ಯೋಜನೆ ತರಬೇಕು. ಒಬ್ಬರಿಗೆ ಮೊಟ್ಟೆ ಕೊಡುವುದು ಇನ್ನೊಬ್ಬರಿಗೆ ಬಾಳೆಹಣ್ಣು (Banana) ಕೊಡುವುದು ತರವಲ್ಲ. ಎಲ್ಲರಿಗೂ ಬಾಳೆಹಣ್ಣು ಕೊಡಬಹುದಿತ್ತು. ಮಕ್ಕಳಲ್ಲಿನ ಪೌಷ್ಟಿಕಾಂಶ ಹೆಚ್ಚಿಸಲು ತರಕಾರಿ ಸೊಪ್ಪು ಇವೆ. ಬೇರೆ ಪದಾರ್ಥಗಳಿವೆ. ಆ ಅಂಶ ಇರುವ ಪದಾರ್ಥಗಳನ್ನು ಕೊಡಬಹುದಿತ್ತು. ಮೊಟ್ಟೆಯನ್ನೇ ಕೊಡಬೇಕೆಂದಿಲ್ಲ. ಸರ್ಕಾರ ಏನೇ ನಿರ್ಧಾರ ಮಾಡಿದರೂ ಅದು ನಮ್ಮ ಧರ್ಮ, ಸಂಸ್ಕೃತಿಗೆ ಅಡ್ಡಿ ಬರುತ್ತಿರುವ ಹಿನ್ನೆಲೆಯಲ್ಲಿ ನಾವು ನನ್ನ ಮಗನ ಟಿಸಿ ಹಿಂಪಡೆದು ಬೇರೆ ಶಾಲೆಗೆ ದಾಖಲಿಸಿರುವೆ ಎಂದು ವೀರಣ್ಣ ಬರೆ​ದು​ಕೊಂಡಿ​ದ್ದಾ​ರೆ.

ಕನ್ನಡಾಂಬೆಯ ಅಪಾರ ಅಭಿಮಾನದಿಂದ, ಸರ್ಕಾರಿ ಶಾಲೆಯಲ್ಲಿ (Govt School) ಹಲವು ಸೌಲಭ್ಯಗಳಿವೆ ಹಾಗೂ ಕನ್ನಡ ಶಾಲೆ ಉಳಿಸಬೇಕು ಎನ್ನುವ ಕಾರಣಕ್ಕೆ ನಾನು ನನ್ನ ಮಗನನ್ನು ಜೂನ್‌ ತಿಂಗಳಲ್ಲಿ ಒಂದನೇ ತರಗತಿಗೆ ಸರ್ಕಾರಿ ಶಾಲೆಗೆ ದಾಖಲಿಸಿದ್ದೆ. ಆದರೆ ಸರ್ಕಾರವು ಶಾಲೆಯಲ್ಲಿ ಮೊಟ್ಟೆಕೊಡುವ ಯೋಜನೆ ಆರಂಭಿಸಿದ್ದರಿಂದ ನನ್ನ ಧರ್ಮ, ಸಂಸ್ಕೃತಿಗೆ ಅಡ್ಡಿಯಾಗುತ್ತಿದೆ. ಆ ಕಾರಣಕ್ಕೆ ನನ್ನ ಮಗನ ಟಿಸಿ ಹಿಂಪಡೆದು ಖಾಸಗಿ ಶಾಲೆಗೆ ದಾಖಲಿಸಿದ್ದೇನೆ.

ವೀರಣ್ಣ ಕೊರ್ಲಹಳ್ಳಿ, ಮಗನ ಟಿಸಿ ಹಿಂಪಡೆದ ಪಾಲಕ

ಸ್ವಾಮೀಜಿಗಳ ಎಚ್ಚರಿಕೆ : 

ರಾಜ್ಯದ ಕೆಲ ಜಿಲ್ಲೆಗಳಲ್ಲಿ ಮಕ್ಕಳು ಅಪೌಷ್ಟಿಕತೆಯಿಂದ(Malnutrition) ಬಳಲುತ್ತಿದ್ದಾರೆ ಎಂದು ವರದಿ ಮೂಲಕ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಬಿಸಿಯೂಟದ ಜೊತೆ ಮಕ್ಕಳಿಗೆ ಮೊಟ್ಟೆ (Egg) ಹಾಗೂ ಬಾಳೆಹಣ್ಣು(Banana) ನೀಡುವಂತೆ ಇತ್ತೀಚೆಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಆದ್ರೆ,ಇದು ಪರ-ವಿರೋಧಕ್ಕೆ ಕಾರಣವಾಗಿದೆ.
 
ಹೌದು...ಶಾಲೆಯ್ಲಲಿ ಮೊಟ್ಟೆ ಕೊಡುವ ಆದೇಶವನ್ನು ಕೂಡಲೇ ಹಿಂಪಡೆಯಬೇಕು ಕೆಲ ಸ್ವಾಮೀಜಿಗಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ(Basavaraj Bommai) ಒತ್ತಾಯಿಸಿದ್ದಾರೆ. ಶಾಲೆಯಲ್ಲಿ ಮಕ್ಕಳಿಗೆ ಕೋಳಿ ಮೊಟ್ಟೆ ಕೊಡುವ ಆದೇಶವನ್ನು ವಾಪಸ್ ಪಡೆಯಲು ಆಗ್ರಹಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಲಿಂಗಾಯತ ಧಮ೯ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾದ ಚನ್ನಬಸವಾನಂದ ಸ್ವಾಮೀಜಿ ಮನವಿ ಮಾಡಿದ್ದಾರೆ.

ಇದು ಭಾರೀ ಚೆರ್ಚೆಗೆ ಗ್ರಾಸವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಮೊಟ್ಟೆ ಬಗ್ಗೆ ಪರ-ವಿರೋಧ ವಾದಗಳು ಆಗುತ್ತಿವೆ. ಮೊಟ್ಟೆ ತಿನ್ನದವರು ಬಾಳೆಹಣ್ಣು ತಿನ್ನಬಹುದು ಎಂದು ಹೇಳುತ್ತಿದ್ರೆ, ಇನ್ನೂ ಕೆಲವರು ಮೊಟ್ಟೆ ಬದಲಿಗೆ ಮೊಳಕೆ ಕಾಳು ಕೊಡಲಿ ಎಂದು ಹೇಳುತ್ತಿದ್ದಾರೆ. 

ಹೋರಾಟಕ್ಕೆ ಮಠಾಧೀಶರ ತೀರ್ಮಾನ
ಶಾಲಾ‌ ಮಕ್ಕಳಿಗೆ ಮೊಟ್ಟೆ ವಿತರಣೆ ಆದೇಶವನ್ನು ವಾಪಸ್ ಪಡೆಯದಿದ್ದಲ್ಲಿ ಹೋರಾಟ ನಡೆಸಲು ಮಠಾಧೀಶರ ಸಭೆಯಲ್ಲಿ ನಿರ್ಧರಿಸಲಾಗಿದೆ. ಧಾರವಾಡದಲ್ಲಿ ನಡೆದ ಮಠಾಧೀಶರ ಸಭೆಯಲ್ಲಿ ಆದೇಶ ವಾಪಸ್‌ಗೆ ಸರ್ಕಾರಕ್ಕೆ ಆಗ್ರಹಿಸಿ ನಿರ್ಣಯ ಕೈಗೊಳ್ಳಲಾಗಿದೆ. 

ಇಂದು (ಡಿ.04) ಧಾರವಾಡದಲ್ಲಿ ಬಸವ ಧರ್ಮ ಪೀಠ ಅಡಿಯ ಆರು ಪೀಠಾಧಿಪತಿಗಳ ನೇತೃತ್ವದಲ್ಲಿ ಅಕ್ಕಮಹಾದೇವಿ ಅನುಭಾವ ಪೀಠದಲ್ಲಿ ಸಭೆ ನಡೆಸಲಾಯಿತು. ಹದಿನೈದಕ್ಕೂ ಹೆಚ್ಚು ಮಠಾಧೀಶರು ಭಾಗಿಯಾಗಿದ್ದರು. ಕೂಡಲ ಸಂಗಮ ಬಸವ ಧರ್ಮಪೀಠದ ಶ್ರೀ ಗಂಗಾದೇವಿ ಮಾತಾಜಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಮೊಟ್ಟೆ ವಿತರಿಸುವ ಆದೇಶ ವಾಪಸ್ ಪಡೆಯುವಂತೆ ಸರ್ಕಾರಕ್ಕೆ ಆಗ್ರಹಿಸಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಆದೇಶ ವಾಪಸ್ ಪಡೆಯದಿದ್ದಲ್ಲಿ ಮುಂದೆ ಹೋರಾಟ ನಡೆಸಲು ತೀರ್ಮಾನಿಸಲಾಗಿದೆ.

click me!